Kannada Beatz
News

ಕೆವಿಎನ್ ಪ್ರೊಡಕ್ಷನ್ ನಿಂದ “ಜನ ನಾಯಗನ್” ಬರ್ತಡೆ ಪೋಸ್ಟರ್ ಬಿಡುಗಡೆ

ನಟ ದಳಪತಿ ವಿಜಯ್ ರವರ 51ನೇ ಹುಟ್ಟುಹಬ್ಬಕ್ಕೆ “ಜನ ನಾಯಗನ್” ಚಿತ್ರದ ಮೊದಲ ನೋಟ ಬಿಡುಗಡೆ ಮಾಡಿದೆ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ.

ಇಡೀ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ದೊಡ್ಡ ಚಾಪನ್ನ ಮೂಡಿಸಿರುವಂತಹ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್. ಈ ಸಂಸ್ಥೆಯ ಮುಖ್ಯಸ್ಥರಾದ ವೆಂಕಟ್. ಕೆ . ನಾರಾಯಣ್ ಎಲ್ಲಾ ಭಾಷೆಗಳಲ್ಲೂ ಚಿತ್ರ ನಿರ್ಮಾಣವ ಮಹಾದಾಸೆ ಹೊಂದಿದ್ದಾರೆ. ಅದರಲ್ಲೂ ದಕ್ಷಿಣ ಭಾರತದ ಚಿತ್ರಗಳಿಗೆ ದೊಡ್ಡ ಸಾಥ್ ನೀಡುತ್ತಿರುವ ಈ ಸಂಸ್ಥೆಯಿಂದ ಅದ್ದೂರಿಯಾಗಿ ಚಿತ್ರಗಳು ಮೂಡಿ ಬರಬೇಕು ಅನ್ನೋದು ಕೆವಿಎನ್ ಪ್ರೊಡಕ್ಷನ್ಸ್ ಒನ್ ಲೈನ್ ಅಜೆಂಡಾ. ಹಾಗೆಯೇ ಸಿನಿಮಾ ನೋಡುವ ಪ್ರೇಕ್ಷಕರಿಗೆ ಯಾವುದೇ ಮೋಸ ಆಗದಂತೆ ಅದ್ದೂರಿ ಆದಂತಹ ಚಿತ್ರ ನೀಡುವ ಆಸೆ ಈ ಸಂಸ್ಥೆಯದು.

ಈಗಾಗಲೇ ಸ್ಯಾಂಡಲ್ವುಡ್ ಸೇರಿದಂತೆ ಬಾಲಿವುಡ್‌ , ಟಾಲಿವುಟ್‌‌ ಹಾಗೂ ಕಾಲಿವುಡ್‌ ಸಿನಿಮಾಗಳನ್ನ ನಿರ್ಮಿಸುತ್ತಿದೆ. ಈಗ ಮತ್ತೆ ಅದ್ದೂರಿಯಾಗಿ ದಳಪತಿ ವಿಜಯ್ ಕೊನೆಯ ಚಿತ್ರ ‘ಜನ ನಾಯಗನ್’ ನಿರ್ಮಿಸುತ್ತಿದೆ. ಕಾಲಿವುಡ್ ಸ್ಟಾರ್‌ ನಟ ದಳಪತಿ ವಿಜಯ್ ರವರ 69ನೇ ಚಿತ್ರವಾಗಿದೆ. ಈಗ ನಟ ವಿಜಯ್ ಸಿನಿಮಾಗಿಂತಲೂ ರಾಜಕೀಯದ ಕಡೆ ಹೆಚ್ಚಾಗಿ ಗಮನ ಹರಿಸುತ್ತಿದ್ದಾರೆ. ತಮ್ಮದೇ ಹೊಸ ಪಕ್ಷ ಸ್ಥಾಪಿಸಿಕೊಂಡು ರಾಜಕೀಯಕ್ಕೆ ಧುಮುಕಿದ್ದಾರೆ. ಹಾಗಾಗಿ ಚಿತ್ರರಂಗಕ್ಕೆ ಗುಡ್‌ ಬೈ ಹೇಳಿಲಿದ್ದಾರೆ. ಅವರು ನಟಿಸಿರುವ ಕೊನೇ ಸಿನಿಮಾ ‘ಜನ ನಾಯಗನ್’ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ. ಈ ಚಿತ್ರವು 2026 ಜನವರಿ 15ಕ್ಕೆ , ಅದು ವಿಶೇಷವಾಗಿ ತಮಿಳುನಾಡಿನಲ್ಲಿ ಪೊಂಗಲ್ ಸಂಭ್ರಮದ ದಿನ ಅದ್ದೂರಿಯಾಗಿ ಚಿತ್ರ ತೆರೆಯ ಮೇಲೆ ಬರಲಿದೆ.

ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ವೆಂಕಟ್. ಕೆ. ನಾರಾಯಣ ನಿರ್ಮಾಣದ ಈ ಹೈ ಬಜೆಟ್ “ಜನ ನಾಯಗನ್” ಚಿತ್ರಕ್ಕೆ ಅದ್ದೂರಿ ಸೆಟ್ಟಗಳನ್ನ ಹಾಕಲಾಗಿದೆಯಂತೆ. ಈ ಚಿತ್ರದಲ್ಲಿ ಹಲವಾರು ವಿಶೇಷತೆಗಳು ಒಳಗೊಂಡಿದ್ದು, ಸಿನಿಮಾ ನೋಡಿ ಎದ್ದು ಹೊರಬರುವ ಪ್ರೇಕ್ಷಕನ ಮನದಲ್ಲಿ ಮತ್ತೊಮ್ಮೆ ಸಿನಿಮಾ ನೋಡಬೇಕು ಎನ್ನುವಷ್ಟರ ಮಟ್ಟಿಗೆ ಸಿನಿಮಾ ಮೂಡಿ ಬರಲಿದೆ ಎನ್ನುತ್ತಿದೆ ಕೆವಿಎನ್ ಪ್ರೊಡಕ್ಷನ್ಸ್. ದಳಪತಿ ವಿಜಯ್ ನಟನೆಯ 69ನೇ ಚಿತ್ರ ಇದಾಗಿದ್ದು, ದೊಡ್ಡ ಬಜೆಟ್ನಲ್ಲಿ ವೆಂಕಟ್. ಕೆ .ನಾರಾಯಣ ಯಾವುದೇ ಕೊರತೆ ಇಲ್ಲದಂತೆ ಅದ್ದೂರಿಯಾಗಿ ಚಿತ್ರ ಬರಲು ಬಂಡವಾಳ ಹೂಡಿದ್ದಾರೆ. ಈಗ ಈ “ಜನ ನಾಯಗನ್” ಚಿತ್ರದ ಮೊದಲ ನೋಟ ದಳಪತಿ ವಿಜಯ್ ಹುಟ್ಟುಹಬ್ಬಕ್ಕೆ ಹೊರ ತರುತ್ತಿದ್ದು , ಅಭಿಮಾನಿಗಳಲ್ಲಿ ಖುಷಿ , ಸಂಭ್ರಮ ಜೋರಾಗಿದೆ.

“ಜನ ನಾಯಗನ್” ಚಿತ್ರದ ಮೊದಲ ಗ್ಲಿಮ್ಸ್ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು , ನಟ ದಳಪತಿ ವಿಜಯ್ ಅಭಿನಯದ ಲುಕ್ ಭರ್ಜರಿಯಾಗಿ ಸದ್ದು ಮಾಡಲಿದೆಯಂತೆ. ವಿಜಯ್ ಅಭಿಮಾನಿಗಳಷ್ಟೆ ಅಲ್ಲದೆ ಇಡೀ ದಕ್ಷಿಣ ಭಾರತ ಕಾಯುತ್ತಿದೆ. ಕೆವಿಎನ್ ಸಂಸ್ಥೆ ನಿರ್ಮಾಣದ ಈ ಚಿತ್ರವನ್ನು ಹೆಚ್ . ವಿನೋತ್ ನಿರ್ದೇಶಿಸಿ ಅನಿರುದ್ದ್ ರವಿಚಂದರ್ ಸಂಗೀತ ನೀಡುತ್ತಿದ್ದು , ಕೋಟ್ಯಾನು ಕೋಟಿ ದಳಪತಿ ವಿಜಯ್ ಅಭಿಮಾನಿಗಳ ಹೃದಯ ಗೆಲ್ಲೋದ್ರಲ್ಲಿ ನೋ ಡೌಟ್ ಎಂದಿದ್ದಾರೆ ನಿರ್ಮಾಪಕ ವೆಂಕಟ್. ಕೆ. ನಾರಾಯಣ. ಈ “ಜನನಾಯಗನ್” ಚಿತ್ರ ನೋಡೋದಿಕ್ಕೆ ಜನ ಕೂಡ ಕಾತುರದಿಂದ ಕಾಯುತ್ತಿದ್ದಾರೆ. ಭರ್ಜರಿಯಾಗಿ ಈ ಸಿನಿಮಾ ಮೂಲಕ ಸಿನಿ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಕೆವಿಎನ್ ಪ್ರೊಡಕ್ಷನ್ಸ್ ಡಿಸ್ಟ್ರಿಬ್ಯುಷನ್ ಕಾರ್ಯದಲ್ಲೂ ಒಳ್ಳೆ ಹೆಸರು ಮಾಡಿದೆ. ಇನ್ನು ನಿರ್ಮಾಣದ ವಿಚಾರಕ್ಕೆ ಬಂದ್ರೆ ಬಿಗ್‌ ಸ್ಟಾರ್‌ಗಳ ಬಿಗ್‌ ಬಜೆಟ್ ಸಿನಿಮಾ ನಿರ್ಮಾಣದ ಮೂಲಕ ‌ ದೇಶಾದ್ಯಂತ ಹೆಸರು ಮಾಡಿದೆ. ಪ್ರತಿ ಹಂತದಲ್ಲೂ ದೊಡ್ಡ ಮಟ್ಟದ ಸದ್ದು ಮಾಡುತ್ತಿರುವ ಕೆವಿಎನ್ ಸಂಸ್ಥೆಯ ಈ ಚಿತ್ರವು ಎಲ್ಲೆಡೆ ಅಬ್ಬರಿಸಲಿದೆ.

Related posts

ಸೆಂಚುರಿ ಸ್ಟಾರ್ ಬಿಡುಗಡೆ ಮಾಡಿದರು “ಗಿರ್ಕಿ” ಮೋಷನ್ ಪೋಸ್ಟರ್.

Kannada Beatz

ಮತ್ತೆ ನಿರ್ಮಾಣ ಸಾಹಸಕ್ಕಿಳಿದ ಅಜಯ್ ರಾವ್ – ‘ಕಟಿಂಗ್ ಶಾಪ್’ ನಿರ್ದೇಶಕನ ಚಿತ್ರಕ್ಕೆ ಗ್ರೀನ್ ಸಿಗ್ನಲ್

Kannada Beatz

ಕೊನೆಯ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿರುವ ಆಪರೇಷನ್ ಲಂಡನ್ ಕೆಫೆ!
——————–

Kannada Beatz

Leave a Comment

Share via
Copy link
Powered by Social Snap