Kannada Beatz
News

ಲೋಕಲ್ ಟು ಗ್ಲೋಬಲ್….ಬಿಡುಗಡೆಗೂ ಮುನ್ನ ‘ಟಾಕ್ಸಿಕ್’ ದಾಖಲೆಗಳ ದಂಡಯಾತ್ರೆ

‘ಟಾಕ್ಸಿಕ್’ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸಿನಿಮಾ…ರಿಲೀಸ್ ಗೂ ಯಶ್ ಚಿತ್ರದ ದಾಖಲೆಗಳೇನು ಗೊತ್ತಾ?

ವರ್ಲ್ಡ್ ಸಿನಿಮಾಗೆ ಸೇತುವೆಯಾದ ರಾಕಿಭಾಯ್ ಸಿನಿಮಾ…’ಟಾಕ್ಸಿಕ್’ ಸಿನಿಮಾವಲ್ಲ ಅದೊಂದು ಚಳವಳಿ

ಗಡಿದಾಟಿ ದಾಖಲೆ ಬರೆದ ‘ಟಾಕ್ಸಿಕ್’…ಜಾಗತಿಮಟ್ಟದಲ್ಲಿ ಕೆವಿಎನ್-ಯಶ್ ಹೊಸ ಕ್ರಾಂತಿ

ರಾಕಿಂಗ್ ಸ್ಟಾರ್ ಯಶ್ ಹಾಗೂ ಕೆವಿಎನ್ ನಿಮಾರ್ತೃ ವೆಂಕಟ್ ಕೊನಂಕಿ ಯೋಜನೆ ಹಾಗೂ ಯೋಚನೆ ಎರಡು ದೊಡ್ಡದಾಗಿದೆ ಅನ್ನೋದಕ್ಕೆ ಟಾಕ್ಸಿಕ್ ಸಿನಿಮಾ ಅಂಗಳದಿಂದ ಸಿಕ್ಕಿರುವ ಲೇಟೆಸ್ಟ್ ಮಾಹಿತಿಯೇ ಸಾಕ್ಷಿ. ರಾಕಿಂಗ್ ಸ್ಟಾರ್ ಆಗಿದ್ದ ಯಶ್ ಕೆಜಿಎಫ್ ಸಿನಿಮಾ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಟಾಕ್ಸಿಕ್ ಮೂಲಕ ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿರುವ ಯಶ್ ಪ್ಯಾನ್ ಇಂಡಿಯಾ ಬಿಟ್ಟು ಈಗ ಪ್ಯಾನ್ ವರ್ಲ್ಡ್ ಗುರಿ ಇಟ್ಟಿದ್ದಾರೆ. ಯಶ್ ವಿಷನ್ ಗೆ ಕೆವಿಎನ್ ಸಂಪೂರ್ಣವಾಗಿ ಬೆಂಬಲ ಕೊಟ್ಟಿದೆ.

ಟಾಕ್ಸಿಕ್ ಕೇವಲ ಪ್ಯಾನ್ ಇಂಡಿಯನ್ ಸಿನಿಮಾವಲ್ಲ. ಜಾಗತಿಕ ಮಟ್ಟದಲ್ಲಿ ಈ ಚಿತ್ರವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ನಿರ್ಮಾಪಕ ವೆಂಕಟ್ ಹಾಗೂ ಚಿತ್ರದ ನಾಯಕ ಯಶ್ ಶ್ರಮಿಸುತ್ತಿದ್ದಾರೆ. ಭಾರತೀಯ ಚಿತ್ರರಂಗದ ಅದ್ಧೂರಿ ಹಾಗೂ ದುಬಾರಿ ಸಿನಿಮಾವಾಗಿರುವ ಈ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಿಸಲಾಗುತ್ತಿದೆ. ಬಳಿಕ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿ ಇನ್ನೂ ಹಲವು ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಡಬ್ ಮಾಡಲಾಗುತ್ತದೆ.

ಸಾಮಾನ್ಯವಾಗಿ ಸಿನಿಮಾವನ್ನು ಮೊದಲು ಮೂಲ ಭಾಷೆಯಲ್ಲಿ ಶೂಟ್ ಮಾಡಿ ಉಳಿದ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡಲಾಗುತ್ತದೆ. ಕೆಲವೊಮ್ಮೆ ಎರಡು ಭಾಷೆಗಳಲ್ಲಿ ಸಿನಿಮಾಗಳು ಒಟ್ಟಿಗೆ ಶೂಟ್ ಆದ ಉದಾಹರಣೆ ಇದೆ. ಆದರೆ, ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಒಟ್ಟಿಗೆ ಸಿನಿಮಾ ಶೂಟ್ ಈವರೆಗೆ ಆಗಿಲ್ಲ. ಟಾಕ್ಸಿಕ್ ತಂಡ ಈಗ ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಒಟ್ಟಿಗೆ ಸಿನಿಮಾ ಶೂಟ್ ಮಾಡಿ ಹೊಸ ದಾಖಲೆ ಬರೆದಿದೆ. ಈ ಮೂಲಕ ಅಪರೂಪದ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಭಾಷೆ, ಗಡಿ, ಸಂಸ್ಕೃತಿ, ಈ ಎಲ್ಲ ಮೀತಿಗಳನ್ನು ಮೀರಿ ಹೊರಹೊಮ್ಮುವ ಚಿತ್ರವಾಗಬೇಕು ಎಂಬ ಚಿತ್ರತಂಡ ಶ್ರಮಿಸುತ್ತಿದೆ.

ಟಾಕ್ಸಿಕ್ ಸಿನಿಮಾವನ್ನು ವೆಂಕಟ್ ಕೆ. ನಾರಾಯಣ ಸಾರಥ್ಯದ ಕೆವಿಎನ್ ಪ್ರೊಡಕ್ಷನ್ ಹಾಗೂ ಯಶ್ ಮೊನಸ್ಟಾರ್ ಮೈಂಡ್ ಕ್ರಿಯೇಷನ್ ಜೊತೆಯಾಗಿ ಸೇರಿ ನಿರ್ಮಾಣ ಮಾಡುತ್ತಿದೆ. ಈಗಾಗಲೇ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಗೀತು ಮೋಹನದಾಸ್ ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದು. ಈ ಸಿನಿಮಾವನ್ನು ಪ್ಯಾನ್‌ ವರ್ಲ್ಡ್‌ ಹಂತಕ್ಕೆ ತೆಗೆದುಕೊಂಡು ಹೋಗಲು ಇಡೀ ಸಿನಿಮಾ ತಂಡ ಸಜ್ಜಾಗಿದೆ.

Related posts

ಎ.ಹರ್ಷ ನಿರ್ದೇಶನದಲ್ಲಿ ‘ಭೀಮ’ನಾದ ಗೋಪಿಚಂದ್….ಹೇಗಿದೆ ಫಸ್ಟ್ ಲುಕ್?

Kannada Beatz

“ನಗುವಿನ ಹೂವುಗಳ ಮೇಲೆ” ಚಿತ್ರದ ಶೀರ್ಷಿಕೆ ಅನಾವರಣ

administrator

ಮನಸೂರೆಗೊಳ್ಳುತ್ತಿದೆ “ದಾರಿ ಯಾವುದಯ್ಯ ವೈಕುಂಠಕೆ” ಚಿತ್ರದ ಟ್ರೇಲರ್.

Kannada Beatz

Leave a Comment

Share via
Copy link
Powered by Social Snap