HomeNewsಕೋಟಿಜನರ ಮನಮುಟ್ಟಿದೆ "ಜ್ಯೂಲಿಯೆಟ್ 2" ಚಿತ್ರದ ಬಾಂಧವ್ಯದ ಹಾಡು.

ಕೋಟಿಜನರ ಮನಮುಟ್ಟಿದೆ “ಜ್ಯೂಲಿಯೆಟ್ 2” ಚಿತ್ರದ ಬಾಂಧವ್ಯದ ಹಾಡು.

ಪ್ರಪಂಚದಲ್ಲಿ ಎಲ್ಲಾ ಪ್ರೀತಿಗಿಂತ ಹೆತ್ತವರ ಪ್ರೀತಿ ದೊಡ್ಡದು. ಆ ಪ್ರೀತಿಯ ಬಗ್ಗೆ ಎಷ್ಡ ಹೇಳಿದರೂ ಕಡಿಮೆ. ಅದರಲ್ಲೂ ತಾಯಿಗೆ ಮಗನ‌ ಮೇಲೆ, ತಂದೆಗೆ ಮಗಳ ಮೇಲೆ ಮಮತೆ ಹೆಚ್ಚು ಎನ್ನುವುದು ವಾಡಿಕೆ.

ವಿಭಿನ್ನ ಕಥಾಹಂದರ ಹೊಂದಿರುವ “ಜ್ಯೂಲಿಯೆಟ್ 2” ಚಿತ್ರಕ್ಕಾಗಿ ಸುಕೀರ್ತ್ ಶೆಟ್ಟಿ ತಂದೆ – ಮಗಳ ಬಾಂಧವ್ಯ ಸಾರುವ “ಕರುಳ ಬಳ್ಳಿಯ ನೋವಿನಲಿ ತಾಯಿಯ ಮಮತೆ ಲಾಲಿ ಹಾಡುತ್ತೆ. ಬೆವರ ಹನಿಯ ಒಡಲಿನಲಿ ತಂದೆಯ ಸಹನೆ ಲಾಲಿ ಹಾಡುತ್ತೆ” ಎಂಬ ಹಾಡನ್ನು ಬರೆದಿದ್ದಾರೆ. ಈ ಹಾಡು ಈಗಾಗಲೇ ಬಿಡುಗಡೆಯಾಗಿದ್ದು, ಕೋಟಿಜನರು ಈ ಹಾಡನ್ನು ವೀಕ್ಷಿಸಿದ್ದಾರೆ. ಸಂದೀಪ್ ಆರ್ ಬಲ್ಲಾಳ್ ಸಂಗೀತ ನೀಡಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ಮಲ್ಲಿಕಾ ಮಟ್ಟಿ ಈ ಹಾಡನ್ನು ಇಂಪಾಗಿ ಹಾಡಿದ್ದಾರೆ. ಮಗಳ ಪಾತ್ರದಲ್ಲಿ ರಕ್ಷಿತಾ ಬೋಳಾರ್ ಹಾಗೂ ತಂದೆಯ ಪಾತ್ರದಲ್ಲಿ ಲಕ್ಷ್ಮೀಶ್ ಭಟ್ ಅಭಿನಯಿಸಿದ್ದಾರೆ. ಇತ್ತೀಚೆಗೆ ಅಶ್ವಿನಿ ಪುನೀತ್ ರಾಜಕುಮಾರ್ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ್ದರು. ಟೀಸರ್ ಎಲ್ಲರ ಮನ ಗೆದ್ದಿದೆ. ಫೆಬ್ರವರಿ 14 ರಂದು ಟ್ರೇಲರ್ ಬಿಡುಗಡೆಯಾಗಲಿದೆ. ಫೆಬ್ರವರಿ 24 ರಂದು ಚಿತ್ರ ತೆರೆಗೆ ಬರಲಿದೆ.

Pl production & Virat motion picture ಲಾಂಛನದಲ್ಲಿ ಲಿಖಿತ್ ಆರ್ ಕೋಟ್ಯಾನ್ ನಿರ್ಮಾಣ ಮಾಡಿರುವ “ಜ್ಯೂಲಿಯೆಟ್ 2” ಚಿತ್ರವನ್ನು ವಿರಾಟ್ ಬಿ ಗೌಡ ನಿರ್ದೇಶಿಸಿದ್ದಾರೆ.

“ಪ್ರೇಮಂ ಪೂಜ್ಯಂ” ಖ್ಯಾತಿಯ ಬೃಂದಾ ಆಚಾರ್ಯ ಪ್ರಮುಖಪಾತ್ರದಲ್ಲಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಅನೂಪ್ ಸಾಗರ್, ಖುಷ್ ಆಚಾರ್ಯ, ರವಿ, ರಾಧೇಶ್ ಶೆಣೈ, ಶ್ರೀಕಾಂತ್, ರಾಯ್, ರಕ್ಷಿತಾ ಬೋಳಾರ್, ಲಕ್ಷ್ಮೀಶ್ ಭಟ್, ಮುಂತಾದವರಿದ್ದಾರೆ.

ಸಚಿನ್ ಬಸ್ರೂರ್ ಅವರ ಬಿ.ಜಿ.ಎಂ ಹಾಗೂ shanto v anto ಅವರ ಛಾಯಾಗ್ರಹಣ ಚಿತ್ರದ ಹೈಲೆಟ್ ಎಂದರೆ ತಪ್ಪಾಗಲಾರದು.

ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ರಿಲಯನ್ಸ್ ಎಂಟರ್ಟೈನ್ಮೆಂಟ್ ಮೂಲಕ ಬಿಡುಗಡೆಯಾಗಲಿದೆ.

Must Read

spot_img
Share via
Copy link
Powered by Social Snap