ವಿಸಿಕಾ ಫಿಲ್ಮ್ಸ್ ಪ್ರೈವೆಟ್ ಲಿ. ನ ಚರಣ್ ಸುವರ್ಣ, ಹನಿ ಚೌಧರಿ ನಿರ್ಮಾಣದಲ್ಲಿ ನಿರ್ಮಿಸಿತ್ತಿರುವ, ವಿಶ್ವ ವಿಖ್ಯಾತ ಶ್ರೀ ಸರೋಜಿನಿ ನಾಯ್ಡು ಅವರ ಜೀವನ ಕಥೆ ಆಧಾರಿತ ಚಿತ್ರ ಸರೋಜಿನಿ ಚಿತ್ರದಲ್ಲಿ ಭಾರತದ ಚಿತ್ರರಂಗದ ದೊಡ್ಡ ಕಲಾವಿದರ ದಂಡೆ ಕೆಲಸ ಮಾಡುತ್ತಿದೆ.
ನಿರ್ದೇಶಕ ವಿನಯ ಚಂದ್ರ ಹೇಳುವಂತೆ ಚಿತ್ರದಲ್ಲಿ ಒಂದು ಮುಖ್ಯ ಪಾತ್ರದಲ್ಲಿ ನಿಸರ್ಗಾ ಗೌಡ ಅವರು ನಟಿಸುತ್ತಿದ್ದಾರೆ..ನಿಸರ್ಗಗೌಡ ಅವರು ಈಗಾಗಲೇ ಕನ್ನಡದ ಹಲವು ಚಿತ್ರಗಳಲ್ಲಿ ಅಭಿನಯಿಸಿದ. ನಿಸರ್ಗ ಗೌಡ ಸರೋಜಿನಿ ಚಿತ್ರದಲ್ಲಿ ಅವರ ಪಾತ್ರಕ್ಕೆ ತುಂಬಾನೆ ಖುಷಿಯಾಗಿದ್ದು ಪಾತ್ರ ಹಳೆ ಕಾಲ ಘಟ್ಟದ್ದು ಆಗಿರುವುದರಿಂದ ನಿಸರ್ಗ ಗೌಡ ಅವರು ಈ ಪಾತ್ರ ಚಾಲೆಂಜಿಂಗ್ ಆಗಿದೆ ಎಂದು ಹೇಳಿದರು ಮತ್ತು ಇನ್ನೂ ಇಂತಹ ಅವಕಾಶಗಳು ಈ ಸಿನಿಮಾದ ಮೂಲಕ ದೊರಕುವವು ಎಂಬ ಭರವಸೆಯಲ್ಲಿದ್ದಾರೆ.