ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಉತ್ತಮ ತಂಡಗಳಲ್ಲಿ ಒಂದು. ನಮ್ಮ ಹೆಮ್ಮೆಯ ಕನ್ನಡಿಗ ಕೆಎಲ್ ರಾಹುಲ್ ಅವರು ಭರ್ಜರಿ ಫಾರ್ಮ್ನಲ್ಲಿ ಮಿಂಚುತ್ತಿರುವ ತಂಡ. ಇದುವರೆಗೂ ಸಹ ಯಾವುದೇ ರೀತಿಯ ಕಾಂಟ್ರವರ್ಸಿ ಮಾಡಿಕೊಳ್ಳದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇದೀಗ ದೊಡ್ಡದೊಂದು ಕಾಂಟ್ರವರ್ಸಿ ಯಲ್ಲಿ ಸಿಲುಕಿದೆ.
ಹೌದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕ ಇದೀಗ ಎರಡು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ. ಹೌದು ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಅವರು ಜಪಾನ್ ನಲ್ಲಿ ಎರಡು ವರ್ಷಗಳ ಕಾರಾಗೃಹ ಶಿಕ್ಷೆಗೆ ಒಳಗಾಗಿದ್ದಾರೆ.
230 ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇರುವ ವಾಡಿಯಾ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ನೆಸ್ ವಾಡಿಯಾ ಅವರು ಕಳೆದ ಮಾರ್ಚ್ 25 ರಂದು ಜಪಾನ್ ನ ವಿಮಾನ ನಿಲ್ದಾಣವೊಂದರಲ್ಲಿ ಚೆಕ್ಕಿಂಗ್ ನಡೆಸುವ ವೇಳೆ ಗಾಂಜಾ ದೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು. ಹೌದು ನೆಸ್ ವಾಡಿಯಾ ಅವರ ಜೇಬಿನಲ್ಲಿ 25 ಗ್ರಾಂ ಗಾಂಜಾ ಇತ್ತು.
ವಿಮಾನ ನಿಲ್ದಾಣ ತಪಾಸಣಾ ತಂಡ ನೆಸ್ ವಾಡಿಯಾ ಅವರನ್ನು ಚೆಕ್ ಮಾಡುವ ವೇಳೆ ಗಾಂಜಾ ದೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಾರಣ ಅವರನ್ನು ಬಂಧಿಸಲಾಯಿತು. ನಂತರ ನೆಸ್ ವಾಡಿಯಾ ಅವರು ಗಾಂಜಾವನ್ನು ನನ್ನ ಸ್ವಂತ ಉಪಯೋಗಕ್ಕೆ ತಂದಿದ್ದೆ ಹೊರತು ಮಾರಾಟಕ್ಕಲ್ಲ ಎಂದು ಹೇಳಿಕೆಯನ್ನು ನೀಡಿದರು. ಆದರೂ ಸಹ ಜಪಾನ್ ಇದೀಗ ನೆಸ್ ವಾಡಿಯಾ ಅವರಿಗೆ ಎರಡು ವರ್ಷಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ.