Kannada Beatz
News

ಕನ್ನಡ ಚಿತ್ರರಂಗಕ್ಕೆ ಹೊಸ ಚೈತನ್ಯ ತುಂಬಿದ ‘ಕರಾವಳಿ’ ಫಸ್ಟ್ ಡೇ ಕಲೆಕ್ಷನ್


ಈ ವರ್ಷ ಕನ್ನಡದ ಗ್ರೇಟ್ ಓಪೆನಿಂಗ್ ಪಡೆದ ಸಿನಿಮಾಗಳ ಲಿಸ್ಟ್‌ನಲ್ಲಿ ಕರಾವಳಿ..
ಕರಾವಳಿ ಸಿನಿಮಾಗೆ ಹೆಚ್ಚಾದ ಡಿಮ್ಯಾಂಡ್; ಸ್ಚ್ರೀನ್‌ಗಳ ಸಂಖ್ಯೆ ಜಾಸ್ತಿ ಮಾಡಿದ ಚಿತ್ರತಂಡ

ಗುರುದತ್ ಗಾಣಿಗ ನಿರ್ದೇಶನದ ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ ಶೆಟ್ಟಿ ನಟನೆಯ ‘ಕರಾವಳಿ’ ಸಿನಿಮಾ ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕಂಬಳದ ಅದ್ಭುತ ಪ್ರಪಂಚವನ್ನು ಕಣ್ತುಂಬಿಕೊಂಡ ಕನ್ನಡ ಸಿನಿಪ್ರಿಯರು ಕರಾವಳಿ ಸಿನಿಮಾಗೆ ಭರಪೂರ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ


ಕರಾವಳಿ ಸಿನಿಮಾದಿಂದ ರಾಜ್ಯಾಂದ ಚಿತ್ರಮಂದಿರಗಳು ತುಂಬುತ್ತಿರುವುದು ಖುಷಿಯ ವಿಚಾರ. ಜುಲೈ 24ಕ್ಕೆ ರಿಲೀಸ್ ಆದ ಕರಾವಳಿ 175 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ಆದರೀಗ ಸಿನಿಮಾಗೆ ಸಿಗುತ್ತಿರುವ ಅದ್ಭುತ ಪ್ರತಿಕ್ರಿಯೆ ಹಾಗೂ ಹೌಸ್ ಫುಲ್ ಪ್ರದರ್ಶನ ಕಂಡು ಮತ್ತಷ್ಟು ಸ್ಟ್ರೀನಿಂಗ್ ಜಾಸ್ತಿ ಮಾಡಲಾಗಿದೆ. 2ನೇ ದಿನ 25ಕ್ಕೂ ಸ್ಟ್ರೀನ್‌ಗಳು ಹೆಚ್ಚಾಗಿರುವುದು ಕನ್ನಡ ಸಿನಿಮಾರಂಗದ ಮಟ್ಟಿಗಿದು ನಿಜಕ್ಕೂ ಸಂತಸತ ವಿಚಾರ.
ಮೊದಲ ದಿನ ಕರಾವಳಿ 1 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನುವ ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಕನ್ನಡ ಸಿನಿಮಾರಂಗದ ಈಗಿನ ಪರಿಸ್ಥಿತಿಗೆ ಇದು ಅತೀ ದೊಡ್ಡ ಕಲೆಕ್ಷನ್ ಅಂದರೆ ತಪ್ಪಾಗಲ್ಲ. ಈ ವರ್ಷ ಕನ್ನಡದಲ್ಲಿ ರಿಲೀಸ್ ಆದ ಸಿನಿಮಾಗಳಲ್ಲಿಯೇ ಉತ್ತಮ ಓಪನಿಂಗ್ ಪಡೆದುಕೊಂಡ ಚಿತ್ರಗಳೆಂದರೆ ಲವ್ ಮಾಕ್‌ಟೇಲ್ 3 ಮತ್ತು KD. ಆದರೀಗ ಈ ಎರಡು ಸಿನಿಮಾಗಳಿಂದ ಈಗ ಕರಾವಳಿ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ ಹಾಗೂ ಹೆಚ್ಚು ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಮುನ್ನುಗ್ಗುತ್ತಿದೆ. ಇನ್ನು ಇವತ್ತು ಮತ್ತು ನಾಳೆ ವೀಕೆಂಡ್ ಇರುವುದರಿಂದ ಕಲೆಕ್ಷನ್ ದುಪ್ಪಟ್ಟು ಆಗುವ ನಿರೀಕ್ಷೆ ಇದೆ.
ಕರಾವಳಿ ರಿಲೀಸ್ ಆದ 2ನೇ ದಿನಕ್ಕೆ ಬುಕ್ ಮೈ ಶೋನಲ್ಲಿ ಗಂಟೆಗೆ 2ಸಾವಿರಕ್ಕೂ ಅಧಿಕ ಟಿಕೆಟ್ಸ್ ಬುಕ್ ಆಗುತ್ತಿದೆ. ಇದು ಕರಾವಳಿ ಸಿನಿಮಾ ಕಣ್ತುಂಬಿಕೊಳ್ಳಬೇಕು ಎನ್ನುವವರ ಹಂಬಲ ಜಾಸ್ತಿಯಾಗುತ್ತಿದೆ ಎನ್ನುವುದಕ್ಕೆ ಸಾಕ್ಷಿ. ಕನ್ನಡ ಅಭಿಮಾನಿಗಳಿಂದ ಸಿಕ್ತಿರುವ ಪ್ರತಿಕ್ರಿಯೆ ನೋಡಿ ಸಿನಿಮಾತಂಡ ಕೂಡ ಖುಷಿಯಾಗಿದೆ. ಇದು ಕನ್ನಡ ಚಿತ್ರರಂಗಕ್ಕೆ ಹೊಸ ಚೈತನ್ಯ ಬಂದಂತೆ ಆಗಿದೆ.
ಕರಾವಳಿ ಸದ್ಯ ಕರ್ನಾಟಕದಲ್ಲಿ ಮಾತ್ರ ರಿಲೀಸ್ ಮಾಡಲಾಗಿದೆ. ಸಿನಿಮಾ ಸಿಕ್ತಿರುವ ಪ್ರತಿಕ್ರಿಯೆ ನೋಡಿ ಪರಭಾಷೆಯಲ್ಲೂ ಬೇಡಿಕೆ ಹೆಚ್ಚಾಗಿದೆ ಎನ್ನುವ ಮಾತು ಕೇಳಿಬಂದಿದೆ. ಮುಂದಿನ ವಾರ ಪಕ್ಕದ ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲೂ ರಿಲೀಸ್ ಸಾಧ್ಯತೆ ಹೆಚ್ಚಾಗಿದೆ.

Related posts

ಡೊಳ್ಳು ಸಿನಿಮಾಗೆ ಸಾಥ್ ಕೊಟ್ಟ ರಾಜರತ್ನ ಫ್ಯಾನ್ಸ್…ಇದೇ ಶುಭ ಶುಕ್ರವಾರ ತೆರೆಗೆ ಬರ್ತಿದೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾ

Kannada Beatz

ಸಿನಿರಸಿಕರಿಗೆ ಮನೋರಂಜನೆಯ “ಫುಲ್ ಮೀಲ್ಸ್” ನೀಡಲಿದ್ದಾರೆ ಲಿಖಿತ್ ಶೆಟ್ಟಿ .

Kannada Beatz

ಫೇ.28ಕ್ಕೆ ಆದಿ ಪಿನಿಶೆಟ್ಟಿ ನಟನೆಯ ‘ಶಬ್ದ’ ಚಿತ್ರ ಬಿಡುಗಡೆ!

Kannada Beatz

Leave a Comment

Share via
Copy link
Powered by Social Snap