Kannada Beatz
News

ಕಣ್ಮನ ಸೆಳೆಯುತ್ತಿದೆ “ಕಡಲೂರ ಕಣ್ಮಣಿ” ಚಿತ್ರದ ಟೀಸರ್ ಹಾಗೂ ಹಾಡುಗಳು.

“ಕಿಸ್” ಚಿತ್ರದ ನಾಯಕ ವಿರಾಟ್ “ಕಡಲೂರ ಕಣ್ಮಣಿ” ಚಿತ್ರದ ಟೀಸರ್ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಚಿತ್ರದ ಹಾಡುಗಳು ಪ್ರದರ್ಶನವಾಯಿತು.
ಚಿತ್ರದ ಟೀಸರ್ ಅಪಾರ ಸಂಖ್ಯೆಯಲ್ಲಿ ವೀಕ್ಷಣೆಯಾಗಿ, ಎಲ್ಲರ ಮೆಚ್ಚುಗೆ ದೊರಕಿದೆ. ಆರ್.ಪಿ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಸುಮಧುರವಾಗಿದೆ.

“ಕಡಲೂರ ಕಣ್ಮಣಿ” ಎಂದರೆ ವಜ್ರ ಎಂದು ನಾನು ಹಿಂದೆಯೇ ತಿಳಿಸಿದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ದಸರಾ ಹಬ್ಬಕ್ಕೆ ಬಿಡುಗಡೆ ಮಾಡುವ ಪ್ರಯತ್ನ ನಡೆಯುತ್ತಿದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ವಿರಾಟ್ ಅವರಿಗೆ ಹಾಗೂ‌ ಚಿತ್ರಕ್ಕೆ ಬಂಡಾವಳ ಹೂಡಿರುವ ನಿರ್ಮಾಪಕರಿಗೆ ನನ್ನ‌‌ ಧನ್ಯವಾದ ಎಂದರು ನಿರ್ದೇಶಕ ರಾಮ್ ಪ್ರಸನ್ನ ಹುಣಸೂರು.

ನಿರ್ಮಾಪಕರಾದ ವಿನೋದ್ ರಾಮ್,‌ ಶೈಲೇಶ್ ಆರ್ ಪೂಜಾರಿ ಹಾಗೂ ಬಸವರಾಜ ಗಜ್ಜಿ “ಕಡಲೂರ ಕಣ್ಮಣಿ” ಯನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.

ಶಿರಸಿ ಯಿಂದ ಹಲವು ಕನಸನ್ನು ಹೊತ್ತು ಬಂದವನು ನಾನು. ನನ್ನ ಕನಸಿಗೆ ಆಸರೆಯಾದವರು ನಿರ್ದೇಶಕ ರಾಮ್ ಪ್ರಸನ್ನ ಹುಣಸೂರು. ಇಬ್ಬರ ಕನಸು ಸೇರಿ ಈ ಚಿತ್ರವಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಾಯಕ ಅರ್ಜುನ್ ನಗರ್ಕರ್.

ನಾಯಕಿಯಾಗಿ ಮೊದಲ ಚಿತ್ರ. ಅಂಜು ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ನಿಮ್ಮೆಲ್ಲರಿಗೂ ನನ್ನ ಪಾತ್ರ ಹಾಗೂ ಚಿತ್ರ ಹಿಡಿಸುತ್ತದೆ ಎಂಬ ಭರವಸೆಯಿದೆ ಎಂದರು ನಾಯಕಿ ನಿಶಾ ಯಾಲಿನಿ.

“ಕಿಸ್” ಚಿತ್ರದ ನಾಯಕ ವಿರಾಟ್ ಹಾಗೂ ಬಹುಭಾಷಾ ನಟಿ ನೇಹಾ ಸಕ್ಸೇನ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರತಂಡದ ಹಲವು ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು.

Related posts

“ಪದವಿಪೂರ್ವ” ಹಾಡುಗಳ ಧ್ವನಿ ಮುದ್ರಣ ಕಾರ್ಯ ಶುರು

Kannada Beatz

Title option ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಬರ್ತಿದ್ದಾರೆ ನಟ ರಿಷಿ

Kannada Beatz

ಕೊಡಗಿನ‌ ಹುಡುಗ ಪ್ರಮೋದ್ ಬೋಪಣ್ಣ ಇದೀಗ ಚಂದನವನದ ನಾಯಕ

Kannada Beatz

Leave a Comment

Share via
Copy link
Powered by Social Snap