Kannada Beatz
News

“ಜಾಡಘಟ್ಟ” ದ ನಂತರ
“ಕವಡೆ” ಆಡಲು ರಘು ಸಿದ್ದ .

“ಕವಡೆ” ಆಟ ಪುರಾತನ ಆಟ. ಚದರಂಗ, ಚೌಕಾಬಾರ ಇತ್ಯಾದಿ ಹೆಸರುಗಳಿಂದ ಈ ಆಟ ಪ್ರಸಿದ್ಧಿ.
ಇತ್ತೀಚೆಗೆ “ಕವಡೆ” ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ನಡೆಯಿತು. ಲಕ್ಷ್ಮೀಕಾಂತ್ ಅವರು ಪ್ರಥಮ ಸನ್ನಿವೇಶಕ್ಕೆ ಆರಂಭಫಲಕ ತೋರಿದರು. ಲಕ್ಷ್ಮೀಪತಿ ಕ್ಯಾಮೆರಾ ಚಾಲನೆ ಮಾಡಿದರು.

ಕಳೆದ ತಿಂಗಳು ತೆರೆಕಂಡ “ಜಾಡಘಟ್ಟ” ಚಿತ್ರವನ್ನು ನಿರ್ದೇಶಿಸಿ, ನಟನೆಯನ್ನೂ ಮಾಡಿದ್ದ ರಘು ಎಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಜೊತೆಗೆ ನಾಯಕನಾಗೂ ನಟಿಸುತ್ತಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಪ್ರತಿಭಾ ಪ್ರದರ್ಶನದ ಮೂಲಕ ಹೆಸರಾಗಿರುವ ವಿದ್ಯಾ ಈ ಚಿತ್ರದ ನಾಯಕಿ.

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರತಿಭಾವಂತರು ಪ್ರದರ್ಶನ ನೀಡುತ್ತಿರುತ್ತಾರೆ. ಆದರೆ ಅವರಿಗೆ ಅವಕಾಶ ಸಿಗುವುದು ಕಡಿಮೆ.‌ ನಾವು ಅಂತಹ ಪ್ರತಿಭೆಗೆ ಅವಕಾಶ ನೀಡಲು ನಿಶ್ಚಯಿಸಿ ಈ ಚಿತ್ರಕ್ಕೆ ವಿದ್ಯಾ ಅವರನ್ನು ಆಯ್ಕೆ ಮಾಡಿರುವುದಾಗಿ ರಘು ತಿಳಿಸಿದರು.

ನಾಯಕ ಹಾಗೂ ನಾಯಕಿ ನಡುವೆ ಮೂರನೇ ವ್ಯಕ್ತಿಯ ಆಗಮನವಾಗುತ್ತದೆ. ಆಗ ಏನಾಗುತ್ತದೆ? ಎಂಬುದೇ ಕಥಾಹಂದರ. ಈ ಜೀವನ ಕೂಡ ಒಂದು ಚದುರಂಗದ ಆಟ. ಹಾಗಾಗಿ ನಮ್ಮ ಚಿತ್ರಕ್ಕೆ “ಕವಡೆ” ಅಂತ ಹೆಸರಿಟ್ಟಿದ್ದೀವಿ ಎನ್ನುತ್ತಾರೆ ರಘು.

ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯಲಿದೆ. ಶಶಿಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಶಿಮಣಿ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ “ಜಾಡಘಟ್ಟ” ಚಿತ್ರ ಕೂಡ ಇವರೇ ನಿರ್ಮಿಸಿದ್ದರು.

ಸುಂದರ ಹಾಡುಗಳಿರುವ ಈ ಚಿತ್ರಕ್ಕೆ ಅಭಿಷೇಕ್ ಜಿ ರಾಯ್ ಸಂಗೀತ ನೀಡುತ್ತಿದ್ದಾರೆ. ಪ್ರದೀಪ್ ಜೈನ್ ಛಾಯಾಗ್ರಹಣ ಈ ಚಿತ್ರದ ಛಾಯಾಗ್ರಾಹಕರು.

Related posts

ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ARM’ ಸಿನಿಮಾ

Kannada Beatz

ಲೋಕಲ್ ಟು ಗ್ಲೋಬಲ್….ಬಿಡುಗಡೆಗೂ ಮುನ್ನ ‘ಟಾಕ್ಸಿಕ್’ ದಾಖಲೆಗಳ ದಂಡಯಾತ್ರೆ

Kannada Beatz

ಫೆಬ್ರವರಿ 17 ರಂದು ಅದ್ದೂರಿಯಾಗಿ ನಡೆಯಲಿದೆ “ಸಿರಿ ಲಂಬೋದರ ವಿವಾಹ” (ಎಸ್ ಎಲ್ ವಿ)

Kannada Beatz

Leave a Comment

Share via
Copy link
Powered by Social Snap