Kannada Beatz
News

ಡಿಸೆಂಬರ್ 20 ರಂದು ಅದ್ದೂರಿಯಾಗಿ ನಡೆಯಲಿದೆ “JAM JUNXION” ಬೆಂಗಳೂರಿನ ಬಿಗೆಸ್ಟ್ ಮ್ಯೂಸಿಕಲ್ ನೈಟ್”. .

ಒಂದೇ ಸ್ಥಳದಲ್ಲಿ ಆರು ಬೃಹತ್ ವೇದಿಕೆ. ಚಂದನ್ ಶೆಟ್ಟಿ ಅವರ ಬ್ಯಾಂಡ್ ಸೇರಿದಂತೆ ಅನೇಕ ಪ್ರಸಿದ್ದ ಬ್ಯಾಂಡ್ ಗಳಿಂದ ಆರು ಗಂಟೆಗಳ ಕಾಲ ಸಂಗೀತ ರಸಸಂಜೆ .

ಹಲವು ವಿಶೇಷಗಳಿಗೆ ಹೆಸರಾಗಿರುವ ಬೆಂಗಳೂರಿನಲ್ಲಿ ಡಿಸೆಂಬರ್ 20ರಂದು ಮತ್ತೊಂದು ವಿಶೇಷ ನಡೆಯಲಿದೆ. ಹೆಸರಾಂತ “JAM JUNXION” ವತಿಯಿಂದ ಶ್ರೀ ಅವರು ಬೆಂಗಳೂರಿನ ಥಣಿಸಂದ್ರದ ಭಾರತೀಯ ಮಾಲ್ ನಲ್ಲಿ ಬಿಗೆಸ್ಟ್ ಮ್ಯೂಸಿಕಲ್ ನೈಟ್ ಆಯೋಜಿಸಿದ್ದಾರೆ. ಈ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಉಸ್ತುವಾರಿ ವಹಿಸಿರುವ ಶ್ರೀ, ಗಾಯಕ – ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಹಾಗೂ ನವರಸನ್ ಅವರು ಉಪಸ್ಥಿತರಿದ್ದು ಕಾರ್ಯಕ್ರಮದ ಕುರಿತು ಮಾತನಾಡಿದರು.

“Jam junxion” ವತಿಯಿಂದ ಡಿಸೆಂಬರ್ 20ರಂದು ಬೆಂಗಳೂರಿನ ಥಣಿಸಂದ್ರದ ಭಾರತೀಯ ಮಾಲ್ ನಲ್ಲಿ ಬೃಹತ್ ಮ್ಯೂಸಿಕಲ್ ನೈಟ್ ಹಮ್ಮಿಕೊಳ್ಳಲಾಗಿದೆ. ಇದರ ವಿಶೇಷವೆಂದರೆ ಆರು ಬೃಹತ್ ವೇದಿಕೆಗಳಲ್ಲಿ ಆರು ಪ್ರಸಿದ್ದ ಬ್ಯಾಂಡ್ ನವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಒಂದು ವೇದಿಕೆಯ ಕಾರ್ಯಕ್ರಮ ಆದ ಕೂಡಲೆ ಮತ್ತೊಂದು ವೇದಿಕೆಯ ಕಾರ್ಯಕ್ರಮ ತಕ್ಷಣವೇ ಆರಂಭವಾಗುತ್ತದೆ. ಚಂದನ್ ಶೆಟ್ಟಿ ಅವರ ಬ್ಯಾಂಡ್ ಸೇರಿದಂತೆ ಆರು ಪ್ರಸಿದ್ದ ಬ್ಯಾಂಡ್ ಗಳು ಇದರಲ್ಲಿ‌ ಪಾಲ್ಗೊಳ್ಳಲಿದೆ. ಸಂಜೆ ಐದು ಗಂಟೆಗೆ ಆರಂಭವಾಗುವ ಕಾರ್ಯಕ್ರಮ ಸತತ ಆರು ಗಂಟೆಗಳ ಕಾಲ ನಡೆಯಲಿದೆ. ಕನ್ನಡ, ತೆಲುಗು ಹಾಗೂ ಹಿಂದಿ ಮೂರು ಭಾಷೆಗಳ ಹಾಡುಗಳನ್ನು ಹಾಡಿ ಗಾಯಕರು ರಂಜಿಸಲಿದ್ದಾರೆ. 800 ರೂಪಾಯಿಯಿಂದ ಟಿಕೆಟ್ ದರ ಆರಂಭವಾಗಲಿದೆ. ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ಇರುತ್ತದೆ. ಈ ಹಿಂದೆ ನಾವು ಹೈದರಾಬಾದ್ ಹಾಗೂ ವಿಶಾಖಪಟ್ಟಣದಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ್ದೆವು. ಈಗ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜಿಸುತ್ತಿದ್ದೇವೆ. ಟಿಕೆಟ್ ಗಳನ್ನು ಆನ್ ಲೈನ್ ನಲ್ಲಿ ತೆಗೆದುಕೊಳ್ಳಬಹುದು. ನವರಸನ್ ಹಾಗೂ ಚಂದನ್ ಶೆಟ್ಟಿ ಅವರು ನಮಗೆ ಸಹಕಾರ ನೀಡುತ್ತಿದ್ದಾರೆ. ಈ ಕಾರ್ಯಕ್ರಮ ಮಾತ್ರವಲ್ಲದೆ “MY tree” ಎಂಬ ಸಮಾಜಮುಖಿ ಕಾರ್ಯ ಕೂಡ ನಡೆಸುತ್ತಿದ್ದೇನೆ. ನಮಗೆ ನೀವು ಮಿನಿಮಮ್ 10 ರೂಪಾಯಿಯಿಂದ 50, 100 ರೂಪಾಯಿ ನೀಡಬಹುದು. ನಾವು ನಿಮ್ಮ ಹೆಸರಿನಲ್ಲಿ ಒಂದು ಗಿಡ ನೆಡುತ್ತೀವಿ. ಅದರ ಆರೈಕೆ ನಾವೇ ಮಾಡುತ್ತೀವಿ. ಅದರ ಬೆಳವಣಿಗೆ ಕುರಿತು ವಾಟ್ಸ್ ಆಪ್ ನಲ್ಲಿ ಮಾಹಿತಿ ನೀಡಿತ್ತಿರುತ್ತೇವೆ ಎಂದು “Jum junxion” ನ ಮುಖ್ಯಸ್ಥರಾದ ಶ್ರೀ ತಿಳಿಸಿದರು.

“Jum junxion” ಕಾರ್ಯಕ್ರಮವನ್ನು ಎರಡು ಕಡೆ ಯಶಸ್ವಿಯಾಗಿ ಆಯೋಜಿಸಿರುವ ಶ್ರೀ ಅವರು ಈಗ ಬೆಂಗಳೂರಿನಲ್ಲಿ ಡಿಸೆಂಬರ್ 20 ರಂದು ಆಯೋಜಿಸುತ್ತಿದ್ದಾರೆ. 220 ಅಡಿಯ ಆರು ವಿಶಾಲ ವೇದಿಕೆಯಲ್ಲಿ ಆರು ಪ್ರಸಿದ್ದ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ನೀವು ಕೊಟ್ಟ ದುಡ್ಡಿಗೆ ದುಪ್ಪಟ್ಟು ಮನೋರಂಜನೆ ನೀಡುವ ಕಾರ್ಯಕ್ರಮ ಇದಾಗಲಿದೆ. ನಾನು ಈ ಕಾರ್ಯಕ್ರಮ ಒಪ್ಪೊಕೊಳ್ಳಲು ಮುಖ್ಯ ಕಾರಣ ನೆರೆ ರಾಜ್ಯದಿಂದ ಅವರು ಇಲ್ಲಿಗೆ ಬಂದು ಕಾರ್ಯಕ್ರಮ ಆಯೋಜಿಸುತ್ತಿರುವುದು. ಹಾಗೂ ನಾಲ್ಕು ವೇದಿಕೆಗಳಲ್ಲಿ ಕನ್ನಡಿಗರಿಗೆ ಅವಕಾಶ ನೀಡಿರುವುದು. ಈ ಸಮಾರಂಭಕ್ಕೆ ನಿಮ್ಮಲ್ಲರ ಪ್ರೋತ್ಸಾಹವಿರಲಿ ಎಂದರು ಚಂದನ್ ಶೆಟ್ಟಿ.

ಶ್ರೀ ಅವರು ನನ್ನನ್ನು ಸಂಪರ್ಕಿಸಿ ಈ ಸಮಾರಂಭದ ಬಗ್ಗೆ ಹೇಳಿದರು. ಕೆಲವು ಸಲಹೆಗಳನ್ನು ನೀಡಿದ್ದೇನೆ. ಈ ಸಮಾರಂಭಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನವರಸನ್ ಹೇಳಿದರು.

Related posts

ಬಿಗ್ ಬಾಸ್ ಖ್ಯಾತಿಯ ಶೃತಿ ಪ್ರಕಾಶ್ ಅಭಿನಯದ “ಫ್ರೈಡೆ” ಚಿತ್ರ ಆರಂಭ .

Kannada Beatz

‘ಗಜರಾಮ’ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯ – ಸುನೀಲ್ ಕುಮಾರ್ ವಿ ಎ ನಿರ್ದೇಶನದ ಚೊಚ್ಚಲ ಸಿನಿಮಾ

Kannada Beatz

“ಬಿಂಗೊ” ಚಿತ್ರಕ್ಕೆ ದ್ವಿತೀಯ ಹಂತದ ಚಿತ್ರೀಕರಣ ಮುಕ್ತಾಯ .

Kannada Beatz

Leave a Comment

Share via
Copy link
Powered by Social Snap