HomeCelebritiesಹುಟ್ಟುಹಬ್ಬದ ದಿನದಂದೇ ವೇದಿಕೆ ಮೇಲೆ ಕಣ್ಣೀರಿಟ್ಟ ರಕ್ಷಿತಾ ಪ್ರೇಮ್..! ಯಾಕೆ ಗೊತ್ತಾ? ಈ ಸುದ್ದಿ ಓದಿ

ಹುಟ್ಟುಹಬ್ಬದ ದಿನದಂದೇ ವೇದಿಕೆ ಮೇಲೆ ಕಣ್ಣೀರಿಟ್ಟ ರಕ್ಷಿತಾ ಪ್ರೇಮ್..! ಯಾಕೆ ಗೊತ್ತಾ? ಈ ಸುದ್ದಿ ಓದಿ

ರಕ್ಷಿತಾ ಪ್ರೇಮ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಅಪ್ಪು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ. ಇವರ ಅಭಿನಯದ ಬಗ್ಗೆ ಎರಡು ಮಾತಿಲ್ಲ. ಇವರು ಅಭಿನಯಿಸುತ್ತಿದ್ದ ವೇಳೆಯಲ್ಲಿ ಯಾರನ್ನೇ ಕೇಳಿದರೂ ಸಹ ಬಹುತೇಕ ಮಂದಿ ಫೇವರಿಟ್ ಹೀರೋಯಿನ್ ರಕ್ಷಿತಾ ಎಂದೇ ಹೇಳುತ್ತಿದ್ದರು.

ಹೌದು ರಕ್ಷಿತಾ ಅವರು ಸಿನಿಮಾ ರಂಗಕ್ಕೆ ಪ್ರವೇಶಿಸಿ ಅತಿ ವೇಗವಾಗಿ ದೊಡ್ಡ ಮಟ್ಟದ ಹೆಸರನ್ನು ಮಾಡಿ ಸ್ಟಾರ್ ಹೀರೋಯಿನ್ ಆದವರು. ಪುನೀತ್ , ಸುದೀಪ್ , ದರ್ಶನ್ & ಶಿವಣ್ಣ ರಂತಹ ದೊಡ್ಡ ದೊಡ್ಡ ಸ್ಟಾರ್ ನಟರುಗಳ ಜತೆ ಅಭಿನಯಿಸಿ ಸೈ ಎನ್ನಿಸಿಕೊಂಡವರು. ಅಣ್ಣಾವ್ರ ಮಗ ಅಪ್ಪು ಅವರ ಮೊದಲನೇ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದ್ರು ಎಂದರೆ ರಕ್ಷಿತಾ ಅವರ ನಟನೆಯ ಬಗ್ಗೆ ಕೇಳ್ಬೇಕಾ?

ರಕ್ಷಿತಾ ಅವರು ದೊಡ್ಡ ಮಟ್ಟದ ಹೆಸರನ್ನು ಸಾಧಿಸಲು ಅಷ್ಟೇ ದೊಡ್ಡ ಮಟ್ಟದ ಶ್ರಮವನ್ನು ಸಹ ಪಟ್ಟಿದ್ದಾರೆ. ಭಿನ್ನ ವಿಭಿನ್ನ ಚಿತ್ರಗಳು ಆ ಚಿತ್ರಗಳಿಗೆ ತಕ್ಕ ವಿವಿಧ ರೀತಿಯ ಪಾತ್ರಗಳನ್ನು ಮಾಡಿರುವ ರಕ್ಷಿತಾ ಪ್ರೇಮ್ ಅವರು ಹಲವಾರು ಪ್ರಶಸ್ತಿಗಳನ್ನು ಸಹ ತಮ್ಮ ನಟನೆಗೆ ಪಡೆದುಕೊಂಡಿದ್ದಾರೆ.

ಇನ್ನು ನಿನ್ನೆಯಷ್ಟೇ ರಕ್ಷಿತಾ ಪ್ರೇಮ್ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಅದೇ ಕಾರ್ಯಕ್ರಮದಲ್ಲಿ ರಕ್ಷಿತಾ ಪ್ರೇಮ್ ಅವರ ಸಹೋದರ ಅಭಿಷೇಕ್ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಅನ್ನು ಲಾಂಚ್ ಮಾಡಲಾಯಿತು. ಜೋಗಿ ಪ್ರೇಮ್ ನಿರ್ದೇಶನ ಮಾಡಲಿರುವ ಈ ಚಿತ್ರಕ್ಕೆ ಏಕ್ ಲವ್ ಯಾ ಎಂದು ಶೀರ್ಷಿಕೆಯನ್ನು ಇಡಲಾಗಿದೆ. ಇನ್ನು ಚಿತ್ರದ ಫಸ್ಟ್ ಲುಕ್ ಲಾಂಚ್ ಆದ ಬಳಿಕ ಅಭಿಷೇಕ್ ಅವರನ್ನು ಸ್ಟೇಜ್ ಮೇಲೆ ಕರೆತಂದ ರಕ್ಷಿತಾ ಪ್ರೇಮ್ ಅವರು ಕೆಲ ಮಾತುಗಳನ್ನು ಆಡಿ ಭಾವುಕರಾದರು.

ಸ್ಟೇಜ್ ಮೇಲೆ ನಿಂತು ಮಾತನಾಡಿದ ರಕ್ಷಿತ ಪ್ರೇಮ್ ಅವರು ನಾನು ಅಪ್ಪು ಸಿನಿಮಾ ಕಾರ್ಯಕ್ರಮದಲ್ಲಿ ಸ್ಟೇಜ್ ಮೇಲೆ ಪರ್ಫಾಮೆನ್ಸ್ ಮಾಡಿದಾಗ ಎಷ್ಟು ನಡುಗುತ್ತಿದ್ದೆನೋ ಅದೇ ರೀತಿ ಈಗಲೂ ಸಹ ನಡುಗುತ್ತಿದ್ದೇನೆ, ಆಗಿನಿಂದ ಈಗಿನವರೆಗೂ ಕನ್ನಡದ ಜನ ನನ್ನ ಕೈಯನ್ನು ಹಿಡಿದು ನಡೆಸಿದ್ದಾರೆ ಮತ್ತು ನನ್ನ ಸಿನಿ ಜೀವನವನ್ನು ಸಕ್ಸಸ್ಫುಲ್ ಆಗಲು ಕಾರಣಕರ್ತರಾಗಿದ್ದಾರೆ.

ನನಗೆ ತೋರಿಸಿದ ಪ್ರೀತಿ ಮತ್ತು ಬೆಂಬಲವನ್ನೇ ನನ್ನ ತಮ್ಮ ಅಭಿಷೇಕ್ ಗೂ ಸಹ ತೋರಿಸಿ ಎಂದು ಕನ್ನಡದ ಜನತೆಯಲ್ಲಿ ರಕ್ಷಿತಾ ಪ್ರೇಮ್ ಅವರು ಕೇಳಿಕೊಂಡರು. ಈ ವೇಳೆ ತಾವು ಚಿತ್ರರಂಗಕ್ಕೆ ಪ್ರವೇಶಿಸಬೇಕಾದರೆ ಎದುರಿಸಿದ ಹಲವಾರು ರೀತಿಯ ಕಷ್ಟಗಳನ್ನು ನೆನೆದು ರಕ್ಷಿತಾ ಪ್ರೇಮ್ ಅವರು ಕಣ್ಣೀರು ಹಾಕಿದರು. ಆ ನೆನಪುಗಳನ್ನೆಲ್ಲ ಮೆಲುಕು ಹಾಕಿದ ರಕ್ಷಿತಾ ಪ್ರೇಮ್ ಅವರು ಕನ್ನಡ ಜನತೆ ಅವರನ್ನು ಗೆಲ್ಲಿಸಿದ ಪರಿಗೆ ಕೃತಜ್ಞತೆಯನ್ನು ಸಹ ಸಲ್ಲಿಸಿದರು.

Must Read

spot_img
Share via
Copy link
Powered by Social Snap