Kannada Beatz
News

ಗೋಲ್ಡನ್‌ ಸ್ಟಾರ್ ಗಣೇಶ್ ಅವರಿಂದ ಅನಾವರಣವಾಯಿತು ‘ಆಪಲ್ ಕಟ್’ ಚಿತ್ರದ ಟ್ರೇಲರ್

ಸಾನ್ವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಿಲ್ಪ ಪ್ರಸನ್ನ ಅವರು ನಿರ್ಮಿಸಿರುವ, ಖ್ಯಾತ ನಿರ್ದೇಶಕ ರಾಜಕಿಶೋರ್ ಅವರ ಪುತ್ರಿ ಸಿಂಧುಗೌಡ ನಿರ್ದೇಶನದ “ಆಪಲ್ ಕಟ್ ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್ ಟ್ರೇಲರ್ ಅನಾವರಣ ಮಾಡಿದರು. ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ದಾಸೇಗೌಡ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಟ್ರೇಲರ್ ಅನಾವರಣ ಮಾಡಿ ಮಾತನಾಡಿದ ನಟ ಗಣೇಶ್, ಟ್ರೇಲರ್ ತುಂಬಾ ಚೆನ್ನಾಗಿದೆ. ನಾನು ಸಾಮಾನ್ಯವಾಗಿ‌ ನನ್ನ ಚಿತ್ರದ ಹೊರತು ಬೇರೆ ಸಮಾರಂಭಗಳಿಗೆ ಹೋಗುವುದು ಕಡಿಮೆ.‌ ಕನ್ನಡ ಚಿತ್ರರಂಗಕ್ಕೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಹಿರಿಯ ನಿರ್ದೇಶಕ ರಾಜಶೇಖರ್ ಅವರ ಪುತ್ರಿ ಈ ಚಿತ್ರದ ನಿರ್ದೇಶಕರು ಎಂದು ತಿಳಿದು ಸಂತೋಷವಾಯಿತು. ಆ ಕಾರಣಕ್ಕಾಗಿ ಹಾಗೂ ಸ್ನೇಹಿತರಾದ ದಾಸೇಗೌಡರ ಪ್ರೀತಿಯ ಆಹ್ವಾನಕ್ಕಾಗಿ ಇಲ್ಲಿಗೆ ಬಂದಿದ್ದೇನೆ.‌ ಟ್ರೇಲರ್ ನೋಡಿದಾಗ ವಿಭಿನ್ನ ಕಂಟೆಂಟ್ ವುಳ್ಳ ಚಿತ್ರ ಎಂದು ತಿಳಿಯುತ್ತದೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕಿ ಸಿಂಧು ಗೌಡ, ನಮ್ಮ ಅಪ್ಪನ ಕಾರ್ಯವೈಖರಿ ನೋಡಿ ನಿರ್ದೇಶನ ಕಲಿತ್ತಿದ್ದೇನೆ. ನಟಿಯಾಗಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ನನಗೆ ನಿರ್ದೇಶಕಿಯಾಗಿ ಮೊದಲ‌ ಚಿತ್ರ. ನಾನೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದೇನೆ. ಕಥೆ ಮೆಚ್ಚಿಕೊಂಡು ನಿರ್ಮಾಣ ಮಾಡಿದ ಶಿಲ್ಪ ಪ್ರಸನ್ನ ಅವರಿಗೆ ಧನ್ಯವಾದ. ‘ಆಪಲ್ ಕಟ್’, ಐದು ಜನ ಗೆಳೆಯರ ಸುತ್ತ ನಡೆಯುವ ಕಥೆ. ಜೊತೆಗೆ ನಾನು ಮಾನವಶಾಸ್ತ್ರ ಓದಿದ್ದು, ಚಿತ್ರದಲ್ಲಿ ಮಾನವಶಾಸ್ತ್ರದ ಒಂದು ಅಂಶ ಸೇರಿಸಲಾಗಿದೆ. ಶವವೊಂದನ್ನು ಸಹ ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಅದು ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದೆ.‌ ನಮ್ಮ ಚಿತ್ರ ಮಾರ್ಚ್ 7 ರಂದು ಬಿಡುಗಡೆಯಾಗುತ್ತಿದೆ. ನನ್ನ ಮೊದಲ ಪ್ರಯತ್ನಕ್ಕೆ ನಿಮ್ಮ ಹಾರೈಕೆ ಇರಲಿ ಎಂದರು.

ಸಾನ್ವಿ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಮೊದಲಬಾರಿ ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ಮಾರ್ಚ್ 7 ರಂದು ರಿಲೀಸ್ ಮಾಡುತ್ತಿದ್ದೇವೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಗಣೇಶ್ ಅವರಿಗೆ ಹಾಗೂ ಚಿತ್ರ ಉತ್ತಮವಾಗಿ ಬರಲು ಸಹಕಾರ ನೀಡಿದ ಚಿತ್ರತಂಡಕ್ಕೆ ಧನ್ಯವಾದ ಎಂದರು ನಿರ್ಮಾಪಕಿ ಶಿಲ್ಪ ಪ್ರಸನ್ನ.

ನಾನು ಈ ಚಿತ್ರದಲ್ಲಿ ಸತ್ಯ ಹೆಸರಿನ ಮಾನವಶಾಸ್ತ್ರ ಪ್ರೊಫೆಸರ್ ಪಾತ್ರ ಮಾಡಿದ್ದೇನೆ ಎಂದು ತಿಳಿಸಿದ‌ ನಾಯಕ ಸೂರ್ಯ ಗೌಡ, ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಗಣೇಶ್ ಹಾಗೂ ದಾಸೇ ಗೌಡ ಅವರಿಗೆ ಧನ್ಯವಾದ ತಿಳಿಸಿದರು.

‘ನಾನು ಮೂಲತಃ ಬಾಗೆಪಲ್ಲಿ ಹುಡುಗಿ. ಒಳ್ಳೆ ಕಂಟೆಂಟ್ ಇರುವ ಮರ್ಡರ್ ಮಿಸ್ಟರಿ ಸಿನಿಮಾದಲ್ಲಿ ಸೈಕಾಲಜಿ ಸ್ಟೂಡೆಂಟ್ ಆಗಿ ನಟಿಸಿದ್ದೇನೆ” ಎಂದು ನಾಯಕಿ ಅಶ್ವಿ‌ನಿ ಪೋಲೆಪಲ್ಲಿ ಹೇಳಿದರು.

ಚಿತ್ರದಲ್ಲಿ ನಟಿಸಿರುವ ನಟಿಯರಾದ ಅಮೃತ‌ ಹಾಗೂ ಮೀನಾಕ್ಷಿ ತಮ್ಮ ಪಾತ್ರದ ಕುರಿತು ಮಾತನಾಡಿದರು. ವೀರ ಸಮರ್ಥ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

Related posts

ನಮ್ ಟಾಕೀಸ್ ಅರ್ಪಿಸುವ ‘ಫ್ಯಾನ್ಸ್ ಕ್ರಿಕೆಟ್ ಲೀಗ್ – 8 ಪಂದ್ಯಾವಳಿ ಈ ಬಾರಿ ಪವರ್ ಸ್ಟಾರ್ ಡಾ. ಪುನೀತ್ ರಾಜ್‍ಕುಮಾರ್ ಅವರ ಸವಿನೆನಪಿನಲ್ಲಿ ನಡೆಯಲಿದ್ದು

Kannada Beatz

N1ಕ್ರಿಕೆಟ್ ಅಕಾಡೆಮಿಯ IPT 12 ಸೀಸನ್-2 ಕ್ರಿಕೆಟ್ ಟ್ರೋಫಿ ಅನಾವರಣ

Kannada Beatz

ವರಮಹಾಲಕ್ಷ್ಮೀ ಹಬ್ಬಕ್ಕೆ ತೆರೆಗೆ ಬರಲಿದೆ ಲೂಸ್ ಮಾದ ಯೋಗೇಶ್ ಅಭಿನಯದ ಚಿತ್ರ..

administrator

Leave a Comment

Share via
Copy link
Powered by Social Snap