ಟೀಂ ಇಂಡಿಯಾ ವೇಗಿ ಜಸ್ಪ್ರಿತ್ ಬುಮ್ರಾ ಹಾಗೂ ದಕ್ಷಿಣ ಭಾರತದ ನಟಿ ಅನುಪಮ ಪರಮೇಶ್ವರನ್ ನಡುವೆ ಏನೋ ಇದೆ ಎಂಬ ಅನುಮಾನ ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಸ್ಪಷ್ಟನೆ ನಿಡಿರುವ ನಟಿ ಅನುಪಮಾ, ನಾವಿಬ್ಬರೂ ಒಳ್ಳೆಯ ಸ್ನೇಹಿತರಷ್ಟೇ ಎಂದು ಹೇಳಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿರುವ ಅನುಪಮಾ, ಸೆಲೆಬ್ರಿಟಿಗಳಿಗೆ ಸಂಬಂಧಿಸಿದಂತೆ ಈ ರೀತಿಯ ಸುದ್ದಿಗಳು ಸಾಮಾನ್ಯ. ನಾನು ಬುಮ್ರಾ ಅವರ ಜತೆ ಡೇಟಿಂಗ್ ನಲ್ಲಿ ಇಲ್ಲ. ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಬುಮ್ರಾ ಟ್ವಿಟರ್ ಖಾತೆಯಲ್ಲಿ ಫಾಲೋ ಮಾಡುವವರಲ್ಲಿ ಅನುಪಮಾ ಕೂಡ ಒಬ್ಬರಾಗಿದ್ದಾರೆ. ಬುಮ್ರಾ ಟ್ವಿಟರ್ನಲ್ಲಿ ಫಾಲೋ ಮಾಡುತ್ತಿರುವ ಸಿನಿಮಾ ನಟಿಯರಲ್ಲಿ ಅನುಪಮಾ ಮಾತ್ರ ಇದ್ದರು. ಜತೆಗೆ ಅನುಪಮಾ ಕೂಡ ಬುಮ್ರಾರನ್ನು ಫಾಲೋ ಮಾಡುತ್ತಿದ್ದರು. ಹೀಗಾಗಿ ಬೂಮ್ರಾ ಜತೆ ಅನುಪಮಾ ಹೆಸರು ತಳುಕು ಹಾಕಿಕೊಂಡಿತ್ತು. ಇದೀಗ ಸ್ವತಃ ಅನುಪಮಾ ಅವರೇ ಅದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ.