Kannada Beatz
News

ದಿಗ್ಗಜ ಕಲಾವಿದರ ಅಭಿಮಾನಿಗಳಿಂದ ‘ಫಸ್ಟ್ ಡೇ ಫಸ್ಟ್ ಶೋ’ ಟ್ರೇಲರ್ ರಿಲೀಸ್ …

ಕನ್ನಡ ಚಿತ್ರರಂಗದ ಸುತ್ತ ಸಾಗುವ ಚಿತ್ರಕ್ಕೆ ಗಿರೀಶ್ ನಿರ್ದೇಶನ

ಗಿರೀಶ್ ನಿರ್ದೇಶನದ ‘ಫಸ್ಟ್ ಡೇ ಫಸ್ಟ್ ಶೋ’ ಚಿತ್ರವು ಜುಲೈ 04ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಕಲಾವಿದರ‌ ಸಂಘದಲ್ಲಿ ಇತ್ತೀಚೆಗೆ ನಡೆಯಿತು. ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಡಾ.ರಾಜಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಹಾಗೂ ಅಂಬರೀಶ್ ಅವರ ಅಭಿಮಾನಿಗಳು ಬೆಂಬಲ ಕೊಟ್ಟಿದ್ದು

ವಿಶೇಷವಾಗಿತ್ತು. ನಿರ್ಮಾಪಕ ಸಾರಾ ಗೋವಿಂದು, ವೀರಕಪುತ್ರ ಶ್ರೀನಿವಾಸ್, ಮಾಸ್ಟರ್‍ ಮಂಜು, ಅಂಬರೀಶ್‍ ಅಭಿಮಾನಿಗಳಾದ ಬೇಲೂರು ಸೋಮಶೇಖರ್ ಹಾಗೂ ರುದ್ರೇಗೌಡ್ರು ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಚಿತ್ರದಲ್ಲಿ ಜೀವಿತಾ ವಸಿಷ್ಟ, ರೋಹಿತ್ ಶ್ರೀನಾಥ್, ಬಿ.ಎಂ. ವೆಂಕಟೇಶ್, ಗಿಲ್ಲಿ ನಟ ಮುಂತಾದವರು ನಟಿಸಿದ್ದು, ಗಿರೀಶ್ ಕನಸಿಗೆ ಊರ್ಮಿಳಾ ಕಿರಣ್ ಹಣ ಹೂಡಿದ್ದಾರೆ. ಉಜ್ವಲ್ ಚಂದ್ರ ಸಂಕಲನ, ರಾಕೇಶ್ ಸಿ ತಿಲಕ್ ಹಾಗೂ ಅರುಣ್ ಕುಮಾರ್ ಛಾಯಾಗ್ರಹಣ, ಸ್ವಾಮಿನಾಥನ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.

Kannadascreens #sandalwood #Firstdayfirstshow #trailerrelease #RohithSrinath

Related posts

ಸ್ಯಾಂಡಲ್ ವುಡ್ ಕಪ್-2024 ಬ್ಯಾಡ್ಮಿಂಟನ್ ಗೆ ತೆರೆ..ಮನುರಂಜನ್ ನಾಯಕತ್ವದ ರಣಧೀರ ರೈಡರ್ಸ್ ತಂಡಕ್ಕೆ ಒಲಿದ ವಿಜಯಮಾಲೆ.. ಅಪ್ಪು ಪ್ಯಾಂಥರ್ಸ್ ತಂಡ ರನ್ನರ್

Kannada Beatz

ಸುಳ್ಯದಲ್ಲಿ ಶುರುವಾಯಿತು “ಹೋಮ್ ಸ್ಟೇ” ನಿರ್ದೇಶಕನ ಹೊಸಚಿತ್ರ..

Kannada Beatz

‘ಜುಗಲ್ ಬಂದಿ’ ಕಥೆ ಹೇಳಲಿದ್ದಾರೆ ದಿವಾಕರ್ ಡಿಂಡಿಮ!

administrator

Leave a Comment

Share via
Copy link
Powered by Social Snap