ಈ ಹಿಂದೆ ಖಾಸಗಿ ವಾಹಿನಿ ನಿರೂಪಕರಾಗಿ, ನ್ಯೂಸ್ ವಾಚಕರಾಗಿ ಜನಪ್ರಿಯರಾಗಿದ್ದ ಪ್ರಮೋದ್, ಈಗ ಅಧಿಕೃತವಾಗಿ ಕಲಾವಿದನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.
ಬಹಳ ವರ್ಷಗಳ ಹಿಂದೆ ನಾನು ಕೂಡ ಬೆಂಗಳೂರಿನ ಖಾಸಗಿ ವಾಹಿನಿಗೆ ನಿರೂಪಕನಾಗಿ ಕೆಲಸ ಮಾಡುತ್ತಿದ್ದಾಗ, ಪ್ರಮೋದ್ ಅದಾಗಲೇ ಆ ಚಾನೆಲ್ ನಲ್ಲಿ ಜನಪ್ರಿಯ ನಿರೂಪಕರಾಗಿದ್ದರು. ಇವರ ಮಾತಿಗೆ ಮನಸೋತ, ಇವರ ಲೈವ್ ಶೋ ಗಾಗಿ ಕಾಯುವ ದೊಡ್ಡ ವರ್ಗವೇ ಇತ್ತು. ಹೆಚ್ಚು ಕಡಿಮೆ ಇವರು ಕೂಡ ಗಣೇಶ್ ರೀತಿಯಲ್ಲಿಯೇ ನಟನಾಗುವ ಕನಸು ಕಂಡು ಹಂತ ಹಂತವಾಗಿ ಬೆಳೆದು ಈಗ ಚೊಚ್ಚಲ ಚಿತ್ರ ‘ಮರೆಯದೇ ಕ್ಷಮಿಸು’ ಬಿಡುಗಡೆಗೆ ಕಾದಿದ್ದಾರೆ. ಜನವರಿ 6 ರಂದು ರಾಜ್ಯಾದ್ಯಂತ ‘ಮರೆಯದೇ ಕ್ಷಮಿಸು’ ಸಿನಿಮಾ ಬಿಡುಗಡೆಯಾಗಲಿದೆ.
ನಮ್ಮ ಪರಿಚಿತರು ಬೆಳೆದಾಗ ಆಗುವ ಖುಷಿ, ಸಂಭ್ರಮವೇ ಬೇರೆ.
ಈ ಯುವ ಕಲಾವಿದನಿಗೆ ಹರಸಿ… ಹಾರೈಸಿ…