Kannada Beatz
News

ಡಿಸೆಂಬರ್ 17ರಂದು ಓಟಿಟಿಯಲ್ಲಿ “ಕನ್ನಡಿಗ” ನ ಆಗಮನ.

ಡಾ||ರವಿಚಂದ್ರ. ವಿ ನಾಯಕರಾಗಿ ನಟಿಸಿರುವ ಈ ಚಿತ್ರಕ್ಕೆ ಬಿ.ಎಂ.ಗಿರಿರಾಜ್ ನಿರ್ದೇಶನ.‌

ಕ್ರೇಜಿಸ್ಟಾರ್ ಡಾ||ರವಿಚಂದ್ರ.ವಿ ನಾಯಕರಾಗಿ ನಟಿಸಿರುವ “ಕನ್ನಡಿಗ” ಚಿತ್ರ ಡಿಸೆಂಬರ್ 17ರಂದು ಜೀ ಸಿನಿಮಾ ಕನ್ನಡ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ.

ಪೀರಿಯಡ್ ಡ್ರಾಮ ಕಥಾಹಂದರ ಹೊಂದಿರುವ ಈ ಚಿತ್ರವನ್ನು “ಜಟ್ಟ”,
“ಮೈತ್ರಿ” ಚಿತ್ರಗಳ ಖ್ಯಾತಿಯ ಬಿ.ಎಂ.ಗಿರಿರಾಜ್ ನಿರ್ದೇಶಿಸಿದ್ದಾರೆ. ರಚನೆ ಕೂಡ ಗಿರಿರಾಜ್ ಅವರದೆ.

ಓಂಕಾರ್ ಮೂವೀಸ್ ಲಾಂಛನದಲ್ಲಿ ಎನ್.ಎಸ್.ರಾಜಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಜಿ.ಎಸ್.ವಿ.ಸೀತಾರಾಂ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಹೊಸ್ಮನೆ ಮೂರ್ತಿ ಕಲಾ‌ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ ‌ಸಾಹಸ ನಿರ್ದೇಶನ‌ ಈ ಚಿತ್ರಕ್ಕಿದೆ‌.

ಡಾ||ರವಿಚಂದ್ರ.ವಿ, ಪಾವನ, ಜೀವಿಕ, ಜಮ್ಮಿ ಅಲ್ಟರ್, ಬಾಲಾಜಿ ‌ಮನೋಹರ್,‌ ರಾಕ್ ಲೈನ್ ವೆಂಕಟೇಶ್, ಶೃಂಗ, ಮೈತ್ರಿ ಜಗ್ಗ ಮುಂತಾದವರು “ಕನ್ನಡಿಗ” ಚಿತ್ರದಲ್ಲಿ ಅಭಿನಯಿಸಿದ್ದಾರೆ.

Related posts

ಅಭಿರಾಮಚಂದ್ರ’ ತಂಡದ ಮತ್ತೊಂದು ಪ್ರಯತ್ನ…’ದಿಂಸೋಲ್’ ಫಸ್ಟ್ ಲುಕ್ ಬಿಡುಗಡೆ

Kannada Beatz

ಇನ್‌ಸ್ಟಂಟ್ ಕರ್ಮ ಫಸ್ಟ್ ಲುಕ್ ಪೋಸ್ಟರ್ ಜನವರಿ 28ಕ್ಕೆ

Kannada Beatz

ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗಮನ ಸೆಳೆಯುತ್ತಿದೆ ಹೊಸಬರ ‘ನೈನಾ’ ಸಿನಿಮಾ

Kannada Beatz

Leave a Comment

Share via
Copy link
Powered by Social Snap