ಕಾಲಾನಭ ಫಿಲಂ ಫ್ಯಾಕ್ಟರಿ ನಿರ್ಮಾಣದಲ್ಲಿ .ಸುದರ್ಶನ್ ಚಕ್ರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ ಚೋರ್ ಬಜಾರ್.
ಚೇತನ್ಗಂಧರ್ವ ನಾಯಕನಾಗಿ ವಿರಾಣಿಕ ಶೆಟ್ಟಿ ನಾಯಕಿಯಾಗಿ ಮತ್ತು ಹಾಸ್ಯ ನಟ ಸೂರಜ್. ನಟ ಅಜಯ್ ಮೈಲಾರ ಹಾಗೂ ಧನು ಇವರು ಅಭಿನಯಿಸುತ್ತಿರುವ ಚಿತ್ರ ಚೋರ್ ಬಜಾರ್. ಇದು ಒಂದು ಹಾಸ್ಯ ಭರಿತ ಕ್ರೈಮ್ ಥ್ರಿಲ್ಲರ್ ಚಿತ್ರವಾಗಿದ್ದು ಇದು ನೈಜ ಆಧಾರಿತ ಚಿತ್ರವಾಗಿದೆ. ಈ ಚಿತ್ರಕ್ಕೆ ಕಿರಣ ಗೌಡ ಎನ್ನುವವರು ನಿರ್ಮಾಣದ ಹೊಣೆ ಹೊತ್ತಿದ್ದಾರೆ ಇದಕ್ಕೆ ಸಜ್ಜು ಕೇವಿ ಹಾಗೂ ರಾಹುಲ್ ದಿವಾಕರ್ ಎಂಬುವರು ಸಹ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ .ಕಿರಣ್ ಗಜ ರವರು ಕ್ಯಾಮೆರ ಮ್ಯಾನ್ ಆಗಿ ಮಾಡಿದ್ದಾರೆ,ವಿಕಾಸ್ ವಸಿಷ್ಠ ಸಂಗೀತ ವಿದ್ದು ಚಿತ್ರದ ಮೂರು ಹಾಡುಗಳು
ಭರ್ಜರಿಯಾಗಿ ಮೂಡಿ ಬಂದಿದೆ ಈ ಚಿತ್ರಕ್ಕೆ ನಿರ್ದೇಶಕ ಸುದರ್ಶನ್ ಚಕ್ರ ಅವರದೇ ಸಾಹಿತ್ಯವಿರುತ್ತದೆ ಈ ಹಿಂದೆ ಹಲವು ವರ್ಷಗಳಿಂದ ಹಲವಾರು ನಿರ್ದೇಶಕರುಗಳ ಹತ್ರ ಕೆಲಸ ಮಾಡಿರುವ ಅನುಭವವುಳ್ಳ ಸುದರ್ಶನ್ ಚಕ್ರ ಅವರು ಈ ಚಿತ್ರವನ್ನು ಪರಿಪೂರ್ಣವಾಗಿ ಕಥೆ ಚಿತ್ರಕಥೆ ನಿರ್ದೇಶನ ಸಾಹಿತ್ಯ ದ ಜವಾಬ್ದಾರಿ ಹೊತ್ತಿದ್ದಾರೆ ಇತ್ತೀಚಿಗೆ ಚಿತ್ರದ ಕೊನೆ ಹಂತದ ದ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಹೊಡೆದಿದೆ ಚೋರ್ ಬಜಾರ್ ಚಿತ್ರವು ಇನ್ನು ಸ್ವಲ್ಪ ದಿನಗಳಲ್ಲಿ ಹಾಡುಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ ಹಾಗೂ ಕೆಲವೇ ತಿಂಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆ ಇಡಲು ಚಿತ್ರತಂಡ ಸಿದ್ಧ ಮಾಡಿಕೊಳ್ಳುತ್ತಿದೆ