Kannada Beatz
News

ಅಣ್ಣ-ತಂಗಿಯರ ಬಾಂಧವ್ಯದ ಹಾಡು ಸೋಲ್ ಆಫ್ ಬೆಂಕಿ…ಚೈತ್ರಾ ಆಚಾರ್ ಕಂಠದಲ್ಲಿ ಕೇಳಿ ಮನಮುಟ್ಟುವ ಗೀತೆ

ರಾಮಾರ್ಜುನ ಸಿನಿಮಾದ ನಂತರ ಅನೀಶ್‌ ತೇಜೇಶ್ವರ್‌ ನಟಿಸ್ತಿರುವ ಬೆಂಕಿ ಸಿನಿಮಾದ ಸೋಲ್ ಆಫ್ ಬೆಂಕಿ ಹಾಡು ಬಿಡುಗಡೆಯಾಗಿದೆ. ಅಣ್ಣ-ತಂಗಿಯ ನಡುವಿನ ಬಾಂಧವ್ಯದ ಈ ಗೀತೆಗೆ ನಟಿ ಚೈತ್ರಾ ಆಚಾರ್ ಧನ್ವಿಯಾಗಿದ್ದಾರೆ.

ತಾಯಿ ಕಳೆದುಕೊಂಡ ತಂಗಿಗೆ ತಾಯಿ-ತಂದೆ ಸ್ಥಾನ ತುಂಬುವ ಅಣ್ಣ, ತಾಯಿ ತ್ಯಾಗವನ್ನು ವಿವರಿಸುವ ಈ ಹಾಡು ಏಕಾಏಕಿ ನಿಮ್ಮನ್ನು ಭಾವನಲೋಕಕ್ಕೆ ತಳ್ಳುವಂತೆ ಮಾಡುತ್ತದೆ.‌ ನಾಗಾರ್ಜುನ್ ಶರ್ಮಾ ಅರ್ಥಪೂರ್ಣ ಸಾಹಿತ್ಯಕ್ಕೆ ಆನಂದ್ ರಾಜವಿಕ್ರಮ್ ಅಷ್ಟೇ ಸೊಗಸಾದ ಸಂಗೀತ ನೀಡಿದ್ದಾರೆ.

ಈ ಮೊದಲು ಬಿಡುಗಡೆಯಾಗಿದ್ದ ಅನೀಶ್ ಡ್ಯಾನ್ಸಿಂಗ್ ನಂಬರ್ ಹಾಡಿಗೆ ಭಾರೀ‌ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಬಿಡುಗಡೆಯಾಗಿರುವ ಸೋಲ್ ಆಫ್ ಬೆಂಕಿ ಸಿಂಗಿಂಗು ನಿಧಾನವಾಗಿ ಸಂಗೀತ ಪ್ರಿಯರನ್ನು ಆವರಿಸಿಕೊಳ್ತಿದೆ. ಅಂದಹಾಗೇ ಬೆಂಕಿ , ಮಾಸ್ ಹಾಗೂ ಕಮರ್ಷಿಯಲ್ ಸಿನಿಮಾ.

ವಿಂಕ್‌ವಿಷಲ್‌ ಪ್ರೊಡಕ್ಷನ್‌ ಬ್ಯಾನರ್‌ ಮೂಲಕ ಅನೀಶ್‌ ಬೆಂಕಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹಳ್ಳಿ ಹಿನ್ನೆಲೆಯಲ್ಲಿ ಅಣ್ಣ ತಂಗಿ ಸೆಂಟಿಮೆಂಟ್‌ ಕತೆ ಹೊಂದಿರುವ ಈ ಚಿತ್ರಕ್ಕೆ ಹಿರಿಯ ನಿರ್ದೇಶಕ ಎ.ಆರ್‌. ಬಾಬು ಪುತ್ರ ಶಾನ್‌ ಆಕ್ಷನ್ ಕಟ್ ಹೇಳಿದ್ದು ಇದು ಅವರ ಮೊದಲ ಚೊಚ್ಚಲ ಸಿನಿಮಾವಾಗಿದೆ.

ಅನೀಶ್‌ಗೆ ನಾಯಕಿಯಾಗಿ ‘ರೈಡರ್‌’ ಸಿನಿಮಾ ಖ್ಯಾತಿಯ ಸಂಪದ ಹುಲಿವಾನ ನಟಿಸಿದ್ದು, ಶ್ರುತಿ ಪಾಟೀಲ್‌, ಅಚ್ಯುತ್‌ ಕುಮಾರ್‌, ಸಂಪತ್‌, ಉಗ್ರಂ ಮಂಜು, ಹರಿಣಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೌಶಿಕ್‌ ಹರ್ಷ ಸಂಗೀತ ಸಂಯೋಜನೆ, ವೀನಸ್‌ ನಾಗರಾಜ್‌ ಮೂರ್ತಿ ಛಾಯಾಗ್ರಹಣ ಹೊಣೆ ಹೊತ್ತಿದ್ದಾರೆ.

Related posts

ಆರಕ್ಷಕರಿಗೆ ದೊಡ್ಡ “ಸೆಲ್ಯೂಟ್”

Kannada Beatz

ವಿನಯ್ ಚಂದ್ರ ನಿರ್ದೇಶನದಲ್ಲಿ ಬರುತ್ತಿದೆ “ಭಾರತದ ಕೋಗಿಲೆ” ಯ ಬಯೋಪಿಕ್.

Kannada Beatz

ಜೀ5 ಒಟಿಟಿಯಲ್ಲಿ ಮಲಯಾಳಂನ ‘ನುನಕುಳಿ’ ಧಮಾಕ..100 ಮಿಲಿಯನ್ಸ್ ಸ್ಕ್ರೀಮಿಂಗ್ ಮಿನಿಟ್ ಕಂಡ ಬೇಸಿಲ್ ಜೋಸೆಫ್ ಸಿನಿಮಾ

Kannada Beatz

Leave a Comment

Share via
Copy link
Powered by Social Snap