Kannada Beatz
News

ಮೇ 18 ರಂದು ಅದ್ದೂರಿಯಾಗಿ ನಡೆಯಲಿದೆ “ಚಿತ್ರಸಂತೆ” ಪ್ರಶಸ್ತಿ ಪ್ರದಾನ ಸಮಾರಂಭ .

ವರ್ಣರಂಜಿತ ಸಮಾರಂಭದ ಕುರಿತು ಮಾಹಿತಿ ನೀಡಲು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಗಿಣಿ ದ್ವಿವೇದಿ ಹಾಗೂ ರಾಜವರ್ಧನ್ ಸೇರಿದಂತೆ ಹಲವು ಗಣ್ಯರ ಉಪಸ್ಥಿತಿ .

ಗಿರೀಶ್ ಗೌಡ ಅವರ ನೇತೃತ್ವದ “ಚಿತ್ರಸಂತೆ” ಪತ್ರಿಕೆ ಚಿತ್ರರಂಗದ ಅಚ್ಚುಮೆಚ್ಚಿನ ಪತ್ರಿಕೆ. ಕಳೆದ ಹದಿಮೂರು ವರ್ಷಗಳಿಂದ ಗಿರೀಶ್ ಗೌಡ ಅವರು “ಚಿತ್ರಸಂತೆ” ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಿಕೊಂಡು ಬರುತ್ತಿದ್ದು, ಈ ವರ್ಷದ ಪ್ರಶಸ್ತಿ ಸಮಾರಂಭ ಮೇ 18 ರಂದು ಅದ್ದೂರಿಯಾಗಿ ನಡೆಯಲಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ “ಚಿತ್ರಸಂತೆ” ಪತ್ರಿಕೆ ಸಂಪಾದಕ ಗಿರೀಶ್ ಗೌಡ, ನಟಿ ರಾಗಿಣಿ ದ್ವಿವೇದಿ, ನಟ ರಾಜವರ್ಧನ್, ಉತ್ಸವ್ ಮುಂತಾದವರು ಉಪಸ್ಥಿತರಿದ್ದರು. ಗಿರೀಶ್ ಗೌಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ನಮ್ಮ‌”ಚಿತ್ರಸಂತೆ” ವಾರ್ಷಿಕ ಪ್ರಶಸ್ತಿ ಸಮಾರಂಭಕ್ಕೆ ಹದಿಮೂರರ ಸಡಗರ. ಚಿತ್ರರಂಗದ ಗಣ್ಯರಿಗೆ ವಿವಿಧ ಆಯಾಮಗಳಲ್ಲಿ ಈ ಪ್ರತಿವರ್ಷ ಈ ಪ್ರಶಸ್ತಿ ನೀಡಲಾಗುವುದು. ಈವರೆಗೂ ಸ್ಯಾಂಡಲ್ ವುಡ್ ನ ಅನೇಕ ಸೂಪರ್ ಸ್ಟಾರ್ ಗಳು ನಮ್ಮ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡು, ಪ್ರಶಸ್ತಿ ಸ್ವೀಕರಿಸಿ ನಮ್ಮ ಸಂಸ್ಥೆಯ ಗೌರವ ಹೆಚ್ಚಿಸಿದ್ದಾರೆ. ಅವರಿಗೆ ನಾನು ಆಬಾರಿ. ಈ ಬಾರಿಯ ಪ್ರಶಸ್ತಿ ಸಮಾರಂಭ ಮೇ 18 ರಂದು ಹಲಸೂರಿನ Conrad ಹೋಟೆಲ್ ನಲ್ಲಿ ಅದ್ದೂರಿಯಾಗಿ ನಡೆಯಲಿದೆ. Conrad ಹೋಟೆಲ್ ಅವರು ನಮ್ಮ ಜೊತೆಗಿದ್ದಾರೆ. ಎ.ವಿ.ಆರ್ ಸಂಸ್ಥೆ ಕೂಡ ನಮ್ಮೊಂದಿಗಿದ್ದಾರೆ. ನಟಿ ರಾಗಿಣಿ ಹಾಗೂ ನಟ ರಾಜವರ್ಧನ್ ಅವರು ಸಾಥ್ ನೀಡಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ಸಹ ತಮ್ಮೆಲ್ಲರ ಪ್ರೋತ್ಸಾಹ ನಮಗಿರಲಿ ಎಂದು ಗಿರೀಶ್ ಗೌಡ ತಿಳಿಸಿದರು. ‌

ನಟಿ ರಾಗಿಣಿ ದ್ವಿವೇದಿ, ನಟ ರಾಜವರ್ಧನ್ “ಚಿತ್ರಸಂತೆ” ಪ್ರಶಸ್ತಿ ಸಮಾರಂಭ ಯಶಸ್ವಿಯಾಗಲಿ‌ ಎಂದು ಹಾರೈಸಿದರು.

Related posts

ನವೆಂಬರ್ 11 ರಂದು ರಾಜ್ಯಾದ್ಯಂತ “ರಾಣ”ನ ಆಗಮನ.

Kannada Beatz

ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗಮನ ಸೆಳೆಯುತ್ತಿದೆ ಹೊಸಬರ ‘ನೈನಾ’ ಸಿನಿಮಾ

Kannada Beatz

ಅಭಿರಾಮಚಂದ್ರ’ ತಂಡದ ಮತ್ತೊಂದು ಪ್ರಯತ್ನ…’ದಿಂಸೋಲ್’ ಫಸ್ಟ್ ಲುಕ್ ಬಿಡುಗಡೆ

Kannada Beatz

Leave a Comment

Share via
Copy link
Powered by Social Snap