HomeNewsಅದ್ದೂರಿಯಾಗಿ ಅನಾವರಣಗೊಂಡ "ಭೈರವ" ಚಿತ್ರದ ಶೀರ್ಷಿಕೆ

ಅದ್ದೂರಿಯಾಗಿ ಅನಾವರಣಗೊಂಡ “ಭೈರವ” ಚಿತ್ರದ ಶೀರ್ಷಿಕೆ

ಕನ್ನಡ ಚಿತ್ರವೊಂದು ಅದ್ದೂರಿಯಾಗಿ ಮುಂಬೈ ಮಹಾನಗರಿಯಲ್ಲಿ ಇದೇ 28-12-2021 ರಂದು ಅದ್ದೂರಿ ವೇದಿಕೆಯಲ್ಲಿ ಶೀರ್ಷಿಕೆ ಅನಾವರಣಗೊಳಿಸಿದೆ.

ಭೈರವ ಎಂಬ ಈ ಚಿತ್ರವು ಕನ್ನಡ ಚಿತ್ರರಂಗದ ವಿಭಿನ್ನ ಪ್ರಯತ್ನ ಹಾಗೂ ವಿನೂತನವಾಗಿ ಹಲವು ಥ್ರಿಲ್ಲಿಂಗ್ ಅಂಶಗಳಿಂದ ಕೂಡಿದೆ ಎಂದು ಚಿತ್ರದ ನಿರ್ದೇಶಕರಾದ ರಾಮತೇಜ್ ಅವರು ತಿಳಿಸಿದರು. ಇವರು ಕನ್ನಡದ ಖ್ಯಾತ ನಿರ್ದೇಶಕರಾದ ಪಿ.ಎನ್.ಸತ್ಯ ಅವರ ಗರಡಿಯಲ್ಲಿ ಪಳಗಿರುವ ನಿರ್ದೇಶಕ ಈ ಹಿಂದೆ ಕನ್ನಡದಲ್ಲೆ ಮೊದಲ ವೆಬ್ ಸೀರಿಸ್ ಆದ ಸೈಕೋ ಹಾಗೂ ಸಾಲ್ಟ್ & ಪೆಪ್ಪರ್ ಸೀರಿಸ್ ಗಳನ್ನು ಮಾಡಿರುವ ಅನುಭವ ಹಾಗೂ ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಅನುಭವಗಳಿಸಿದ್ದಾರೆ‌.
ನಿರ್ದೇಶಕರೆ ಹೇಳುವಂತೆ ಭೈರವ ಚಿತ್ರವನ್ನು ವಿಸಿಕಾ ಫಿಲ್ಮ್ಸ್ ಪ್ರೊಡಕ್ಷನ್ ಸಹಯೋಗದೊಂದಿಗೆ ಹನಿ ಚೌಧರಿ ಮತ್ತು ವೈಭವ್ ಬಜಾಜ್ ಅವರು ಹಾಗೂ ಸಹನಿರ್ಮಾಪಕರಾಗಿ ಶ್ರೀನಿವಾಸ ಸಿ.ವಿ.ಗೌಡ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.
ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಮರೊಟ್ಟು ಚೆಕ್ ಪೋಸ್ಟ್ ಖ್ಯಾತಿಯ ಸನತ್ ನಾಯಕನಾಗಿ ಹಾಗೂ ಉಮೇಶ ಸಕ್ಕರೆನಾಡು ಸೇರಿದಂತೆ ಹಲವು ಕಲಾವಿದರ ದಂಡೆ ಚಿತ್ರದಲ್ಲಿದೆ‌. ಈ ಚಿತ್ರಕ್ಕೆ ಚರಣ್ ಸುವರ್ಣ ಅವರ ಕಥೆಗೆ ರಾಮತೇಜ್ ಅವರು ಚಿತ್ರಕಥೆ ಹಾಗೂ ಸಂಭಾಷಣೆ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರೆ ಕಪಿಲ್ ದೀಕ್ಷಿತ್ ಅವರು ಕೂಡ ಹಿಂದಿ ಅವತರಣಿಕೆಗೆ ಮತ್ತು ಕ್ರಿಯಾಶೀಲವಾಗಿ ರಾಮತೇಜ್ ಅವರಿಗೆ ಜೊತೆಯಾಗಲಿದ್ದಾರೆ. ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕರಾದ ಅಮಿತ್ ದೀಕ್ಷಿತ್ ಅವರ ಸಂಗೀತ ನಿರ್ದೇಶನ ಹಾಗೂ ಕನ್ನಡದ ಖ್ಯಾತ ನೃತ್ಯ ನಿರ್ದೇಶಕರಾದ B.ಧನಂಜಯ ನೃತ್ಯ ಸಂಯೋಜಿಸಿದರೆ ಟಿ.ನರಸಿಂಹ ಅವರ ಸಾಹಸ ನಿರ್ದೇಶನವಿದೆ. ಇನ್ನೂ ಚಿತ್ರದಲ್ಲಿ ನಿಜವಾದ ನಾಗಸಾಧುಗಳು ಕೂಡ ಅಭಿನಯಸಲಿದ್ದಾರೆ.
ಚಿತ್ರವು ಜನೆವರಿ 14 ರಿಂದ ಚಿತ್ರೀಕರಣ ಪ್ರಾರಂಭಿಸಲಿದೆ ಇನ್ನೂ ಚಿತ್ರವನ್ನು ಉತ್ತರಪ್ರದೇಶ, ಹರಿದ್ವಾರ, ಮೀರತ್,ಕಾಶಿ,ಋಷಿಕೇಶ್ ಗಾಜಿಯಾಬಾದ್,ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ.

Must Read

spot_img
Share via
Copy link
Powered by Social Snap