Kannada Beatz
News

ಫೋಟೋಗಾಗಿ ನದಿಗೆ ಇಳಿದವರ ಪ್ರಾಣವೇ ಹೋಯ್ತು..! ನೋಡಿ.

ಮೋಜಿಗಾಗಿ ನದಿಗಿಳಿದ ಒಂದೇ ಕುಟುಂಬದ ಮೂವರು ಜಲಸಮಾಧಿಯಾಗಿರುವ ಘಟನೆ ತೆಲಂಗಾಣದ ಜನಗಾಮ ಜಿಲ್ಲೆಯ ನರ್ಮೆಟ್ಟ ಮಂಡಲ್ ನ ಮೊಮ್ಮಕೂರು ನದಿಯಲ್ಲಿ ನಡೆದಿದೆ.

ಮೊಮ್ಮಕೂರು ನದಿಯಲ್ಲಿ ಮಸ್ತಿ ಮಾಡುತ್ತಿದ್ದಾಗ ಮೂವರು ಮುಳುಗಿದ ವಿಡಿಯೋ ವೈರಲ್ ಆಗಿದೆ. ಮೇಕಲಗಟ್ಟು ಪ್ರದೇಶದ ಅವಿನಾಶ್ ಎಂಬುವರು ತಮ್ಮ ಪತ್ನಿ ದಿವ್ಯ ಹಾಗೂ ಆಕೆಯ ಇಬ್ಬರು ಸಹೋದರಿಯರ ಜೊತೆ ಮೊಮ್ಮಕೊರು ಡ್ಯಾಂಗೆ ಪಿಕ್ ನಿಕ್ ಗೆಂದು ಬಂದಿದ್ದರು. ಈ ವೇಳೆ ಮೋಜು ಮಸ್ತಿ ಮಾಡುತ್ತಿದ್ದಾಗ ನಿಂತದಲ್ಲಿಯೇ ಉರುಳಿ ಬಿದ್ದ ಮೂವರು ಮತ್ತೆ ಮೇಲೇಳಲಿಲ್ಲ.

ಇನ್ನು ದಡದ ಮೇಲಿದ್ದ ಅವಿನಾಶ್ ಪತ್ನಿ ದಿವ್ಯ ಕಣ್ಮುಂದೆ ಮೂವರು ಜಲಸಮಾಧಿಯಾಗುತ್ತಿದ್ದನ್ನು ನೋಡಿ ಸ್ಥಳೀಯರನ್ನು ಕೂಗಿ ಕರೆದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮೂವರ ಪ್ರಾಣ ಪಕ್ಷಿ ಹಾಕಿಹೋಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಸ್ವಿಮ್ಮರ್ ಗಳ ಸಹಾಯದಿಂದ ಮೂವರ ಮೃತದೇಹಗಳನ್ನು ಮೇಲೆ ತಂದ್ದಿದ್ದು, ತನಿಖೆ ಮುಂದುವರೆದಿದೆ.

Related posts

ಪಾರುಪಾರ್ವತಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ!

Kannada Beatz

ಹೊರಬಿತ್ತು ಬಹುನಿರೀಕ್ಷಿತ, ಸಿನಿಮಾ ಅಭಿಮಾನಿಗಳು ಸೇರಿ ಆಡುವಂತಹ, ‘ಫ್ಯಾನ್ಸ್ ಕ್ರಿಕೆಟ್ ಲೀಗ್’ ಈ ಸಾಲಿನ ದಿನಾಂಕಗಳು

Kannada Beatz

ಭಾವಚಿತ್ರ”ದ ಹಾಡುಗಳ ಬಿಡುಗಡೆ*

administrator

Leave a Comment

Share via
Copy link
Powered by Social Snap