Kannada Beatz
News

N-1 ಕ್ರಿಕೆಟ್ ಅಕಾಡೆಮಿ ಪ್ರೆಸೆಂಟ್ಸ್ WWCL ವುಮೇನ್ಸ ವಿಂಡ್ ಬಾಲ್ ಕ್ರಿಕೆಟ್ ಲೀಗ್ ಲೋಗೊ ಲಾಂಚ್…

ಎನ್ 1 ಕ್ರಿಕೆಟ್ ಅಕಾಡೆಮಿಯಿಂದ ಈಗಾಗಲೇ ಸಾಕಷ್ಟು ಕ್ರಿಕೆಟ್ ಲೀಗ್ ಗಳು ಚಾಲ್ತಿಯಲ್ಲಿವೆ‌. ಟಿಪಿಎಲ್ ಹಾಗು PROFESSIONALS ಗಾಗಿ IPT12 ನಿಂದ ಶುರುವಾಗಿ ಈಗ WWCL ವರೆಗೂ ಬಂದು ನಿಂತಿದೆ..ಇಷ್ಟು ಇದು ಎಲ್ಲಾ ಲೀಗ್ ಗಳಲ್ಲೂ ಟೀಮ್ ಗಳ ಸ್ಟಾರ್ ಬ್ರಾಂಡ್ ಅಂಬಾಸಿಡರ್ ಆಗಿ ಟೀಮ್ ಜೆರ್ಸಿ ತೊಟ್ಟು ತಮ್ಮ ತಂಡಕ್ಕೆ ಚಿಯರ್ ಅಪ್ ಮಾಡ್ತಿದ್ದ ನಾಯಕಿಯರು ಈಗ ತಾವೇ ಬ್ಯಾಟು ಬಾಲ್ ಹಿಡಿದು ಕ್ರಿಕೆಟ್ ಆಡ್ತಿವಿ…ನಾವು ಯಾರಿಗೂ ಕಮ್ಮಿ ಇಲ್ಲ ಅಂತಿದ್ದಾರೆ.

ಗಂಡುಮಕ್ಕಳಿಗಾಗಿಯೇ ಇಷ್ಟು ದಿನ‌ ಇದ್ದ ಟಿಪಿಎಲ್, IPT12 ಜೊತೆಗೆ ಈಗ ಹೆಣ್ಣು ಮಕ್ಕಳಿಗಾಗಿ ಮೊದಲ ಬಾರಿಗೆ N1 ಕ್ರಿಕೆಟ್ ಅಕಾಡೆಮಿಯ ಸುನೀಲ್ ಕುಮಾರ್ ಬಿ ಆರ್ ರವರು ಟೂರ್ನಿಯೊಂದನು ಆಯೋಜನೆ‌ಗೊಂಡಿದಾರೆ..ಇನ್ನು ಈ ಟೂರ್ನಿಗೆ ವುಮೆನ್ಸ್ ವಿಂಡ್ ಬಾಲ್ ಕ್ರಿಕೆಟ್ ಲೀಗ್ ಎಂದು ನಾಮಕರಣ ಮಾಡಿದ್ದು, ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ WWCL ಲೋಗೋ ಲಾಂಚ್ ಕಾರ್ಯಕ್ರಮ ನಡೆಯಿತು.. ನಿರ್ಮಾಪಕ ಭಾಮ‌ಹರೀಶ್ ಲೋಗೊ ಲಾಂಚ್ ಮಾಡಿ ಎಲ್ಲ ತಂಡಕ್ಕೂ ಆಲ್ ದಿ ಬೆಸ್ಟ್ ತಿಳಿಸಿದರು.

ಲೋಗೋ ಲಾಂಚ್ ಬಳಿಕ ಏಳು ತಂಡಗಳಿಗೆ ಆಟಗಾರ್ತಿಯರ ಹರಾಜು‌ ಪ್ರಕ್ರಿಯೆ ನೇರವೇರಿದೆ.. ಈಗಾಗಲೇ ಟೆಲಿವಿಷನ್ ಪ್ರೀಮಿಯರ್ ಲೀಗ್ ಹಾಗೂ IPT12 ಅಯೋಜನೆ ಮಾಡಿ ಸಕ್ಸಸ್ ಕಂಡಿರುವ N1 ಅಕಾಡೆಮಿಯ ಸುನೀಲ್ ಮೊದಲ ಬಾರಿಗೆ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ…ಈ ಟೂರ್ನಮೆಂಟ್ ನಲ್ಲಿ ಒಟ್ಟು 98 ನಟಿಯರು ಆಟ ಆಡಲಿದ್ದು, ಈ ತಿಂಗಳ ಕೊನೆಯಲ್ಲಿ ಜೆರ್ಸಿ ಲಾಂಚ್ ಮಾಡಿ..ನವೆಂಬರ್ ನಲ್ಲಿ WWCL ಮ್ಯಾಚ್ ಆಡಿಸಲು ಸಕಲ ಸಿದ್ದತೆ ಮಾಡಲಾಗಿದೆ..

ತಂಡಗಳು, ಓನರ್ ಹಾಗೂ ಕ್ಯಾಪ್ಟನ್
1.AVR ಟಸ್ಕರ್ಸ್-ಅರವಿಂದ್-ವೆಂಕಟೇಶ್ ರೆಡ್ಡಿ-ಆರೋಹಿ ನಾರಾಯಣ್
2.ಎಂಆರ್ ಫ್ಯಾಂಥರ್ಸ್ಸ್-ಮಿಥುನ್ ರೆಡ್ಡಿ-ಮಲೈಕಾ ವಸೂಪಾಲ್
3.ಬುಲ್ ಸ್ಕ್ಯಾಡ್-ಮೋನಿಷ್-ಶಾನ್ವಿ ಶ್ರೀವಾಸ್ತವ
4.ವಿನ್ ಟೈಮ್ ರಾಕರ್ಸ್ಸ್-ಅನಿಲ್ ಕುಮಾರ್ ಬಿ.ಆರ್-ಬೃಂದಾ ಆಚಾರ್ಯ
5.ಮಂಜು 11-ಮಂಜುನಾಥ್-ನಾಗಯ್ಯ-ಯಶ ಶಿವಕುಮಾರ್
6.ಬಯೋಟಾಪ್ ಲೈಫ್ ಸೇವಿಯರ್ಸ್-ಪ್ರಸನ್ನ-ವಿನು ಜೋಸ್-ಅಪೂರ್ವ
7.ಖುಷಿ 11-ಭೂಮಿ ಶೆಟ್ಟಿ

Related posts

ಮುಹೂರ್ತ ಆಚರಿಸಿಕೊಂಡ ‘Case of ಕೊಂಡಾಣ’…. ದೇವಿಪ್ರಸಾದ್ ಶೆಟ್ಟಿ ಜೊತೆಗೆ ಮತ್ತೆ ಕೈಜೋಡಿಸಿದ ವಿಜಯ್ ರಾಘವೇಂದ್ರ

Kannada Beatz

The Script Room ಯೂಟ್ಯೂಬ್ ನಲ್ಲಿ ‘ಇರುವೆ’ ಕಿರುಚಿತ್ರ ಬಿಡುಗಡೆ..ಇದು ರಾಜೇಶ್ ರಾಮಸ್ವಾಮಿ ಹೊಸ ಪ್ರಯತ್ನ

Kannada Beatz

Kannada Beatz

Leave a Comment

Share via
Copy link
Powered by Social Snap