HomeNews‘ಕೇಳ್ರಪ್ಪೋ ಕೇಳಿ’ ಹಾಡಿಗೆ ನಾಲ್ಕು ಲಕ್ಷ ಮೆಚ್ಚುಗೆ - ಸೆಪ್ಟೆಂಬರ್ ನಲ್ಲಿ ‘ವಾಸಂತಿ ನಲಿದಾಗ’ ತೆರೆಗೆ...

‘ಕೇಳ್ರಪ್ಪೋ ಕೇಳಿ’ ಹಾಡಿಗೆ ನಾಲ್ಕು ಲಕ್ಷ ಮೆಚ್ಚುಗೆ – ಸೆಪ್ಟೆಂಬರ್ ನಲ್ಲಿ ‘ವಾಸಂತಿ ನಲಿದಾಗ’ ತೆರೆಗೆ ಬರಲು ಸಿದ್ದ

‘ವಾಸಂತಿ ನಲಿದಾಗ’ ಹೀಗೊಂದು ವಿಭಿನ್ನ ಶೀರ್ಷಿಕೆ ಹೊತ್ತ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಗೆ ಸಿದ್ದವಾಗಿ ನಿಂತಿದೆ. ಟೈಟಲ್ ಕೇಳಿ ಇದೊಂದು ಕಾಮಿಡಿ ಜಾನರ್ ಸಿನಿಮಾ ಅಂದುಕೊಂಡವರಿಗೆ ಚಿತ್ರತಂಡ ನೀಡುವ ಉತ್ತರ ಪಕ್ಕಾ ಕಾಲೇಜ್ ಯೂತ್ ಲವ್ ಸ್ಟೋರಿ ಸಬ್ಜೆಕ್ಟ್ ಸಿನಿಮಾ ಎಂದು. ಹೀಗೆ ಟೈಟಲ್ ಮೂಲಕವೇ ಸುದ್ದಿಯಲ್ಲಿರುವ ಈ ಚಿತ್ರದ ವೀಡಿಯೋ ಸಾಂಗ್ ಬಿಡುಗಡೆಯಾಗಿ ಸೋಶಿಯಲ್ ಮೀಡಿಯಾ ಅಂಗಳದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಹೌದು, ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ ಚಿತ್ರತಂಡ ಚಿತ್ರದ ಪ್ರಚಾರ ಕಾರ್ಯದಲ್ಲೂ ಬ್ಯುಸಿಯಾಗಿದೆ. ಚಿತ್ರದ ಬಹು ನಿರೀಕ್ಷಿತ ಹಾಡಾದ ‘ಕೇಳ್ರಪ್ಪೋ ಕೇಳಿ’ ಹಾಡನ್ನು ಬಿಡುಗಡೆ ಮಾಡಿ ಗಮನ ಸೆಳೆದಿದೆ. ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿರುವ ಈ ಸಾಂಗ್ ಕಾಲೇಜ್ ಹುಡುಗರ ಮನಕದ್ದಿದ್ದು ನಾಲ್ಕು ಲಕ್ಷಕ್ಕೂ ಹೆಚ್ಚಿನ ವೀವ್ಸ್ ಪಡೆದುಕೊಂಡಿದೆ. ಗೌಸ್ ಫೀರ್ ಸಾಹಿತ್ಯ ಕೃಷಿಯಲ್ಲಿ ಅರಳಿದ ಈ ಹಾಡಿಗೆ ಶ್ರೀ ಗುರು ಅವರ ಸಂಗೀತ ನಿರ್ದೇಶನವಿದೆ. ಸ್ಟಾರ್ ಸಿಂಗರ್ ಶಶಾಂಕ್ ಶೇಷಗಿರಿ, ಪ್ರಿಯಾಂಕ ಶ್ರೀಗುರು, ಶ್ರೀಗುರು ಹಾಡಿಗೆ ದನಿಯಾಗಿದ್ದಾರೆ.

ನವ ಪ್ರತಿಭೆಗಳೇ ತುಂಬಿರುವ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ರೋಹಿತ್ ಶ್ರೀಧರ್, ಭಾವನ ಶ್ರೀನಿವಾಸ್, ಜೀವಿತ ವಸಿಷ್ಠ ನಟಿಸಿದ್ದಾರೆ. ಜೇನುಗೂಡು ಬ್ಯಾನರ್ ನಡಿ ಸಿನಿಮಾ ನಿರ್ಮಾಣವಾಗಿದ್ದು, ಜೇನುಗೂಡು ಕೆ.ಎನ್ ಶ್ರೀಧರ್ ಬಂಡವಾಳ ಹೂಡಿದ್ದು, ರವೀಂದ್ರ ವಂಶಿ ಆಕ್ಷನ್ ಕಟ್ ಹೇಳಿದ್ದಾರೆ. ರವೀಂದ್ರ ವಂಶಿ ಈ ಹಿಂದೆ ಪುಟಾಣಿ ಸಫಾರಿ, ವರ್ಣಮಯ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿ ಸ್ಯಾಂಡಲ್ ವುಡ್ ಅಂಗಳದಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ರೋಮ್ಯಾಂಟಿಕ್ ಕಥಾಹಂದರ, ಕಾಲೇಜ್ ಯೂತ್ ಲವ್ ಸ್ಟೋರಿ ಒಳಗೊಂಡ ಸಬ್ಜೆಕ್ಟ್ ಹೊತ್ತು ಹೊಸ ಪ್ರತಿಭೆಗಳೊಂದಿಗೆ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ.

ಚಿತ್ರದ ಹಾಡುಗಳಿಗೆ ಯೋಗರಾಜ್ ಭಟ್, ನಾಗೇಂದ್ರ ಪ್ರಸಾದ್, ಗೌಸ್ ಫೀರ್ ಸಾಹಿತ್ಯವಿದೆ. ಸಿ.ರವಿಚಂದ್ರನ್ ಸಂಕಲನ, ಪ್ರಮೋದ್ ಭಾರತೀಯ ಛಾಯಾಗ್ರಾಹಣ ಚಿತ್ರಕ್ಕಿದೆ. ಸಾಯಿಕುಮಾರ್, ಸುಧಾರಾಣಿ, ಸಾಧುಕೋಕಿಲ, ಮಂಜು ಪಾವಗಡ, ಮಿಮಿಕ್ರಿ ಗೋಪಿ ಒಳಗೊಂಡ ಅನುಭವಿ ಹಾಗೂ ಕಲರ್ ಫುಲ್ ಕಲಾವಿದರ ದಂಡು ಚಿತ್ರದಲ್ಲಿದೆ. ಸೆಪ್ಟೆಂಬರ್ ಎರಡನೇ ವಾರದಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.

Must Read

spot_img
Share via
Copy link
Powered by Social Snap