ಪ್ರತಿ ವರ್ಷ ನಮ್ಮ ನಾಡಹಬ್ಬ ದಸರಾ ದಂದು ಸಾಲು ಸಾಲು ಚಿತ್ರಗಳು ಬಿಡುಗಡೆಯಾಗುತ್ತದೆ. ಈ ವರ್ಷ ಅಕ್ಟೋಬರ್ ನಲ್ಲಿ ಗಾಂಧಿ ಜಯಂತಿ ಯಿಂದ ಹಿಡಿದು ದಸರಾ ಮುಗಿಯುವವರೆಗೂ ಹಲವು ಸಿನಿಮಾಗಳು ಬಿಡುಗಡೆಯಾಗಿದೆ.
ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹುಭಾಷಾ ಬಹುನಿರೀಕ್ಷೆಯ #ಸೈರಾ ನರಸಿಂಹ ರೆಡ್ಡಿ ಬಿಡುಗಡೆ ಆಗುತ್ತಿದೆ.
ಅದರ ಜೊತೆಗೆ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟಿಸಿರುವ #ವಾರ್ ಚಿತ್ರ ಕೂಡ ಅಕ್ಟೋಬರ್ 2ರಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ.
ಎರಡು ಚಿತ್ರಗಳು ಬಹುತಾರಾಗಣದ ಬಹುಭಾಷೆಯ ಬಹುಕೋಟಿ ವೆಚ್ಚದ ಸಿನಿಮಾ ವಾಗಿದ್ದು, ವಿಶ್ವದಾದ್ಯಂತ ಭಾರೀ ನಿರೀಕ್ಷೆ ಮೂಡಿಸಿದೆ. ಇದರ ನಡುವೆ ಕನ್ನಡದ ವಿಭಿನ್ನವಾದ ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.
ಕನ್ನಡ ವ್ಯಾಕರಣ ದೊಂದಿಗೆ ಕನ್ನಡದ ಸೊಗಡಿನ, ಕನ್ನಡವೇ ತುಂಬಿರುವ ಕಂಪ್ಲೀಟ್ ಎಂಟರ್ಟೈನರ್ ಚಿತ್ರ ಸವರ್ಣ ದೀರ್ಘ ಸಂಧಿ ಬಿಡುಗಡೆಯಾಗಲಿದೆ ದೀರ್ಘ ಸಂಧಿ. ಕಾಮಿಡಿ ಮಿಶ್ರಿತ ಲವ್ ಸ್ಟೋರಿಯ ಟ್ರೈಲರ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಒಂದರ ಮೇಲೊಂದರಂತೆ ಬಿಡುಗಡೆಯಾಗುತ್ತಿರುವ ಚಿತ್ರದ ಅದ್ಭುತವಾದ ಸಾಂಗ್ ಗಳು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.
ಬಹಳ ಸಮಯದ ನಂತರ ಮನೋಮೂರ್ತಿಯವರ ಮ್ಯೂಸಿಕ್ ನಲ್ಲಿ ಮೂಡಿಬಂದಿರುವ ಈ ಚಿತ್ರದ ಶ್ರೇಯಾ ಘೋಶಾಲ್ ಅವರ ಇಂಪಾದ ದನಿಯಲ್ಲಿ “ಕೊಳಲಾದೆನಾ ಕೃಷ್ಣ” ಹಾಡು ಟಿಕ್ ಟಾಕ್ ನಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿದೆ.