Kannada Beatz
News

ಪ್ರಿಯಾಂಕ ಉಪೇಂದ್ರ ಅಭಿನಯದ 50ನೇ ಚಿತ್ರ ‘ಡಿಟೆಕ್ಟಿವ್ ತೀಕ್ಷ್ಣ’ ಟ್ರೇಲರ್ ಎಸ್‌ಆರ್‌ವಿ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ಬಿಡುಗಡೆ

. ಇವೆಂಟ್ ಲಿಂಕ್ಸ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿರುವ ಈ ಚಿತ್ರಕ್ಕೆ ತ್ರಿವಿಕ್ರಮ ರಘು ಕಥೆ, ಸಂಭಾಷಣೆ ಹಾಗೂ ನಿರ್ದೇಶನ ಮಾಡಿದ್ದಾರೆ. ಬುದ್ಧಿಶಕ್ತಿ ಮತ್ತು ದುಷ್ಟತನದ ನಡುವಿನ ಪೈಪೋಟಿಯನ್ನು ಥ್ರಿಲ್ಲಿಂಗ್ ಶೈಲಿಯಲ್ಲಿ ಹೇಳುವ ಕಥೆಯಿದು ಎಂದು ನಿರ್ದೇಶಕರು ತಿಳಿಸಿದರು. ಉಪೇಂದ್ರ ಅವರ ಸಲಹೆಯ ಮೇರೆಗೆ ಚಿತ್ರದ ಶೀರ್ಷಿಕೆ ಇಡಲಾಗಿದ್ದು, ಸೆನ್ಸಾರ್ ಮಂಡಳಿ ಯಾವುದೇ ಕತ್ತರಿ ಹಾಕದೆ ಚಿತ್ರವನ್ನು ಮೆಚ್ಚಿದೆ ಎಂದರು.

ಪ್ರಿಯಾಂಕ ಉಪೇಂದ್ರ ಮಾತನಾಡಿ, ತಮ್ಮ ವೃತ್ತಿಜೀವನದ 50ನೇ ಚಿತ್ರವಾಗಿ ಇಂತಹ ವಿಭಿನ್ನ ಕಥೆಯಲ್ಲಿ ನಟಿಸಿರುವುದು ಸಂತಸ ತಂದಿದೆ ಎಂದರು. ದೈಹಿಕ ಶಕ್ತಿಗಿಂತ ಬುದ್ಧಿವಂತಿಕೆಗೆ ಹೆಚ್ಚಿನ ಮಹತ್ವ ನೀಡುವ ಪಾತ್ರ ಇದಾಗಿದ್ದು, ವಿಶೇಷವಾಗಿ ಯುವತಿಯರಿಗೆ ಸ್ಫೂರ್ತಿಯಾಗಲಿದೆ ಎಂದು ಹೇಳಿದರು. ಚಿತ್ರದ ಕ್ಯಾಮೆರಾ ವರ್ಕ್, ಕಲಾ ನಿರ್ದೇಶನ ಮತ್ತು ಸಂಗೀತ ಹಾಲಿವುಡ್ ಮಟ್ಟದ ಅನುಭವ ನೀಡಲಿದ್ದು, ಆಗಸ್ಟ್ ಮೊದಲ ವಾರದಲ್ಲಿ ಸುಗೂರು ಕುಮಾರ್ ವಿತರಣೆ ಮೂಲಕ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದರು.

Related posts

ಡಾರ್ಲಿಂಗ್ ಕೃಷ್ಣ ಬಿಡುಗಡೆ ಮಾಡಿದರು “ಯಾರಿಗೆ ಬೇಕು ಈ ಲೋಕ” ಚಿತ್ರದ ಫಸ್ಟ್ ಲುಕ್.

administrator

ಚಿತ್ರೀಕರಣ ಮುಕ್ತಾಯ ಹಂತದಲ್ಲಿ “ದಿ ಎಂಡ್” .

Kannada Beatz

ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ARM’ ಸಿನಿಮಾ

Kannada Beatz

Leave a Comment

Share via
Copy link
Powered by Social Snap