HomeNews15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಫೆಬ್ರವರಿ 29- ಮಾರ್ಚ್ 07, 2024

15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
ಫೆಬ್ರವರಿ 29- ಮಾರ್ಚ್ 07, 2024


ಬೆಂಗಳೂರು
ಪತ್ರಿಕಾ ಪ್ರಕಟಣೆ
ಕರ್ನಾಟಕ ಸರ್ಕಾರದ ಹೆಮ್ಮೆಯ ಉತ್ಸವವಾದ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಬೆಂಗಳೂರಿನಲ್ಲಿ ನಡೆಯಲಿದೆ. ಉತ್ಸವದ ಉದ್ಘಾಟನಾ ಸಮಾರಂಭ 2024ರ ಫೆಬ್ರವರಿ 29 ರಂದು ವಿಧಾನಸೌಧದ ಮುಂಭಾಗ ನಡೆಯಲಿದ್ದು, ಮಾರ್ಚ್ 7ರಂದು ಸಮಾರೋಪ ಸಮಾರಂಭ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿದೆ.


15 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಈ ಬಾರಿ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಚಲನಚಿತ್ರ ಸಂಘಟನೆಗಳ ಅಂತಾರಾಷ್ಟ್ರೀಯ ಮಹಾ ಒಕ್ಕೂಟ (FIAPF) ಮಾನ್ಯತೆ ಪಡೆದ ಈ ಚಲನಚಿತ್ರೋತ್ಸವ, ರಾಷ್ಟ್ರೀಯ ಚಲನಚಿತ್ರ ಪ್ರತಿನಿಧಿಗಳು, ಚಲನಚಿತ್ರ ನಿರ್ಮಾಪಕರು, ಕಲಾವಿದರು, ನಿರ್ದೇಶಕರು, ತಂತ್ರಜ್ಞರು ಮತ್ತಿತರ ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ. ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಸಮಾರೋಪ ಸಮಾರಂಭ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿದ್ದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಏಷಿಯನ್, ಭಾರತೀಯ ಹಾಗೂ ಕನ್ನಡ ಚಲನಚಿತ್ರ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಬೆಂಗಳೂರಿನ ರಾಜಾಜಿನಗರದಲ್ಲಿರುವ ಒರಿಯಾನ್ ಮಾಲ್ ನ ಪಿವಿಆರ್ ಸಿನಿಮಾದ 11 ಪರದೆಗಳು, ಚಾಮರಾಜ ಪೇಟೆಯಲ್ಲಿರುವ ರಾಜ್ ಕುಮಾರ್ ಕಲಾ ಭವನ, ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರಾ ಚಿತ್ರಸಮಾಜದಲ್ಲಿ ಪ್ರತಿನಿಧಿಗಳಿಗೆ ಮಾರ್ಚ್ 1 ರಿಂದ ಚಲನಚಿತ್ರ ಪ್ರದರ್ಶನ ಆರಂಭವಾಗಲಿದೆ.
ಸುಮಾರು 50ಕ್ಕೂ ಹೆಚ್ಚು ದೇಶಗಳಿಂದ 200ಕ್ಕೂ ಹೆಚ್ಚು ಚಿತ್ರಗಳು ವಿವಿಧ ವಿಭಾಗಗಳಲ್ಲಿ ಪ್ರದರ್ಶನಗೊಳ್ಳಲಿವೆ.
ಚಲನಚಿತ್ರೋತ್ಸವದ ಪ್ರಮುಖ ಅಂಶಗಳು
1 ಸ್ಪರ್ಧಾವಿಭಾಗ
ಏಷ್ಯಾ ಚಲನಚಿತ್ರ ವಿಭಾಗ
ಭಾರತೀಯ ಚಲನಚಿತ್ರಗಳ ವಿಭಾಗ (ಚಿತ್ರಭಾರತಿ)
ಕನ್ನಡ ಚಲನಚಿತ್ರಗಳ ವಿಭಾಗ

-2-

2 ಸಮಕಾಲೀನ ವಿಶ್ವ ಸಿನಿಮಾ

  1. ಕನ್ನಡ ಜನಪ್ರಿಯ ಮನರಂಜನಾ ಚಿತ್ರಗಳು
  2. ವಿಮರ್ಶಕರ ವಾರ
    ​(ಅಂತಾರಾಷ್ಟ್ರೀಯ ಚಲನಚಿತ್ರ ವಿಮರ್ಶಕರ ಒಕ್ಕೂಟದ ಆಯ್ಕೆಯ ಚಿತ್ರಗಳು)
  3. ಜೀವನಚರಿತ್ರೆ (ಬಯೋಪಿಕ್‌ಗಳು)
  4. ದೇಶ ಕೇಂದ್ರಿತ ಸಿನಿಮಾ
  5. ದೇಶದಲ್ಲಿ ಹೆಚ್ಚು ಪರಿಚಿತವಲ್ಲದ ಉಪ ಭಾಷೆಗಳಲ್ಲಿ ತಯಾರಾದ ಚಿತ್ರಗಳ ವಿಶೇಷ ವಿಭಾಗ: ಕೇಳರಿಯದ ಅನೂಹ್ಯ ಭಾರತ.
  6. ಪುನರಾವಲೋಕನ: ಮೃಣಾಲ್ ಸೇನ್, ಚಲನಚಿತ್ರ ನಿರ್ದೇಶಕರು
  7. ಶತಮಾನೋತ್ಸವ ನೆನಪು ಮತ್ತು ಶ್ರದ್ಧಾಂಜಲಿ : ವಿಜಯಭಾಸ್ಕರ್‌ (ಸಂಗೀತ ಸಂಯೋಜಕರು), : ಸಾಬು ದಸ್ತಗೀರ್‌ (ಹಾಲಿವುಡ್‌ನಲ್ಲಿ ಖ್ಯಾತಿ ಪಡೆದ ಮೈಸೂರು ಮೂಲದ ನಟ) ಶತಮಾನೋತ್ಸವ ನೆನಪು, ದೊರೆ-ಭಗವಾನ್‌ ಖ್ಯಾತಿಯ ಭಗವಾನ್‌ (ನಿರ್ದೇಶಕ, ನಿರ್ಮಾಪಕರು), ಲೀಲಾವತಿ (ನಟಿ), ಸಿ.ವಿ.ಶಿವಶಂಕ ರ್ನಿರ್ಮಾಪಕ, ನಿರ್ದೇಶಕರು), ವಾಣಿ ಜಯರಾಂ (ಗಾಯಕಿ) ಮೊದಲಾದವರಿಗೆ ಶ್ರದ್ಧಾಂಜಲಿ.
  8. ಕನ್ನಡ ಸಿನಿಮಾ 90/ ಕರ್ನಾಟಕ 50: ಆಯ್ದ ಚಿತ್ರಗಳ ವಿಭಾಗ
    11.ಮಾನವ ಹಕ್ಕು ಮತ್ತು ಮೌಲ್ಯಗಳನ್ನು ಪ್ರತಿಪಾದಿಸುವ ಸಾಕ್ಷ್ಯಚಿತ್ರಗಳ ವಿಭಾಗ.

ವಿಶ್ವದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡ ಚಿತ್ರಗಳು ಸಮಕಾಲೀನ ವಿಶ್ವ ಸಿನಿಮಾ ವಿಭಾಗಗಳಲ್ಲಿ ಪ್ರದರ್ಶನ ಕಾಣಲಿವೆ.

ಚಿತ್ರಗಳ ವಿವರ www.biffes.org ಯಲ್ಲಿ ನೋಡಬಹುದು.

ಆಹ್ವಾನಿತ ಪ್ರತಿನಿಧಿಗಳಲ್ಲಿ ಚಿತ್ರ ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ಪತ್ರಕರ್ತರು, ವಿಮರ್ಶಕರು, ಚಿತ್ರೋತ್ಸವದ ಸಂಘಟಕರು. ಸಿನಿಮಾ ಶಿಕ್ಷಣ ತಜ್ಞರು ಸೇರಿದ್ದಾರೆ. ವಿದೇಶಿ ರಾಯಭಾರಿ ಕಚೇರಿಗಳ ಅಧಿಕಾರಿ ವರ್ಗ, ವಿದೇಶಿ ಸಾಂಸ್ಕೃತಿ ಸಂಘಟನೆಗಳ ಪ್ರತಿನಿಧಿಗಳನ್ನು ಬಹುಸಂಖ್ಯೆಯಲ್ಲಿ ನಿರೀಕ್ಷಿಸಬಹುದಾಗಿದೆ.

-3-
ಕಾರ್ಯಾಗಾರ, ಸಂವಾದ ಮತ್ತು ತಜ್ಞರಿಂದ ಉಪನ್ಯಾಸ
ಚಿತ್ರೋತ್ಸವ ನಡೆಯುವ ದಿನಗಳಲ್ಲಿ ಚಲನಚಿತ್ರ ಮಾಧ್ಯಮ ಮತ್ತು ಉದ್ಯಮಕ್ಕೆ ಸಂಬಂಧಪಟ್ಟ ತಜ್ಞರಿಂದ ಕಾರ್ಯಾಗಾರ, ಸಂವಾದ ಮತ್ತು ಉಪನ್ಯಾಸಗಳು ನಡೆಯಲಿವೆ. ಈ ವರ್ಷ ನಿಯೋಜಿತವಾದ ಕಾರ್ಯಕ್ರಮಗಳು ಕೆಳಕಂಡಂತಿವೆ.

  1. ಸಿನಿಮಾ ಸಂಕಲನ ಕಲೆಯ ಕುರಿತಂತೆ ಕಾರ್ಯಾಗಾರ.
  2. ಕನ್ನಡ ಸಿನಿಮಾ 90 / ಕರ್ನಾಟಕ 50 ಕುರಿತಂತೆ ಚರ್ಚೆ – ಸಂವಾದ, ಹೆಸರಾಂತ ನಿರ್ದೇಶಕ/ನಿರ್ದೇಶಕ/ ತಂತ್ರಜ್ಞ/ ಸಿನಿ ತಜ್ಞರಿಂದ.
  3. ಚಿತ್ರಕಥಾ ರಚನೆಯ ಕಾರ್ಯಾಗಾರ.
  4. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ವಿ.ಕೆ.ಮೂರ್ತಿ ಸ್ಮಾರಕ ವಿಶೇಷ ಉಪನ್ಯಾಸ
  5. ಸಿನಿಮಾದಲ್ಲಿ ಕೃತಕ ಬುದ್ಧಿ ಮತ್ತೆಯ ಬಳಕೆ.
  6. ಮೃಣಾಲ್‌ ಸೇನ್‌ ಜನ್ಮ ಶತಮಾನೋತ್ಸವ ಉಪನ್ಯಾಸ.
  7. ಚಲನಚಿತ್ರದಲ್ಲಿ ಸಂಗೀತ ಕುರಿತಂತೆ ಸಂವಾದ.
  8. ಚಲನಚಿತ್ರಗಳಲ್ಲಿ ಮಾನವಹಕ್ಕು ಮತ್ತು ಮೌಲ್ಯ ಪ್ರತಿಪಾದನೆ ಕುರಿತಂತೆ ಗೋಷ್ಠಿ
  9. ಕಲೆ / ಚಲನಚಿತ್ರ ವಿನ್ಯಾಸ ಕುರಿತ ಕಾರ್ಯಾಗಾರ.
  10. ಧ್ವನಿ ವಿನ್ಯಾಸ ಕಾರ್ಯಾಗಾರ.
  11. ಚಲನಚಿತ್ರಗಳಲ್ಲಿ ಮಹಿಳಾ ಸಂವೇದನೆ ಕುರಿತು ಚರ್ಚೆ.
    ಈ ಎಲ್ಲ ಕಾರ್ಯಕ್ರಮಗಳು ಪಿವಿಆರ್ ಸಿನಿಮಾದ ಒಂದು ಪ್ರದರ್ಶನ ಮಂದಿರದಲ್ಲಿ ನಡೆಯಲಿವೆ.

ಪ್ರತಿನಿಧಿ ನೋಂದಣಿ
ಚಿತ್ರೋತ್ಸವದ ಜಾಲತಾಣದಲ್ಲಿ ಪ್ರತಿನಿಧಿಗಳ ನೋಂದಣಿ ಕಾರ್ಯ ಫೆಬ್ರವರಿ 15 ರಿಂದ ಆರಂಭವಾಗಲಿದೆ. ಆಸಕ್ತರು ಚಿತ್ರೋತ್ಸವದ ಜಾಲತಾಣಕ್ಕೆ ಹೋಗಿ, ನೀತಿ ನಿಯಮಗಳನ್ನು ಅನುಸರಿಸಿ ಪ್ರತಿನಿಧಿ ಶುಲ್ಕ ಪಾವತಿಸಿ ನೋಂದಾಯಿಸಿಕೊಳ್ಳಬಹುದು.
ಚಿತ್ರೋತ್ಸವದ ಪ್ರತಿನಿಧಿ ಪಾಸ್ / ಪ್ರತಿನಿಧಿ ಶುಲ್ಕ
ಸಾರ್ವಜನಿಕರಿಗೆ – ರೂ. 800/- / ಚಿತ್ರೋದ್ಯಮದ ಸದಸ್ಯರು, ಚಿತ್ರ ಸಮಾಜಗಳ ಸದಸ್ಯರು, ಹಿರಿಯ ನಾಗರಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ರೂ.400/-

ಪ್ರತಿನಿಧಿಗಳ ನೋಂದಣಿ ನೆರವಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 080-23493410 ಇ.ಮೇಲ್: biffesblr@gmail.com

Must Read

spot_img
Share via
Copy link
Powered by Social Snap