Kannada Beatz
News

“ಹುಡುಗರು” ಚಿತ್ರದ ನಂತರ ಮತ್ತೆ ಈ ಚಿತ್ರದಲ್ಲಿ ಯೋಗಿ – ಶ್ರೀನಗರ ಕಿಟ್ಟಿ .

“ರೋಜಿ” ಚಿತ್ರದಲ್ಲಿ ಶ್ರೀನಗರ ಕಿಟ್ಟಿ* .

ಲೂಸ್ ಮಾದ ಯೋಗಿ ಅಭಿನಯದ 50ನೇ ಚಿತ್ರ “ರೋಜಿ” ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. “ಲಿಯೋ” ಖ್ಯಾತಿಯ ಸ್ಯಾಂಡಿ ಮಾಸ್ಟರ್ ಸಹ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಟ ಶ್ರೀನಗರ ಕಿಟ್ಟಿ “ರೋಜಿ” ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಶ್ರೀನಗರ ಕಿಟ್ಟಿ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಬಿಡುಗಡೆ ಚಿತ್ರತಂಡ ಬಿಡುಗಡೆ ಮಾಡಿದೆ. ಶಾಂತಿನಗರದ ಮೈದಾನದಲ್ಲಿ ಶ್ರೀನಗರ ಕಿಟ್ಟಿ ಅವರ ಮೂವತ್ತು ಅಡಿ ಪೋಸ್ಟರ್ ಬಿಡುಗಡೆ ಮಾಡಿ, ಕಿಟ್ಟಿ ಅವರನ್ನು ಚಿತ್ರಕ್ಕೆ ವಿಶೇಷವಾಗಿ ಬರಮಾಡಿಕೊಳ್ಳಲಾಯಿತು. ಪೋಸ್ಟರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಈ ಪಾತ್ರದ ಕುರಿತು ನಿರ್ದೇಶಕ ಶೂನ್ಯ ಅವರು ಹೇಳಿದಾಗ ಚೆನ್ನಾಗಿದೆ ಅನಿಸಿತು. ಈಗ ಪೋಸ್ಟರ್ ನೋಡಿ ಇನ್ನು ಹೆಚ್ಚು ಖುಷಿಯಾಗಿದೆ. “ಕ್ರಿಸ್ಟೋಫರ್” ನನ್ನ ಪಾತ್ರದ ಹೆಸರು ಎಂದರು ಶ್ರೀನಗರ ಕಿಟ್ಟಿ.

ನಮ್ಮ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರು ನಟಿಸುತ್ತಿರುವುದು ತುಂಬಾ ಸಂತೋಷವಾಗುತ್ತಿದೆ ಎಂದು ಆರಂಭಿಸಿದ ನಟ ಯೋಗಿ, ನಾವಿಬ್ಬರು “ಹುಡುಗರು” ಚಿತ್ರದ ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದೇವೆ ಎಂದರು.

ನಿರ್ದೇಶಕ ಶೂನ್ಯ, ನಿರ್ಮಾಪಕ ಡಿ.ವೈ ರಾಜೇಶ್ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಚಿತ್ರದ ಕುರಿತು ಮಾತನಾಡಿದರು.

Related posts

ಕೋರ್ಟ್ ಕಟಕಟೆಯಲ್ಲಿ ನಿಂತ ನಿರ್ದೇಶಕ ಸಿಂಪಲ್ ಸುನಿ….!

administrator

*ದಿಯಾ ಹೀರೋ‌ ದೀಕ್ಷಿತ್ ಜೊತೆ ರವಿಚಂದ್ರ ಎ.ಜೆ ಸಿನಿಮಾ…ಐಟಿ ಹುಡುಗನ ಕನಸಲ್ಲಿ ‘ಬ್ಲಿಂಕ್’ ಸಂಭ್ರಮ…ಕ್ಯೂರಿಯಾಸಿಟಿ ಹುಟ್ಟಿಸಿದ ‘ಬ್ಲಿಂಕ್’ ಮೊದಲ ಝಲಕ್

Kannada Beatz

ಬಾಕ್ಸ್ ಆಫೀಸ್ ಸುಲ್ತಾನ್ (ಯಶ್) ಕೆಜಿಎಫ್-2..

Kannada Beatz

Leave a Comment

Share via
Copy link
Powered by Social Snap