Kannada Beatz
Celebrities

ವಾರಾಹಿ ಪ್ರೊಡಕ್ಷನ್ ಹೌಸ್ ನಡಿ 15ನೇ ಸಿನಿಮಾ ಅನೌನ್ಸ್… ಹೀರೋ ಆಗಿ ಲಾಂಚ್ ಆಗ್ತಿದ್ದಾರೆ ಜನಾರ್ದನ ರೆಡ್ಡಿ ಪುತ್ರ ಕಿರೀಟಿ

ಟಾಲಿವುಡ್‌ನ ಜನಪ್ರಿಯ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಹೈ ಬಜೆಟ್ ಹಾಗೂ ಕಂಟೆಂಟ್ ಸಿನಿಮಾಗಳನ್ನು ಪ್ರೇಕ್ಷಕರ ಮಡಿಲಿಗೆ ಹಾಕ್ತಿದೆ. ಇದೀಗ ವಾರಾಹಿ ರಾಧಾ ಕೃಷ್ಣ ಸಾರಥ್ಯದಲ್ಲಿ ತೆಲುಗು-ಕನ್ನಡ ಭಾಷೆಯಲ್ಲಿ ಸಿನಿಮಾ ನಿರ್ಮಾಣ ಮಾಡ್ತಿದ್ದು, ಈ ಚಿತ್ರದ ಮೂಲಕ ಜನಾರ್ದನ ರೆಡ್ಡಿ ಪುತ್ರ ಕಿರೀಟಿಯನ್ನು ನಾಯಕನಾಗಿ ಪರಿಚಯಿಸ್ತಿದೆ.

ಇನ್ನೂ ಹೆಸರಿಡದ ಈ ಸಿನಿಮಾವನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸಲಾಗ್ತಿದ್ದು, ಲವ್ ಮತ್ತು ಫ್ಯಾಮಿಲಿ ಎಂಟರ್‌ಟೈನರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇರಲಿದ್ದು,‌ ಹಲವು ಸೂಪರ್ ಹಿಟ್ ಸಿನಿಮಾಗಳ ತಂತ್ರಜ್ಞರನ್ನು ಈ ಸಿನಿಮಾದ ಭಾಗವಾಗಿದ್ದಾರೆ.

ಸಾಯಿ ಕೊರಪಾಠಿ ನಿರ್ಮಿಸಲಿರುವ ಚಿತ್ರಕ್ಕೆ ರಾಕ್‌ಸ್ಟಾರ್ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಲಿದ್ದು, ಬಾಹುಬಲಿ ಸಿನಿಮಾದ ಕಣ್ಣು ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣವನ್ನು ವಹಿಸಲಿದ್ದಾರೆ. ರವೀಂದರ್ ಆರ್ಟ್ ಡೈರೆಕ್ಟರ್ ಆಗಿ, ಭಾರತದ ಟಾಪ್ ಸ್ಟಂಟ್ ನಿರ್ದೇಶಕ ಪೀಟರ್ ಹೆನ್ ಆಕ್ಷನ್ ಸೀಕ್ವೆನ್ಸ್‌ಗಳಿಗೆ ನೃತ್ಯ ಸಂಯೋಜನೆ ಮಾಡಲಿದ್ದಾರೆ.

ಮಾರ್ಚ್ 4 ರಂದು ಚಿತ್ರದ ಅದ್ಧೂರಿ ಲಾಂಚ್ ಕಾರ್ಯಕ್ರಮ ನಡೆಯಲಿದೆ. ಇತರ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು.

ಪಾತ್ರವರ್ಗ: ಕಿರೀಟಿ

ತಾಂತ್ರಿಕ ಸಿಬ್ಬಂದಿ

ಕಥೆ, ನಿರ್ದೇಶಕ: ರಾಧಾ ಕೃಷ್ಣ

ನಿರ್ಮಾಪಕ: ಸಾಯಿ ಕೊರಪಾಠಿ

ಸಂಗೀತ: ದೇವಿ ಶ್ರೀ ಪ್ರಸಾದ್

ಛಾಯಾಗ್ರಹಣ: ಕೆ ಸೆಂಥಿಲ್ ಕುಮಾರ್

ಪ್ರೊಡಕ್ಷನ್ ಡಿಸೈನರ್: ರವೀಂದರ್

ಸಾಹಸ ನಿರ್ದೇಶಕ: ಪೀಟರ್ ಹೆನ್

ಪತ್ರಿಕಾ ಸಂಪರ್ಕ ಅಧಿಕಾರಿ: ಹರೀಶ್ ಅರಸು

Related posts

ಹೌಸ್​ ಪಾರ್ಟಿ ಮೂಡ್​ನಲ್ಲಿ ALL OK

Kannada Beatz

ಹೊಸಬರ ಜೊತೆ ಮತ್ತೆ ಕೈ ಜೋಡಿಸಿದ ಚಿನ್ನಾರಿ ಮುತ್ತ..ವಿಜಯ್ ರಾಘವೇಂದ್ರ ಈಗ ‘ರಾಘು’…ಥ್ರಿಲ್ಲರ್ ಎಕ್ಸ್ ಪೆರಿಮೆಂಟಲ್ ‘ರಾಘು’ ಫಸ್ಟ್ ಲುಕ್ ರಿಲೀಸ್!

Kannada Beatz

ಬಿಗ್ ಬಾಸ್ ನಲ್ಲಿ ಅಕ್ಷತಾ ಪಡೆದ ಸಂಭಾವನೆ ಎಷ್ಟು ಗೊತ್ತಾ?

administrator

Leave a Comment

Share via
Copy link
Powered by Social Snap