ಕನ್ನಡ ಚಿತ್ರರಂಗದಲ್ಲೀಗ ಹೊಸಬರ ಆಗಮನದಿಂದ ಸಂಚಲನವೆದ್ದಿದೆ. ಪ್ರಯೋಗಾತ್ಮಕ ಮತ್ತು ವಿಭಿನ್ನ ಬಗೆಯ ಕಥೆಯ ಕಾರಣದಿಂದ ಚಿತ್ರರಂಗವೀಗ ಕಳೆಗಟ್ಟಿದೆ. ಅಂಥಾದ್ದೇ ಆವೇಗದಲ್ಲಿ
ಎಬಿ ಪಾಸಿಟಿವ್ ಸಿನಿಮಾ ಮೂಲಕ ನವ ನಿರ್ದೇಶಕರ ಆಗಮನವಾಗ್ತಿದೆ. ಅವರೇ ವಿಜಯ್ ಕಾರ್ತಿಕ್. ಸೇಡು, ಮೆಲೋಡಿ, ಸ್ನೇಹದ ದರ್ಬಾರ್ ಹಾಗೂ ರಾಮಭಂಟ ಸಿನಿಮಾದಲ್ಲಿ ನಟಿಸಿರುವ ವಿಜಯ್ ಇದೀಗ ಎಬಿ ಪಾಸಿಟಿವ್ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದು, ನಾಯಕನಾಗಿಯೂ ಈ ಚಿತ್ರದಲ್ಲಿ ನಟಿಸಿದ್ದಾರೆ. ವಿಭಿನ್ನ ಶೀರ್ಷಿಕೆಯ ಎಬಿ ಪಾಸಿಟಿವ್ ಸಿನಿಮಾದ ತಿಳಿಯದ ದಾರಿ ಎಂಬ ಮೆಲೋಡಿ ಹಾಡು ರಿಲೀಸ್ ಆಗಿದ್ದು, ಕೇಳುಗರನ್ನು ಮಂತ್ರ ಮುಗ್ದರನ್ನಾಗಿ ಮಾಡುತ್ತಿದೆ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯದ ಹಾಡಿಗೆ ಅನಿರುದ್ದ್ ಶಾಸ್ತ್ರೀ ಧ್ವನಿಯಾಗಿದ್ದು, ಸಂತೋಷ್ ಕುಮಾರ್ ಟ್ಯೂನ್ ಹಾಕಿದ್ದಾರೆ. ಕಾಫಿನಾಡು ಚಿಕ್ಕಮಗಳೂರಿನ ಪ್ರಕೃತಿ ಸೊಬಗಿನಲ್ಲಿ ಹಾಡನ್ನು ಮಂಜು ಜಿಆರ್ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಹಿಡಿದಿದ್ದಾರೆ.
ಬೆಳದಿಂಗಳ ಬಾಲೆ ಖ್ಯಾತಿಯ ಸುಮನ್ ನಗರ್ಕರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಎಬಿ ಪಾಸಿಟಿವ್ ಸಿನಿಮಾಗೆ ವಿಜಯ್ ಕಾರ್ತಿಕ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿ ನಟಿಸಿದ್ದಾರೆ. ಆದಿತಿ ರಾವ್, ರಚನ ದಶರತ್, ರೋಹಿತ್ ಶಣ್ಮುಖಪ್ಪ , ಆಶಾ ಸುಜಯ್, ಸುಲಾಕ್ಷ್ಯ ಕೈರಾ ಸಂದೀಪ್ ಗೌಡ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಸೈಕಾಲಜಿ ಕಥಾಹಂದರ ಹೊಂದಿರುವ ಎಬಿ ಪಾಸಿಟವ್ ಸಿನಿಮಾವನ್ನು ಚಿಕ್ಕಮಗಳೂರು, ಬೆಂಗಳೂರು, ಗೋಕರ್ಣ, ಕುಂದಾಪುರ, ಹೊನ್ನಾವರ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಕೌಶಲ್ಯ ವಿಜಯಸರಧಿ ನಿರ್ಮಾಣ ಮಾಡಿದ್ದು, ಸಂಪದ ಕ್ರಿಯೇಷನ್ ಹಾಗೂ ಅವತಾರ್ ಟಾಕೀಸ್ ಸಹ ನಿರ್ಮಾಪಕರಾಗಿದ್ದು, ವರುಣ್ ರಾಘವೇಂದ್ರ ಕಾರ್ಯಕಾರಿ ನಿರ್ಮಾಪಕ ಜವಾಬ್ದಾರಿ ಹೊತ್ತುಕೊಂಡಿದ್ದು, ಮಂಜು ಕ್ಯಾಮೆರಾ, ವಿನಯ್ ಕುಮಾರ್ ಕೂರ್ಗ್ ಸಂಕಲನ, ಸಂತೋಷ್ ಕುಮಾರ್ ಸಂಗೀತ ನಿರ್ದೇಶನ, ವಿಶ್ವಾಸ್ ಕೌಶಿಕ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ರೆಡಿಯಾಗ್ತಿರುವ ಎಪಿ ಪಾಸಿಟಿವ್ ಸಿನಿಮಾವನ್ನು ಮೇ ಮೊದಲ ವಾರ ಅಥವಾ ಕೊನೆಯ ವಾರದಲ್ಲಿ ತೆರೆಗೆ ತರೋದಿಕ್ಕೆ ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ.