HomeNewsಮುಖ್ಯಮಂತ್ರಿಗಳು ಬಿಡುಗಡೆ ಮಾಡಿದರು "ನಟ ಭಯಂಕರ"ನ ವಿಭಿನ್ನ ಪೋಸ್ಟರ್

ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದರು “ನಟ ಭಯಂಕರ”ನ ವಿಭಿನ್ನ ಪೋಸ್ಟರ್

.

ಪ್ರಥಮ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ” ನಟ ಭಯಂಕರ” ಚಿತ್ರದ ವಿಭಿನ್ನ ಪೋಸ್ಟರ್ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದ್ದಾರೆ.

ಮುಖ್ಯಮಂತ್ರಿಗಳು “ನಟ ಭಯಂಕರ” ಸಿನಿಮಾ ನೋಡುತ್ತಾರಾ? ಪ್ರಥಮ್ ಹೇಳೋದೇನು..

ಮುಖ್ಯಮಂತ್ರಿಗಳು ಈಗಷ್ಟೇ ಕೊರೋನದಿಂದ ಚೇತರಿಸಿಕೊಂಡಿದ್ದಾರೆ.
ಅವರ ಬಳಿ ಪೋಸ್ಟರ್ ಬಿಡುಗಡೆ ಮಾಡಿಸಬೇಕೆಂಬ ಹಂಬವಿತ್ತು.
ಈ ಪ್ರಸ್ತುತ ಸನ್ನಿವೇಶದಲ್ಲ ಅವರ ಬಳಿ ತುಂಬಾ ಜನ ಹೋಗಲು ಅವಕಾಶವಿರಲಿಲ್ಲ.‌‌ ಸೀಮಿತ ಜನರೊಂದಿಗೆ ಮಾತ್ರ ಹೋಗಿದ್ದೆವು. ಪೋಸ್ಟರ್ ನೋಡಿದ್ದ ತಕ್ಷಣ ಮುಖ್ಯಮಂತ್ರಿಗಳು ಒಂದು ಕ್ಷಣ ಹಾಗೆ ನಿಂತರು. ಪೋಸ್ಟರ್ ತುಂಬಾ ಚೆನ್ನಾಗಿದೆ. ನೀವು ಪ್ರಚಾರ ಮಾಡುವ ರೀತಿಯು ವಿಭಿನ್ನವಾಗಿದೆ ಎಂದು ಹೇಳಿ ಮನಸಾರೆ ಹಾರೈಸಿದರು.
ಅಲ್ಲಿದ್ದವರ ಬಾಯಲ್ಲೂ ನಮ್ಮ ಚಿತ್ರದ ಪೋಸ್ಟರ್ ನದೇ ಮಾತು.
ಈ ಸಂದರ್ಭ‌ ಒದಗಿಸಿದ್ದಕ್ಕೆ ಶಾಸಕ ಶ್ರೀ ರೇಣುಕಾಚಾರ್ಯ ಅವರಿಗೆ ಧನ್ಯವಾದ. ಏಕೆಂದರೆ ಅವರ ಶ್ರೀಮತಿ ಅವರ ಬಳಿ ನಾನು, ಮುಖ್ಯಮಂತ್ರಿಗಳ ಬಳಿ ಈ ಪೋಸ್ಟರ್ ಬಿಡುಗಡೆ ಮಾಡಿಸಬೇಕೆಂಬ ಆಸೆ ಇದೆ ಎಂದು ಹೇಳಿದ್ದೆ. ಅವರು ಅವರ ಪತಿಗೆ ಹೇಳಿ ಇದನ್ನು ಮಾಡಿಸಿಕೊಟ್ಟರು.‌
ಈಗ ಕೊರೋನ ಹೆಚ್ಚಾಗುತ್ತಿದೆ. ಮುಖ್ಯಮಂತ್ರಿಗಳು ಬ್ಯುಸಿಯಾಗಿದ್ದಾರೆ. ವಾತಾವರಣ ತಿಳಿಯಾದ ಮೇಲೆ, ಈ ರಾಜಕಾರಣ ದಿನ ಇದ್ದದ್ದೆ.‌ ತಾವು ಮೂರು ಗಂಟೆ ಬಿಡುವು ಮಾಡಿಕೊಂಡು ನಮ್ಮ ಸಿನಿಮಾ ನೋಡಬೇಕೆಂದು ಮುಖ್ಯಮಂತ್ರಿಗಳಲ್ಲಿ ವಿನಂತಿಸಿಕೊಳ್ಳುತ್ತೇನೆ ಎನ್ನುತ್ತಾರೆ ಪ್ರಥಮ್.

ಈಗಾಗಲೇ ಬಹು ನಿರೀಕ್ಷಿತ ಈ ಚಿತ್ರಕ್ಕಾಗಿ ಉಪೇಂದ್ರ ಅವರು ಹಾಡಿರುವ ಹಾಡು. ಧ್ರುವ ಸರ್ಜಾ ಅವರು ನೀಡಿರುವ ಧ್ವನಿಗೆ ಸಾಕಷ್ಟು ಪ್ರಶಂಸೆ ಸಿಕ್ಕಿದೆ. ಚಿತ್ರ ಯಾವಾಗ ಬಿಡುಗಡೆಯಾಗುವುದೆಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ‌.

ಸ್ವಾರಸ್ಯ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ‌ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. . ಹೆಚ್ ಪಿ ನಿತೇಶ್ ಈ ಚಿತ್ರದ ಸಹ ನಿರ್ಮಾಪಕರು.

ಉದಯ್ ಕೆ ಮೆಹ್ತಾ ಅವರು ಚಿತ್ರಕ್ಕೆ ಕಥೆ ಬರೆದಿದ್ದು, ಚಿತ್ರಕಥೆ, ಸಂಭಾಷಣೆ ಪ್ರಥಮ್ ಬರೆದಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಪ್ರದ್ಯೋತನ್ ಸಂಗೀತ ನೀಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಒಂದು ಹಾಡನ್ನು ಹಾಡಿದ್ದಾರೆ. ಧ್ರುವ ಸರ್ಜಾರ ಧ್ವನಿ ಚಿತ್ರದುದ್ದಕ್ಕೂ ಕೇಳಿಸಲಿದೆ.
ಡಾ||ವಿ.ನಾಗೇಂದ್ರ ಪ್ರಸಾದ್, ನಾಗತಿಹಳ್ಳಿ ಚಂದ್ರಶೇಖರ್, ಬಹದ್ದೂರ್ ಚೇತನ್ ಹಾಗೂ ಅರಸು ಅಂತಾರೆ ಹಾಡುಗಳನ್ನು ರಚಿಸಿದ್ದಾರೆ.

ಪ್ರಥಮ್ ಅವರೊಂದಿಗೆ ಹಿರಿಯ ನಟ ಸಾಯಿಕುಮಾರ್ ಸಹ ನಟಿಸಿದ್ದಾರೆ. ಓಂಪ್ರಕಾಶ್ ರಾವ್, ನಿಹಾರಿಕಾ ಶೆಣೈ, ಸುಶ್ಮಿತ ಜೋಶಿ, ಶೋಭ್ ರಾಜ್, ಕುರಿ ಪ್ರತಾಪ್, ಚಂದನ ರಾಘವೇಂದ್ರ, ಶಂಕರ್ ಅಶ್ವತ್ಥ್, ಮೋಹನ್ ಜುನೇಜ, ರಮ, ಬಿರಾದಾರ್, ಎಂ.ಎಸ್ ಉಮೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Must Read

spot_img
Share via
Copy link
Powered by Social Snap