Kannada Beatz
News

ಇದೇ ಶುಕ್ರವಾರದಿಂದ ಚಿತ್ರಮಂದಿರಗಳಲ್ಲಿ “ಕರ್ಮಣ್ಯೇ ವಾಧಿಕರಸ್ತೆ”

ವಿದೇಶದಲ್ಲಿ ವಾಸವಾಗಿರುವ ರಮೇಶ್ ರಾಮಯ್ಯ ಅವರು ನಿರ್ಮಿಸಿರುವ ಶ್ರೀಹರಿ ಆನಂದ್ ನಿರ್ದೇಶನದ “ಕರ್ಮಣ್ಯೇ ವಾಧಿಕಾರಸ್ತೆ” ಚಿತ್ರ ಜುಲೈ 15 ರ ಶುಕ್ರವಾರದಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಭಗವದ್ಗೀತೆಯಲ್ಲಿ ಕೃಷ್ಣ, ಅರ್ಜುನನಿಗೆ ಹೇಳಿದ ಮಾತೇ ಈಗ ಚಿತ್ರದ ಶೀರ್ಷಿಕೆಯಾಗಿದೆ. ಇದೇ ಹದಿನೈದರಂದು ಬಿಡುಗಡೆಯೂ ಆಗುತ್ತಿದೆ. ಮೊದಲು “ಟಿಪಿಕಲ್ ಬ್ರಾಹ್ಮಣ” ಎಂಬ ಶೀರ್ಷಿಕೆಯಿತ್ತು. ಆನಂತರ ಬದಲಾಯಿತು. ಉತ್ತಮ ಅಂಶಗಳಿರುವ ಈ ಚಿತ್ರ ಚಿತ್ರತಂಡದ ಸಹಕಾರದಿಂದ ಚೆನ್ನಾಗಿ ಬಂದಿದೆ. ಹಲವಾರು ಮಲ್ಟಿಪ್ಲೆಕ್ಸ್ ಗಳಲ್ಲಿ ಹಾಗೂ ಮೂವತ್ತಕ್ಕೂ ಸಿಂಗಲ್ ಸ್ಕ್ರೀನ್ ಗಳಲ್ಲಿ ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಎನ್ನುತ್ತಾರೆ ನಿರ್ದೇಶಕ ಶ್ರೀಹರಿ ಆನಂದ್.

ನಾನು ಹಾಗೂ ನಿರ್ದೇಶಕರು ಆರು ವರ್ಷಗಳ ಗೆಳೆಯರು. ಒಟ್ಟಾಗಿ ಕಿರುಚಿತ್ರಗಳಲ್ಲಿ ಅಭಿನಯಿಸಿದ್ದೇವೆ. ಈಗ ಈ ಚಿತ್ರದ ನಾಯಕನಾಗಿ ಅಭಿನಯಿಸಿದ್ದೇನೆ. ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಜೂನ್ 21 ರಂದು ಯು ಎಸ್ ಎ ನಲ್ಲಿ ಪ್ರೀಮಿಯರ್ ಶೋ ನಡೆಯಿತು. ಅಲ್ಲಿನ‌ ಜನರು ಮೆಚ್ಚಿಕೊಂಡಿದ್ದಾರೆ. ಇಲ್ಲೂ ಕೂಡ ಮೆಚ್ಚಿಕೊಳ್ಳುವ ಭರವಸೆಯಿದೆ ಎಂದರು ನಾಯಕ ಪ್ರತೀಕ್ ಸುಬ್ರಮಣಿ.

ಕಳೆದ ತಿಂಗಳು‌ ೩೫೦ ಕ್ಕೂ ಅಧಿಕ ಜನ ನಮ್ಮ ಚಿತ್ರವನ್ನು ಯು ಎಸ್ ಎ ನಲ್ಲಿ ನೋಡಿ ಮೆಚ್ಚಿಕೊಂಡಿದ್ದು ನನಗೆ ಸಂತೋಷವಾಗಿದೆ. ಇಲ್ಲಿಯೂ ಸಹ‌ ನಮ್ಮ ಚಿತ್ರಕ್ಕೆ ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ರಮೇಶ್ ರಾಮಯ್ಯ.

ಸಂಗೀತ ನಿರ್ದೇಶಕ ರಿತ್ವಿಕ್ ಮುರಳಿಧರ್, ಛಾಯಾಗ್ರಾಹಕ ಉದಯ್ ಲೀಲಾ ಹಾಗೂ ಸಂಕಲನಕಾರ ವಿಜೇತ್ ಚಂದ್ರ ಈ ಚಿತ್ರದ ಕುರಿತು ತಮ್ಮ ಅನುಭವ ಹಂಚಿಕೊಂಡರು.

ಪ್ರತೀಕ್ ಸುಬ್ರಮಣಿ ಅವರು ನಾಯಕನಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ದಿವ್ಯ, ತ್ರೆಸಿಂಗ್ ಡೋಲ್ಮಾ, ನಾಟ್ಯ ರಂಗ ಉಗ್ರಂ ಮಂಜು ಮುಂತಾದವರಿದ್ದಾರೆ.

Related posts

ರಾಘವೇಂದ್ರ ರಾಜಕುಮಾರ್ ಅವರಿಂದ ಅನಾವರಣವಾಯಿತು ರಾಮಾಚಾರಿ 2.0″ ಚಿತ್ರದ ಟ್ರೇಲರ್

Kannada Beatz

ಜೀ5 ಒಟಿಟಿಯಲ್ಲಿ ಮಲಯಾಳಂನ ‘ನುನಕುಳಿ’ ಧಮಾಕ..100 ಮಿಲಿಯನ್ಸ್ ಸ್ಕ್ರೀಮಿಂಗ್ ಮಿನಿಟ್ ಕಂಡ ಬೇಸಿಲ್ ಜೋಸೆಫ್ ಸಿನಿಮಾ

Kannada Beatz

ಟಿಪಿಎಲ್ ಸೀಸನ್ -2ಗೆ ಸಿದ್ದವಾಗ್ತಿದೆ ವೇದಿಕೆ – ಮಾರ್ಚ್ ನಲ್ಲಿ ನಡೆಯಲಿದೆ ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ -2

Kannada Beatz

Leave a Comment

Share via
Copy link
Powered by Social Snap