HomeNewsಸ್ಯಾಂಡಲ್ ವುಡ್ ಕಪ್-2024 ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಜೆರ್ಸಿ ಬಿಡುಗಡೆ ಮಾಡಿದ ಕಿಚ್ಚ ಸುದೀಪ್… ಸೆಪ್ಟೆಂಬರ್...

ಸ್ಯಾಂಡಲ್ ವುಡ್ ಕಪ್-2024 ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಜೆರ್ಸಿ ಬಿಡುಗಡೆ ಮಾಡಿದ ಕಿಚ್ಚ ಸುದೀಪ್… ಸೆಪ್ಟೆಂಬರ್ 28-29ರಂದು ನಡೆಯಲಿವೆ ಪಂದ್ಯಾವಳಿಗಳು

ಸ್ಯಾಂಡಲ್ವುಡ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಜೆರ್ಸಿ ಅನಾವರಣ ಹಾಗೂ ಪ್ಲೇಯರ್ಸ್ ಸೆಲೆಕ್ಷನ್ ಕಾರ್ಯಕ್ರಮ ನಿನ್ನೆ ಬೆಂಗಳೂರಿನ ಬನಶಂಕರಿಯ ಖಾಸಗಿ ಕ್ಲಬ್ ನಲ್ಲಿ ನಡೆಯಿತು. ಕಿಚ್ಚ ಸುದೀಪ್ ಅತಿಥಿಯಾಗಿ ಆಗಮಿಸಿ ಜೆರ್ಸಿ ಅನಾವರಣ ಮಾಡಿ ಇಡೀ ತಂಡಗಳಿಗೆ ಶುಭಾಶಯ ತಿಳಿಸಿದರು. ಈ ಟೂರ್ನಿಯಲ್ಲಿ ಸ್ಯಾಂಡಲ್‌ವುಡ್ ತಾರೆಯರು, ಕಿರುತೆರೆ ಕಲಾವಿದರು, ಮಾಧ್ಯಮದವರು ಹಾಗೂ ಟೆಕ್ನಿಷಿಯನ್‌ಗಳು ಆಡುತ್ತಿದ್ದಾರೆ. ಸೆಪ್ಟೆಂಬರ್ 28-29ರಂದು ಈ ಪಂದ್ಯಾವಳಿಗಳು ನಡೆಯುತ್ತಿವೆ.

ಈ ವೇಲೆ ನಟ ಕಿಚ್ಚ ಸುದೀಪ್ ಮಾತನಾಡಿ, “ನಮ್ಮ ಇಂಡಸ್ಟ್ರೀಯಲ್ಲಿ ತುಂಬಾ ಜನ ಕಲಾವಿದರು, ತಂತ್ರಜ್ಞರು ಇಷ್ಟು ಜನ ಬ್ಯಾಡ್ಮಿಟನ್ ಆಡಲಿದ್ದಾರೆ ಎಂದು ಗೊತ್ತಿರಲಿಲ್ಲ. ನಾನು ಇಲ್ಲಿ ಇರುವುದಕ್ಕೆ ಖುಷಿಯಾಗುತ್ತಿದೆ. “ನನ್ನ ಚಿತ್ರರಂಗ ಇವತ್ತು ಬೇಡದ ವಿಷಯಗಳಿಗೆ ಹೆಚ್ಚು ಸದ್ದು ಮಾಡುತ್ತಿದೆ. ಓಳ್ಳೆ ಸುದ್ದಿಗಳಿಂದ ಸದ್ದು ಮಾಡುತ್ತಿಲ್ಲ. ಬರೀ ಕೆಟ್ಟ ಸುದ್ದಿಯಿಂದಲೇ ಸದ್ದು ಮಾಡುತ್ತಿದೆ. ಅಂತಹದ್ರಲ್ಲಿ ಒಂದು ಬ್ಯೂಟಿಫುಲ್ ಮೂವ್ಮೆಂಟ್ ಇದು. ಇಲ್ಲಿ ಎಲ್ಲರೂ ಒಟ್ಟಿಗೆ ಸೇರಿದ್ದೀವಿ ಅಂದರೆ, ನಮ್ಮ ಚಿತ್ರರಂಗದ ಬಗ್ಗೆ ತಪ್ಪು ತಿಳಿದುಕೊಂಡವರಿಗೆ ಒಳ್ಳೆಯ ಸಂದೇಶವನ್ನು ಕಳುಹಿಸಿದ್ದೇವೆ. ನಮ್ಮ ಕನ್ನಡ ಚಿತ್ರರಂಗದ ಬಗ್ಗೆ ನಮಗೆ ಹೆಮ್ಮೆ ಇದೆ. ಎಲ್ಲರಿಗೂ ಒಳ್ಳೆದಾಗಲಿ” ಎಂದು ತಿಳಿಸಿದ್ದಾರೆ.

ಹಿರಿಯ ನಟ ಹಾಗೂ ಮಾಜಿ ಸಚಿವರಾದ ಬಿ.ಸಿ.ಪಾಟೀಲ್ ಮಾತನಾಡಿ, “ತುಂಬಾ ಸಂತೋಷವಾಗ್ತಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘ ಸ್ಯಾಂಡಲ್ ವುಡ್ ಕಪ್-2024 ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಹಮ್ಮಿಕೊಂಡಿದೆ. ಒಂದ್ಕಡೆ ಸಹಾಯ ದೃಷ್ಟಿಯಿಂದ, ಮತ್ತೊಂದ್ಕಡೆ ಇಡೀ ಚಿತ್ರರಂಗವನ್ನು ಒಂದೇ ವೇದಿಕೆಯಲ್ಲಿ ಸೇರಿಸಿದ್ದಾರೆ. ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗಿಯಾಗುತ್ತಿರುವ ಇಡೀ ತಂಡಗಳಿ ಒಳ್ಳೆಯದಾಗಲಿ” ಎಂದರು.

ಜೆಡಿಎಸ್ ಮುಖಂಡ ಟಿ.ಎ.ಶರವಣ ಮಾತನಾಡಿ, “ನಾವು ಈ ಹಿಂದೆ ಅಪ್ಪು ಕಪ್ ಎಂದು ಮಾಡಿದ್ದೇವು. ಅದು ಎರಡನೇ ಎಪಿಸೋಡ್ ಆಗಿದೆ. ತುಂಬಾ ಚೆನ್ನಾಗಿ ಎರಡು ಎಡಿಷನ್ ಮುಗಿದಿದೆ. ಬರುವ ವರ್ಷ ದುಬೈನಲ್ಲಿ ಮಾಡೋಣಾ ಎಂದುಕೊಂಡಿದ್ದೇವೆ. ಅದೇ ರೀತಿ ಸ್ಯಾಂಡಲ್ ವುಡ್ ಕಪ್-2024 ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಡೆಯಬೇಕು. ನಾನು ನಿಮ್ಮ ಜೊತೆ ನಿಲ್ಲಲು ಬಂದಿದ್ದೇವೆ. ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ” ಎಂದು ತಿಳಿಸಿದರು.

ಸ್ಯಾಂಡಲ್ ವುಡ್ ಕಪ್-2024 ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಕೇವಲ ಮನರಂಜನೆ ಉದ್ದೇಶದಿಂದ ಶುರು ಮಾಡಿರುವುದಲ್ಲ. ಬದಲಾಗಿ ಒಂದೊಳ್ಳೆ ಕಾರ್ಯ ಇಟ್ಟುಕೊಂಡು ಈ ಕಪ್ ಪ್ರಾರಂಭಿಸಲಾಗಿದೆ. ಕಷ್ಟದಲ್ಲಿರುವ ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರು , ವಿತರಕರು, ನಿರ್ಮಾಪಕರು ಕಷ್ಟದಲ್ಲಿರುವ ಸಹಾಯ ಮಾಡುವುದು ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಪ್ರಮುಖ ಧ್ಯೇಯವಾಗಿದೆ.

ಹಿರಿಯ ನಿರ್ಮಾಪಕರಾದ ಸಾ.ರಾ ಗೋವಿಂದ್, ಭಾ.ಮಾ ಹರೀಶ್, ಭಾ.ಮಾ.ಗಿರೀಶ್ ಎನ್ ಎಂ ಸುರೇಶ್, ಎ ಗಣೇಶ್, ಪ್ರಮೀಳಾ ಜೋಷಾಯ್, ಸುಂದರ್ ರಾಜ್, ಪ್ರವೀಣ್ ಕುಮಾರ್, ಜಯಸಿಂಹ ಮೂಸರಿ ನೇತೃತ್ವದಲ್ಲಿ ಸ್ಯಾಂಡಲ್ ವುಡ್ ಕಪ್ 2024 ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಡೆಸಲಾಗುತ್ತದೆ.

ತಂಡಗಳು ಹಾಗೂ ತಂಡದ ನಾಯಕರು
1)ಅಜಯ್ ರಾವ್ – ಗಂಧದಗುಡಿ ಗ್ಯಾಂಗ್
2) ಮನುರಂಜನ್- ರಣಧೀರ ರೈಡರ್ಸ್ಸ್
3) ಚೇತನ್ ಚಂದ್ರ -ಬುದ್ಧಿವಂತ ಬ್ಲಾಸ್ಟರ್ಸ್
4) ವಶಿಷ್ಠ ಸಿಂಹ- ಅಂತ ಹಂಟರ್ಸ್ಸ್
5) ವಿಕ್ರಮ್ ರವಿಚಂದ್ರನ್ – ಅಮೃತವರ್ಷಿಣಿ ಅವೆಂಜರ್ಸ್ಸ್
6) ಮಯೂರ್ ಪಟೇಲ್ -ಟೈಗರ್ ಟೈಟಾನ್ಸ್
7) ಶ್ರೀನಗರ ಕಿಟ್ಟಿ- ಸೂರ್ಯವಂಶ ಸ್ವ್ಯಾಡ್
8) ಪೃಥ್ವಿ ಅಂಬಾರ್- ಸಾಂಗ್ಲಿಯಾನ ಸ್ಮ್ಯಾಷರ್ಸ್ಸ್
9) ಪ್ರಮೋದ್ ಶೆಟ್ಟಿ – ಓಂ ವಾರಿಯರ್ಸ್ಸ್
10 ಸೃಜನ್ ಲೋಕೇಶ್ – ಅಪ್ಪು ಫ್ಯಾಂಥರ್ಸ್ಸ್
ಉಪನಾಯಕರು ಯಾರು?
ಸಿಂಧು ಲೋಕನಾಥ್- ಗಂಧದಗುಡಿ ಗ್ಯಾಂಗ್
ಶೃತಿ ಹರಿಹರನ್- ರಣಧೀರ ರೈಡರ್ಸ್ಸ್
ಜಾಹ್ನವಿ- ಬುದ್ಧಿವಂತ ಬ್ಲಾಸ್ಟರ್ಸ್
ದಿವ್ಯಾ ಸುರೇಶ್- ಅಂತ ಹಂಟರ್ಸ್ಸ್
ಕರುಣ್ಯಾ ರಾಮ್-ಅಮೃತವರ್ಷಿಣಿ ಅವೆಂಜರ್ಸ್ಸ್
ಸಂಜನಾ ಗಲ್ರಾನಿ -ಟೈಗರ್ ಟೈಟಾನ್ಸ್
ತನಿಷಾ ಕುಪ್ಪಂಡ- ಸೂರ್ಯವಂಶ ಸ್ವ್ಯಾಡ್
ಶ್ಯಾವ್ಯಾ ಶೆಟ್ಟಿ – ಸಾಂಗ್ಲಿಯಾನ ಸ್ಮ್ಯಾಷರ್ಸ್ಸ್
ಸುಕೃತಾ ವಾಗ್ಲೆ – ಓಂ ವಾರಿಯರ್ಸ್ಸ್
ಮೇಘನಾ ರಾಜ್ – ಅಪ್ಪು ಫ್ಯಾಂಥರ್ಸ್ಸ್

ಮೆಂಟರ್ಸ್ ಪಟ್ಟಿ
ಜೋಗಿ- ಗಂಧದಗುಡಿ ಗ್ಯಾಂಗ್
ರಂಗನಾಥ್ ಭಾರದ್ವಾಜ್- ರಣಧೀರ ರೈಡರ್ಸ್ಸ್
ಸದಾಶಿವ ಶೆಣೈ- ಬುದ್ಧಿವಂತ ಬ್ಲಾಸ್ಟರ್ಸ್
ಯಮುನಾ ಶ್ರೀನಿಧಿ- ಅಂತ ಹಂಟರ್ಸ್ಸ್
ಕವಿತಾ ಲಂಕೇಶ್-ಅಮೃತವರ್ಷಿಣಿ ಅವೆಂಜರ್ಸ್ಸ್
ಆರೂರು ಜಗದೀಶ್ -ಟೈಗರ್ ಟೈಟಾನ್ಸ್
ಟಿ.ಪಿ.ಸಿದ್ದರಾಜು- ಸೂರ್ಯವಂಶ ಸ್ವ್ಯಾಡ್
ತಾರಾ ಅನುರಾಧಾ- ಸಾಂಗ್ಲಿಯಾನ ಸ್ಮ್ಯಾಷರ್ಸ್ಸ್
ರಾಜೇಶ್ ರಾಮನಾಥ್ – ಓಂ ವಾರಿಯರ್ಸ್ಸ್
ಇಂದ್ರಜಿತ್ ಲಂಕೇಶ್ – ಅಪ್ಪು ಫ್ಯಾಂಥರ್ಸ್ಸ್

Must Read

spot_img
Share via
Copy link
Powered by Social Snap