ಸದ್ಯದಲ್ಲೇ ಆರಂಭವಾಗಲಿದೆ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ “ಗೋಸ್ಟ್” .
ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಾಭಿರುಚಿ ಚಿತ್ರಗಳನ್ನು ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ಮೂಲಕ “ಗೋಸ್ಟ್” ಎಂಬ ನೂತನ ಚಿತ್ರ ನಿರ್ಮಾಣವಾಗಲಿದೆ.
ರಾಷ್ಟ್ರಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ ಅರ್ಪಿಸುವ, ಸಂದೇಶ್. ಎನ್ ನಿರ್ಮಿಸುತ್ತಿರುವ ಈ ಚಿತ್ರದ ನಾಯಕರಾಗಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯಿಸುತ್ತಿದ್ದಾರೆ.
“ಶ್ರೀನಿವಾಸ ಕಲ್ಯಾಣ”, ” ಬೀರ್ ಬಲ್”, “ಓಲ್ಡ್ ಮಾಂಕ್” ಚಿತ್ರಗಳ ಖ್ಯಾತಿಯ ಶ್ರೀನಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ.
ಕಥೆಯನ್ನು ಶ್ರೀನಿ ಅವರೆ ಬರೆದಿದ್ದು, ಉಳಿದ ಕಲಾವಿದರ ಹಾಗೂ ತಂತ್ರಜ್ಞರ ಆಯ್ಕೆ ನಡೆಯುತ್ತಿದೆ.
ಸದ್ಯದಲ್ಲೇ ಚಿತ್ರ ಆರಂಭವಾಗಲಿದೆ.