Kannada Beatz
News

‘ದಿಲ್ಮಾರ್’ಗೆ ಪ್ರೀ-ರಿಲೀಸ್ ಇವೆಂಟ್ ಗೆ ಶಿವಣ್ಣ ಮೆರುಗು..ರಾಮ್-ಚಂದ್ರಮೌಳಿ ಚಿತ್ರಕ್ಕೆ ದೊಡ್ಮನೆ‌ ದೊರೆ ಹಾರೈಕೆ

ಚಂದ್ರಮೌಳಿ-ರಾಮ್ ಹೊಸ ಸಾಹಸ ‘ದಿಲ್ಮಾರ್’ಗೆ ಶಿವಣ್ಣ ಬೆಂಬಲ..ಇದೇ 24ರಂದು ಸಿನಿಮಾ ರಿಲೀಸ್

‘ದಿಲ್ಮಾರ್’ಗೆ ಶಿವಣ್ಣ ಸಾಥ್..ಕೆಜಿಎಫ್ ಡೈಲಾಗ್ ರೈಟರ್ ಮೊದಲ ಚಿತ್ರ ಇದೇ 24ಕ್ಕೆ ರಿಲೀಸ್

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಥ್ ಕೊಟ್ಟಿರುವ ದಿಲ್ಮಾರ್ ಸಿನಿಮಾಗೀಗ ದೊಡ್ಮನೆ ದೊರೆ ಶಿವಣ್ಣನ ಬೆಂಬಲ ಸಿಕ್ಕಿದೆ. ಇದೇ ತಿಂಗಳ 24ರಂದು ತೆರೆಗೆ ಬರ್ತಿರುವ ಕೆಜಿಎಫ್ ಡೈಲಾಗ್ ರೈಟರ್ ಚಂದ್ರಮೌಳಿಯವರ ಚೊಚ್ಚಲ ಸಿನಿಮಾಗೆ ಶಿವಣ್ಣ ಶುಭ ಹಾರೈಸಿದ್ದಾರೆ. ನಿನ್ನೆ ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ನಡೆದ ಪ್ರೀ ರಿಲೀಸ್ ಇವೆಂಟ್ ಗೆ ಶಿವರಾಜ್ ಕುಮಾರ್ ವಿಶೇಷ ಅತಿಥಿಯಾಗಿ ಆಗಮಿಸಿ ಇಡೀ ತಂಡಕ್ಕೆ ಬೆಸ್ಟ್ ವಿಷಸ್ ತಿಳಿಸಿದರು.

ಈ ವೇಳೆ ಶಿವರಾಜ್ ಕುಮಾರ್ ಮಾತನಾಡಿ, ರಾಮ್ ಹಾರ್ಡ್ ವರ್ಕ್ ಮಾಡಿ ಮುಂದಿದ್ದಾರೆ. ಎಷ್ಟೋ ಏರುಪೇರು ನೋಡಿ‌ ಬಂದವರು. ಕಳೆದ 15 ವರ್ಷಗಳಿಂದ ನೋಡ್ತಾ ಇದ್ದೇನೆ. ಗಂಡ ಹೆಂಡ್ತಿ ಇಬ್ಬರು ಹೃದಯವಂತರು. ಹಾರ್ಟ್ ಚೆನ್ನಾಗಿ ಇದ್ದರೆ ನಮ್ಮ ಹಾರ್ಟ್ ಕನೆಕ್ಟ್ ಆಗುತ್ತದೆ. ಚಂದ್ರಮೌಳಿ ತುಂಬಾ ಹೋಪ್ ಆಗಿ‌ ಮಾತನಾಡಿದರು. ಮನುಷ್ಯ ಲವಲವಿಕೆಯಿಂದ ಇದ್ದರೆ ಎಲ್ಲವೂ ಚೆನ್ನಾಗಿ ಆಗಲಿದೆ. ತುಂಬಾ ಓಪನ್ ಆಗಿ ಮಾತಾಡ್ತಾರೆ. ಈ ಸಿನಿಮಾ ಚೆನ್ನಾಗಿ ಆಗಲಿದೆ.‌ ಯಾರು ಅಷ್ಟು ಇಸಿಯಾಗಿ ದುಡ್ಡು ಹಾಕಲ್ಲ. ನಿರ್ಮಾಪಕರು ಒಳ್ಳೆ ಸಿನಿಮಾ ಮಾಡಿದ್ದಾರೆ. ಈ ರೀತಿ ಸಮಾರಂಭಕ್ಕೆ ಬರಬೇಕು. ನಾವು ಬರದೇ ಇನ್ಯಾರು ಬರುತ್ತಾರೆ. ಟ್ರೇಲರ್ ನೋಡಿದರೆ ಅರ್ಜುನ್ ರೆಡ್ಡಿ ಫೀಲ್ ಕೊಡುತ್ತದೆ. ಅಕ್ಟೋಬರ್ 24 ದೀಪಾವಳಿ ಹಬ್ಬದ ಪ್ರಯುಕ್ತ ಚಿತ್ರ ರಿಲೀಸ್ ಆಗಲಿದೆ. ದೀಪಾವಳಿ ಅಷ್ಟೇ ಬೆಳಕು ಚಿತ್ರರಂಗಕ್ಕೆ ಈ ಸಿನಿಮಾ ನೀಡಲಿ ಎಂದು ಹಾರೈಸಿದರು.

ನಟಿ ಅದಿತಿ ಪ್ರಭುದೇವ ಮಾತನಾಡಿ, ಶಿವಣ್ಣ ಕಾರ್ಯಕ್ರಮದಲ್ಲಿ ಇರುವುದು ಬೆಳಕು ಮೂಡಿದ ಹಾಗೇ. ಒಂದು ಪಾಸಿಟಿವಿಟಿ ಇದ್ದಾಗೆ. ರಾಮ್ ಈ ಪಾತ್ರಕ್ಕೆ ಸೂಟೆಬಲ್ ಆಗಿದ್ದಾರೆ. ತುಂಬಾ ಚೆನ್ನಾಗಿ ಆಕ್ಟ್ ಮಾಡಿದ್ದಾರೆ. ಇದು ಸೈಕ್ ಪ್ರೀತಿ. ಈ ಲವ್ ಸ್ಟೋರಿಯಿಂದ ಇಡೀ ಸ್ಯಾಂಡಲ್ ವುಡ್ ಲವ್ ಸ್ಟೋರಿ ಕಡೆ ಮುಖ ಮಾಡುವ ರೀತಿ ಆಗಲಿದೆ ಎಂಬ ನಂಬಿಕೆ ಇದೆ. ಪ್ರತಿಯೊಬ್ಬರೂ ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಎಂದರು.

ನಟ ರಾಮ್ ಮಾತನಾಡಿ, ಇವತ್ತು ಶಿವಣ್ಣ ಬಗ್ಗೆ ಏನೂ ಹೇಳಿದರು ಸಾಲದು. ನಾನು ಕನಸು ಕಟ್ಟಿಕೊಂಡು ಬೆಂಗಳೂರಿಗೆ ಬಂದಾಗ ಸಾಕಷ್ಟು ಕಷ್ಟಪಟ್ಟಿದ್ದಾನೆ. ಶಿವಣ್ಣ ಗೀತಾಕ್ಕ ಶಿವ ಪಾರ್ವತಿ ತರ ಜೊತೆಯಲ್ಲಿ ನಿಂತಿದ್ದಾರೆ. ತಂದೆ ತಾಯಿ ಜನ್ಮ ಕೊಟ್ಟಿದ್ದಾರೆ. ಶಿವಣ್ಣ ಗೀತಾಕ್ಕ ಜೀವನ ಕೊಟ್ಟಿದ್ದಾರೆ. ದೊಡ್ಮನೆ ಯಾವತ್ತಿದ್ದರೂ ದೊಡ್ಮನೆನೇ. ನನಗೆ ಮಗನಗಿಂತ ಹೆಚ್ಚಾಗಿ ಜೊತೆಯಾಗಿ ನಿಂತಿದ್ದಾರೆ.‌ಅವರ ಪಕ್ಕದಲ್ಲಿ ‌ನಿಂತಿದ್ದೇನೆ ಎಂದರೆ ನಾನು ಗೆದ್ದಿದ್ದೇನೆ ಎಂದರ್ಥ. ಪ್ರತಿಯೊಬ್ಬರಿಗೂ ಈ ಸಿನಿಮಾ ಇಷ್ಟವಾಗುತ್ತದೆ‌ ಎಂದರು.

ನಿರ್ದೇಶಕ ಚಂದ್ರಮೌಳಿ ಮಾತನಾಡಿ,
ನನ್ನ ಲೈಫ್ ನಲ್ಲಿ‌ ಅಂದುಕೊಂಡಿದ್ದು ಎಲ್ಲವೂ ನಡೆದಿದೆ‌. ಅದರಲ್ಲಿ ಒಂದು ದಿಲ್ಮಾರ್. ಈ ಇವೆಂಟ್ ಗೆ ಶಿವಣ್ಣ ಬರುತ್ತಾರೆ ಎಂದು ಅಂದುಕೊಂಡಿರಲಿಲ್ಲ.‌ ಅವರು ಬಂದಿರುವುದು ಖುಷಿ. ಟಾಪ್ ಫ್ಲೋರ್ ನಲ್ಲಿ ಇರುವವರು ಗ್ರೌಂಡ್ ಫೋರ್ ನಲ್ಲಿ ಇರುವವರಿಗಾಗಿ ಕೆಳಗೆ ಇಳಿದು ಬಂದು ಲಿಫ್ಟ್ ಆನ್ ಮಾಡಿ ಕೊಡುವುದು ಅವರಿಗೆ ಬೇಕಾಗಿರಲಿಲ್ಲ. ಅದನ್ನು ಶಿವಣ್ಣ ಮಾಡಿದ್ದಾರೆ. ನಾವು ಟಾಪ್‌ ಫ್ಲೋರ್ ಗೆ ಹೋದಾಗ ಗ್ರೌಂಡ್ ಫೋರ್‌ ನಲ್ಲಿ ಇರುವವರಿಗೆ ಯಾವ ರೀತಿ ಇರಬೇಕು ಎಂಬುವುದನ್ನು ನೀವು ಹೇಳಿ ಕೊಟ್ಟಿದ್ದೀರ. ನಮ್ಮ ಚಿತ್ರದಲ್ಲಿ ಕಂಟೆಂಟ್ ಇದೆ ಅನ್ನೋದನ್ನು ಟ್ರೇಲರ್ , ಟೀಸರ್ ಮೂಲಕ ತೋರಿಸಿಕೊಟ್ಟಿದ್ದೇವೆ. ಶಿವಣ್ಣ ಅವರ ಸಾಥ್ ಸಿನಿಮಾಗೆ ಸಿಕ್ಕಿದೆ. ಹೊಸ ಹೀರೋಗೆ ಯಾಕೆ ಮಾಡ್ದೆ ಎಂದು ಎಲ್ಲರೂ ಕೇಳುತ್ತಿದ್ದಾರೆ. ನಮ್ಮ ಹೀರೋ ರಾಮ್ ಹಾರ್ಡ್ ವರ್ಕ್ ಮಾಡಿ ಇಂಡಸ್ಟ್ರಿಗೆ ಬಂದವರು. ರಿಯಲ್ ಲೈಫ್ ನಲ್ಲಿ ಹೀರೋ ಆದವರು ಸಿನಿಮಾದಲ್ಲಿ ಹೀರೋ ಆಗುತ್ತಾರೆ ಎಂದರು.

ಆಕ್ಷನ್ ಪ್ಯಾಕ್ಡ್ ಕ್ಯಾರೆಕ್ಟರ್ ಟ್ರೇಲರ್ ರಿಲೀಸ್

ಈಗಾಗಲೇ ದಿಲ್ಮಾರ್ ಸಿನಿಮಾದ ಟ್ರೇಲರ್ , ಟೀಸರ್ ಹಿಟ್ ಲೀಸ್ಟ್ ಸೇರಿದೆ.‌ ಇದೀಗ ಚಿತ್ರತಂಡ ಆಕ್ಷನ್ ಪ್ಯಾಕ್ಡ್ ಕ್ಯಾರೆಕ್ಟರ್ ಟ್ರೇಲರ್ ರಿಲೀಸ್ ಆಗಿದೆ. ಸೈಕ್ ಪ್ರೀತಿ ಕಥೆ ಜೊತೆಗೆ ಸಿಳ್ಳೆ ಕೇಕೆ ಹಾಕುವಂತ ಡೈಲಾಗ್ ನ್ನು ಚಂದ್ರಮೌಳಿ ಉಣಬಡಿಸಿದ್ದಾರೆ.

ದಿಲ್ಮಾರ್ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಚಂದ್ರಮೌಳಿ ತಮ್ಮ ಕಥೆ ಮೂಲಕ ಯುವ ಪ್ರತಿಭೆ ರಾಮ್ ಅವರನ್ನು ನಾಯಕನಾಗಿ ಪರಿಚಯಿಸಿದ್ದಾರೆ. ಡೈಲಾಗ್ ಕಿಂಗ್ ಸಾಯಿ ಕುಮಾರ್, ಶರತ್ ಲೋಹಿತಾಶ್ವ, ಅಶೋಕ್ ತಾರಾಬಳಗ ಚಿತ್ರದಲ್ಲಿದೆ. ತೆಲುಗಿನ ನಟಿ ಡಿಂಪಲ್ ಹಯಾತಿ ಹಾಗೂ ಆದಿತಿ ಪ್ರಭುದೇವ ನಾಯಕಿಯರಾಗಿ ನಟಿಸಿದ್ದಾರೆ.

ಅರ್ಜುನ್ ರೆಡ್ಡಿ ಖ್ಯಾತಿಯ ರಾದನ್ ಸಿನಿಮಾಗೆ ಸಂಗೀತ ನೀಡಿದ್ದು, ತನ್ವಿಕ್ ಅವರ ಛಾಯಾಗ್ರಹಣ, ಶಶಾಂಕ್ ಮುರುಳಿಧರನ್ ಸಂಕಲನ ಚಿತ್ರಕ್ಕಿದೆ. ಕೆ ಮಹೇಶ್ ಮತ್ತು ನಾಗರಾಜ್ ಭದ್ರಾವತಿ ನಿರ್ಮಾಣ ಮಾಡಿದ್ದಾರೆ. ಇದೇ ತಿಂಗಳ 24ಕ್ಕೆ ದಿಲ್ಮಾರ್ ಬೆಳ್ಳಿತೆರೆಯಲ್ಲಿ ಧಮಾಕ ಸೃಷ್ಟಿಸಲು ಸಜ್ಜಾಗಿದೆ.

Related posts

‘ಜೈ’ ಚಿತ್ರದ ಪ್ರೇಮಗೀತೆ ಬಿಡುಗಡೆ

Kannada Beatz

ಯಶವಂತ್ ನಟನೆಯ ‘ವಿಕಿಪೀಡಿಯ’ ಸಿನಿಮಾದ ಟ್ರೇಲರ್ ರಿಲೀಸ್…ಆಗಸ್ಟ್ 26ಕ್ಕೆ ತೆರೆಗೆ ಬರ್ತಿದೆ ಸಿನಿಮಾ

Kannada Beatz

ನವೆಂಬರ್ 24ಕ್ಕೆ ಬಿಡುಗಡೆಯಾಗಲಿದೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’

Kannada Beatz

Leave a Comment

Share via
Copy link