HomeNewsARM ಟ್ರೈಲರ್ ಮೆಚ್ಚಿದ ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್

ARM ಟ್ರೈಲರ್ ಮೆಚ್ಚಿದ ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್

ಮಲಯಾಳಂನ ಖ್ಯಾತ ನಟ ಟೊವಿನೋ ಥಾಮಸ್‌,  “ಎಆರ್‌ಎಂ” ಸಿನಿಮಾದ ಟ್ರೈಲರನ್ನು ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು, ಚೆಲುವೇಗೌಡ ಅವರಿಗೆ ಪ್ರದರ್ಶಿಸಿದರು.
ಹೊಂಬಾಳೆ ಫಿಲಂಸ್ ಕಚೇರಿಯಲ್ಲಿ ಟ್ರೈಲರ್ ವೀಕ್ಷಣೆ ಮಾಡಿದ ಪ್ರಶಾಂತ್ ನೀಲ್ ಅವರು ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಶಾಂತ್ ನೀಲ್  ಚಿತ್ರತಂಡಕ್ಕೆ ಅವರು ಶುಭ ಕೋರಿದರು.


ಟೊವಿನೋ ಥಾಮಸ್‌ ನಾಯಕನಾಗಿ ನಟಿಸಿರುವ “ಎಆರ್‌ಎಂ” ಸಿನಿಮಾ  ಸೆಪ್ಟೆಂಬರ್‌ 12ರಂದು  ಒಟ್ಟು ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ. ಈ ಸಿನಿಮಾವನ್ನು ಕನ್ನಡದಲ್ಲಿ ಹೊಂಬಾಳೆ ಫಿಲಂಸ್‌ ಬಿಡುಗಡೆ ಮಾಡಲಿದೆ.
ಮ್ಯಾಜಿಕ್ ಫ್ರೇಮ್ಸ್ ಬ್ಯಾನರ್ ಅಡಿಯಲ್ಲಿ ಲಿಸ್ಟಿನ್ ಸ್ಟೀಫನ್ ಮತ್ತು UGM ಮೂವೀಸ್ ಅಡಿಯಲ್ಲಿ ಡಾ. ಜಕರಿಯಾ ಥಾಮಸ್  ಸಿನಿಮಾವನ್ನು ನಿರ್ಮಿಸಿದ್ದಾರೆ. ಮಲಯಾಳಂ ಚಿತ್ರರಂಗದಿಂದ ಬಾಲಿವುಡ್‌ನಲ್ಲೂ ಛಾಪು ಮೂಡಿಸಿರುವ ಜೋಮನ್ ಟಿ. ಜಾನ್ ಅವರ ಛಾಯಾಗ್ರಹಣ ಮತ್ತು ಶಮೀರ್ ಮುಹಮ್ಮದ್ ಅವರ ಸಂಕಲನ ಚಿತ್ರಕ್ಕಿದೆ.
ದಿಬು ನೈನನ್ ಥಾಮಸ್ಚಿ ತ್ರಕ್ಕೆ ಸಂಗೀತ

ಸಂಯೋಜಿಸಿದ್ದಾರೆ. ಈ ಹಿಂದೆ ಕನಾ ಮತ್ತು ನಟ ಸಿದ್ಧಾರ್ಥ್‌ ಅವರ ಚಿತ್ತಾ ಸಿನಿಮಾಗಳಿಗೂ ಸಂಗೀತ ನೀಡಿದ್ದರು. ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿರುವ ನಟಿಯರಾದ ಕೃತಿ ಶೆಟ್ಟಿ, ಐಶ್ವರ್ಯ ರಾಜೇಶ್ ಮತ್ತು ಸುರಭಿ ಲಕ್ಷ್ಮಿ , ಬೇಸಿಲ್ ಜೋಸೆಫ್, ಜಗದೀಶ್, ಹರೀಶ್ ಉತ್ತಮನ್, ಹರೀಶ್ ಪೆರಾಡಿ, ಕಬೀರ್ ಸಿಂಗ್, ಪ್ರಮೋದ್ ಶೆಟ್ಟಿ, ರೋಹಿಣಿ ಚಿತ್ರದಲ್ಲಿದ್ದಾರೆ.

ಸುಜಿತ್ ನಂಬಿಯಾರ್ಚಿ  ಕಥೆ ಬರೆದಿದ್ದಾರೆ. ಅವರ ಜತೆಗೆ ದೀಪು ಪ್ರದೀಪ್ ಸಾಥ್‌ ನೀಡಿದ್ದಾರೆ. ವಿಕ್ರಮ್ ಮೂರ್, ಫೀನಿಕ್ಸ್ ಪ್ರಭು ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿ ಹೊಂಬಾಳೆ ಫಿಲಂಸ್‌, ತೆಲುಗಿನಲ್ಲಿ ಮೈತ್ರಿ ಮೂವಿ ಮೇಕರ್ಸ್‌ ಮತ್ತು ಹಿಂದಿಯಲ್ಲಿ ಅನಿಲ್ ಥಡಾನಿ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ.

Must Read

spot_img
Share via
Copy link
Powered by Social Snap