Kannada Beatz
CelebritiesNews

ನಟ ವಿನೋದ್ ಪ್ರಭಾಕರ್ ಅವರೊಂದಿಗೆ ವಿಶೇಷ ಪಾತ್ರದಲ್ಲಿ ಲೂಸ್ ಮಾದ ಯೋಗಿ

ಕಳೆದವರ್ಷ ತೆರೆಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ
“ರಾಬರ್ಟ್” ಚಿತ್ರದಲ್ಲಿ ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಅವರ ಹೊಸಲುಕ್ ಗೆ ಅಭಿಮಾನಿಗಳು ಫಿದಾ‌ ಆಗಿದ್ದರು.

ತಮ್ಮ ನಟನೆಯ ಮೂಲಕ ಜನಮನಸೂರೆಗೊಂಡಿರುವ ವಿನೋದ್ ಪ್ರಭಾಕರ್ ಈಗ ನಿರ್ಮಾಪಕರಾಗಿದ್ದಾರೆ. ತಮ್ಮ ನಿರ್ಮಾಣದ ಮೊದಲ ಹೆಜ್ಜೆಯಾಗಿ‌ “ಲಂಕಾಸುರ” ಚಿತ್ರವನ್ನು ನಿರ್ಮಿಸುತ್ತಿದ್ದಾರೆ.‌ ವಿನೋದ್ ಪ್ರಭಾಕರ್ ರವರ ಶ್ರೀಮತಿ ನಿಶಾ ವಿನೋದ್ ಪ್ರಭಾಕರ್ ರವರು ಈ ಚಿತ್ರದ ನಿರ್ಮಾಪಕರು .

ತಮ್ಮ ನಿರ್ಮಾಣ ಸಂಸ್ಥೆಗೆ “ಟೈಗರ್ ಟಾಕಿಸ್” ಎಂಬ ಹೆಸರಿಟ್ಟರುವ ವಿನೋದ್ ಪ್ರಭಾಕರ್ ರವರು ತಮ್ಮ ತಂದೆ ಟೈಗರ್ ಪ್ರಭಾಕರ್ ಅವರನ್ನು ‌ಸ್ಮರಿಸಿಕೊಂಡು ಹೊಸಹೆಜ್ಜೆ ಇಟ್ಟಿದ್ದಾರೆ.

ವಿನೋದ್ ‌ಪ್ರಭಾಕರ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ವಿಶೇಷ ಪಾತ್ರದಲ್ಲಿ ಲೂಸ್ ಮಾದ ಯೋಗಿ ಅಭಿನಯಿಸುತ್ತಿದ್ದಾರೆ . ಇದು ಇವರಿಬ್ಬರು ಒಟ್ಟಾಗಿ ಅಭಿನಯಿಸುತ್ತಿರುವ ಮೊದಲ ಚಿತ್ರ. ದೇವರಾಜ್, ರವಿಶಂಕರ್ ಮುಂತಾದವರ ತಾರಾಬಳಗ ಸಹ ಈ ಚಿತ್ರದಲ್ಲಿದೆ.

ಆಕ್ಷನ್ ಕಥಾಹಂದರದ ಈ ಚಿತ್ರವನ್ನು ಪ್ರಮೋದ್ ಕುಮಾರ್ ಡಿ ಎಸ್ ನಿರ್ದೇಶಿಸುತ್ತಿದ್ದಾರೆ. ಡಿರ್ಫೆಂಟ್ ಡ್ಯಾನಿ, ವಿ‌ನೋದ್, ಕುಂಪ್ಫು ಚಂದ್ರು, ಅರ್ಜುನ್ ರಾಜ್ ಹಾಗೂ ಚೇತನ್ ಡಿಸೋಜ ಸಾಹಸ ನಿರ್ದೇಶನ ಮಾಡಿದ್ದಾರೆ .
ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ವಿಜೇತ್ ಕೃಷ್ಣ ಸಂಗೀತ ನೀಡಿದ್ದಾರೆ. ಭರ್ಜರಿ ಚೇತನ್ ಗೀತರಚನೆ ಮಾಡಿದ್ದಾರೆ.
ಸಿದ್ಲಿಂಗು, ಜಯಮ್ಮನ ಮಗ ಹಾಗೂ ಐ ಲವ್ ಯು ಮುಂತಾದ ಜನಪ್ರಿಯ ಚಿತ್ರಗಳಿಗೆ ಛಾಯಾಗ್ರಹಕರಾಗಿ ಕಾರ್ಯನಿರ್ವಹಿಸಿರುವ ಸುಜ್ಞಾನ್(ಜ್ಞಾನ ಮೂರ್ತಿ) ಈ ಚಿತ್ರಕ್ಕೂ ಛಾಯಾಗ್ರಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುರಳಿ, ಮೋಹನ್ ರವರ ನೃತ್ಯ ನಿರ್ದೇಶನ ಹಾಗೂ ದೀಪು ಎಸ್ ಕುಮಾರ್ ರವರ ಸಂಕಲನ ಈ ಚಿತ್ರಕ್ಕಿದೆ.

ಬೆಂಗಳೂರಿನಲ್ಲಿ ಈ ಚಿತ್ರದ ಚಿತ್ರೀಕರಣವು ಬಿರುಸಿನಿಂದ ಸಾಗಿದೆ.

Related posts

ಅಣ್ಣ-ತಂಗಿಯರ ಬಾಂಧವ್ಯದ ಹಾಡು ಸೋಲ್ ಆಫ್ ಬೆಂಕಿ…ಚೈತ್ರಾ ಆಚಾರ್ ಕಂಠದಲ್ಲಿ ಕೇಳಿ ಮನಮುಟ್ಟುವ ಗೀತೆ

Kannada Beatz

“ಅಮೄತ ಅಪಾರ್ಟ್ಮಮೆಂಟ್ಸ್” ತಂಡದಿಂದ, “ಶುರುವಾಗಬೇಕು ಮತ್ತೊಮ್ಮೆ ನಮ್ಮ ಒಲವು” ಎಂಬ ಪ್ರೇಮಗೀತೆಯನ್ನು ಯುಟ್ಯೂಬ್ ಛಾನಲ್ ಮುಖಾಂತರ ಬಿಡುಗಡೆ ಮಾಡಿದೆ.

administrator

ಖ್ಯಾತ ಹಿನ್ನೆಲೆ ಗಾಯಕಿ ಶ್ರೀಮತಿ ಮಂಜುಳಾ ಗುರುರಾಜ್ ಅವರ ಸಾಧನಾ ಸಂಗೀತ ಶಾಲೆಗೆ 30 ವರ್ಷತುಂಬಿದ ಹರ್ಷ,

administrator

Leave a Comment

Share via
Copy link
Powered by Social Snap