HomeNewsಅಪ್ಪ-ಮಗಳ ಬಾಂಧವ್ಯದ ಕಿರುಚಿತ್ರಕ್ಕೆ ಯತಿರಾಜ್ ಸಾರಥ್ಯ..

ಅಪ್ಪ-ಮಗಳ ಬಾಂಧವ್ಯದ ಕಿರುಚಿತ್ರಕ್ಕೆ ಯತಿರಾಜ್ ಸಾರಥ್ಯ..

ನೋಡಿದವರ ಕಣ್ಣಂಚಲ್ಲಿ ನೀರು ತರಿಸಿದ “ಆರಾಧ್ಯ”.

ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಯತಿರಾಜ್, ಕಳೆದವರ್ಷ ಕೊರೋನ ಬಂದ ಮೇಲೆ ಸುಮಾರು ಹದಿನೇಳು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ.” ಆರಾಧ್ಯ ” ಹದಿನೆಂಟನೇ ಕಿರುಚಿತ್ರ.

ಪತ್ರಕರ್ತ ಹಾಗೂ ಕಲಾವಿದನಾಗಿ ಗುರುತಿಸಿಕೊಂಡಿರುವ ಯತಿರಾಜ್ ಈ ಕಿರುಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಅಭಿನಯ ಕೂಡ ಮಾಡಿದ್ದಾರೆ.
ಅಪ್ಪ -ಮಗಳ ಸೆಂಟಿಮೆಂಟ್ ಸನ್ನಿವೇಶಗಳು ಈ ಕಿರುಚಿತ್ರದ ಹೈಲೆಟ್.

ಈ ಕಿರುಚಿತ್ರ ಪ್ರದರ್ಶನ ಹಾಗೂ ಮಾಧ್ಯಮಗೋಷ್ಠಿ ರೇಣುಕಾಂಬ ಥಿಯೇಟರ್ ನಲ್ಲಿ ನಡೆಯಿತು.

ನಾನು ಪತ್ರಕರ್ತನಾಗಿ, ಕಲಾವಿದನಾಗಿ ಚಿತ್ರರಂಗಕ್ಕೆ ಸುಮಾರು ವರ್ಷಗಳ ಪರಿಚಯ. ಕಳೆದವರ್ಷ ಕೊರೋನ ಬಂದ ಮೇಲೆ ಆಯಾ ಸಂದರ್ಭಕ್ಕೆ ತಕ್ಕ ಹಾಗೆ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಆದರೆ “ಆರಾಧ್ಯ” ತುಂಬಾ ಮನಸ್ಸಿಗೆ ಹತ್ತಿರವಾಯಿತು.
ಮನೆಯಲ್ಲಿ ತಂದೆಯಾದವನಿಗೆ ಜವಾಬ್ದಾರಿ ಇಲ್ಲದೇ ಇದ್ದಾಗ, ಮಕ್ಕಳಿಗೆ ಯಾವರೀತಿ ತೊಂದರೆಯಾಗುತ್ತದೆ ಎಂಬುದನ್ನು ಹೇಳುವುದೇ ಇದರ ಕಥೆ.
ನಮ್ಮ ಈ ಪ್ರಯತ್ನವನ್ನು ‌ನಿಮಗೆ ತೋರಿಸುವ ಹಂಬಲವಾಯಿತು. ನಿಮ್ಮ ಮುಂದೆ ತಂದಿದ್ದೇವೆ.‌
“ಆರಾಧ್ಯ” ಪಾತ್ರದಲ್ಲಿ ಬೇಬಿ ಆರಾಧ್ಯ, ಅಂಜಲಿ, ನಾನು ಹಾಗೂ ಶಾಂತಕುಮಾರ್ ಅಭಿನಯಿಸಿದ್ದೇವೆ.
ಜೀವನ್ ಅವರ ಛಾಯಾಗ್ರಹಣ ಹಾಗೂ ಸಂಕಲನ, ವಿನುಮನಸು ಸಂಗೀತ ನಿರ್ದೇಶನ ಈ ಕಿರುಚಿತ್ರಕ್ಕಿದೆ.
ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ ಎಂದರು ಯತಿರಾಜ್.

ನಾನು ಮೂರುಕಿರುಚಿತ್ರಗಳಲ್ಲಿ ನಟಿಸಿದ್ದೇನೆ. ಅದರಲ್ಲಿ ಎರಡು ಯತಿರಾಜ್ ಅವರ ಜೊತೆ. ನಮ್ಮ ಕಿರುಚಿತ್ರವನ್ನು ನೋಡಿ ಹರಸಿ ಎಂದರು ಬೇಬಿ ಆರಾಧ್ಯ.

ಪಾತ್ರಧಾರಿಗಳಾದ ಅಂಜಲಿ, ಶಾಂತಕುಮಾರ್ ಛಾಯಾಗ್ರಾಹಕ ಹಾಗೂ ಸಂಕಲನಕಾರ ಜೀವನ್ ತಮ್ಮ ಕಿರುಚಿತ್ರದ ಬಗ್ಗೆ ಮಾತನಾಡಿದರು.

ಹಿರಿಯ ನಿರ್ದೇಶಕ “ಗೆಜ್ಜೆನಾದ” ವಿಜಯಕುಮಾರ್, ಜಂಕಾರ್ ಮ್ಯೂಸಿಕ್ ನ ಭರತ್ ಜೈನ್ ಹಾಗೂ ಪತ್ರಿಕಾ ಸಂಪರ್ಕಾಧಿಕಾರಿ ವೆಂಕಟೇಶ್ ಅತಿಥಿಗಳಾಗಿ ಆಗಮಿಸಿ, ಕಿರುಚಿತ್ರ ವೀಕ್ಷಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

Must Read

spot_img
Share via
Copy link
Powered by Social Snap