Kannada Beatz
News

ನೂರಕ್ಕೂ ಅಧಿಕ ನಟ ನಟಿಯರಿಂದ ಏಕಕಾಲಕ್ಕೆ “ತತ್ಸಮ ತದ್ಭವ” ಚಿತ್ರದ ಪೋಸ್ಟರ್ ಬಿಡುಗಡೆ .

ಇದು ಮೇಘನರಾಜ್ ಸರ್ಜಾ ನಟಿಸಿರುವ ಚಿತ್ರ

ನಟಿ ಮೇಘನಾ ರಾಜ್ ಸರ್ಜಾ ಬಹಳ ದಿನಗಳ ನಂತರ ಮತ್ತೆ ನಟನೆಗೆ ಮರಳಿರುವ ಚಿತ್ರ “ತತ್ಸಮ ತದ್ಭವ”ದ ಫಸ್ಟ್ ಲುಕ್ ಪೋಸ್ಟರ್ ಹೊರಬಂದಿದೆ.

ನಿರ್ದೇಶಕ ಪನ್ನಗ ಭರಣ ಹಾಗೂ ಸ್ಪೂರ್ತಿ ಅನಿಲ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನೂತನ ಪ್ರತಿಭೆ ವಿಶಾಲ್ ಆತ್ರೇಯ ನಿರ್ದೇಶಿಸಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದೆ.

ವಿಶೇಷವೆಂದರೆ, ಫೆಬ್ರವರಿ 19 ರಂದು “ತತ್ಸಮ ತದ್ಭವ” ಚಿತ್ರದ ಫಸ್ಟ್ ಲುಕ್ ಪೋಸ್ಟರನ್ನು ನೂರಕ್ಕೂ ಹೆಚ್ಚು ನಟನಟಿಯರು ತಮ್ಮ ಸಮಾಜಿಕ ಜಾಲತಾಣದಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲ. ಪ್ರಪಂಚದಾದ್ಯಂತ 30 ಕ್ಕೂ ಹೆಚ್ಚಿನ ದೇಶಗಳಲ್ಲಿರುವ ಕನ್ನಡ ಹಾಗೂ ಇತರ ಸಂಘಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಪ್ರೋತ್ಸಾಹ ನೀಡಿರುವುದು ಹೆಮ್ಮೆಯ ವಿಷಯ..

ಚಿತ್ರದ ಸುಮಧುರ ಹಾಡುಗಳಿಗೆ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಶ್ರೀನಿವಾಸ್ ರಾಮಯ್ಯ ಛಾಯಾಗ್ರಹಣ, ರವಿ ಆರಾಧ್ಯ ಸಂಕಲನ, ನಿಖಿತ ಪ್ರಿಯ ವಸ್ತ್ರವಿನ್ಯಾಸ ಹಾಗೂ ಸಂತೋಷ್ ಪಂಚಾಲ್ ಕಲಾ ನಿರ್ದೇಶನವಿರುವ “ತತ್ಸಮ ತದ್ಭವ” ಚಿತ್ರಕ್ಕಿದೆ.

Related posts

ಎಲ್ಲಾ ಕಡೆ “ಹೆಡ್ ಬುಷ್” ಆರ್ಭಟ

Kannada Beatz

ಬಹು ನಿರೀಕ್ಷಿತ “ಹೆಡ್ ಬುಷ್” ಚಿತ್ರದ ಚಿತ್ರೀಕರಣ ಪೂರ್ಣ.

Kannada Beatz

‘ತ್ರಿವಿಕ್ರಮ’ ರಂಗೀನ್ ಕಾರ್ಯಕ್ರಮ

Kannada Beatz

Leave a Comment

Share via
Copy link
Powered by Social Snap