HomeCelebritiesಹೊಸಬರ ಜೊತೆ ಮತ್ತೆ ಕೈ ಜೋಡಿಸಿದ ಚಿನ್ನಾರಿ ಮುತ್ತ..ವಿಜಯ್ ರಾಘವೇಂದ್ರ ಈಗ ‘ರಾಘು’…ಥ್ರಿಲ್ಲರ್ ಎಕ್ಸ್ ಪೆರಿಮೆಂಟಲ್...

ಹೊಸಬರ ಜೊತೆ ಮತ್ತೆ ಕೈ ಜೋಡಿಸಿದ ಚಿನ್ನಾರಿ ಮುತ್ತ..ವಿಜಯ್ ರಾಘವೇಂದ್ರ ಈಗ ‘ರಾಘು’…ಥ್ರಿಲ್ಲರ್ ಎಕ್ಸ್ ಪೆರಿಮೆಂಟಲ್ ‘ರಾಘು’ ಫಸ್ಟ್ ಲುಕ್ ರಿಲೀಸ್!

ಹೊಸಬಗೆಯ, ಹೊಸತನ ಸಿನಿಮಾಗಳನ್ನು ಮಾಡುವುದರಲ್ಲಿ ಹೊಸಬರಿಗೆ ಅವಕಾಶ ಕೊಡುವುದರಲ್ಲಿ ಪ್ರತಿಭಾನ್ವಿತ ನಟ ವಿಜಯ್ ರಾಘವೇಂದ್ರ ಸದಾ ಮುಂದು.. ಸೀತಾರಾಮ್ ಬಿನೋಯ್ ಕೇಸ್ ನಂಬರ್ 18 ಸಿನಿಮಾ ಬಳಿಕ ಈಗ ವಿಜಯ್ ರಾಘವೇಂದ್ರ ಮತ್ತೊಮ್ಮೆ ಹೊಸಬರ ಜೊತೆ ಕೈ ಜೋಡಿಸಿದ್ದಾರೆ. ರಾಘು ಆಗಿ ಮಿಂಚಲಿದ್ದಾರೆ.

ಟೈಟಲ್ ಫಸ್ಟ್ ಲುಕ್ ರಿಲೀಸ್
ಆನ, ಬ್ಯಾಂಗ್ ಸಿನಿಮಾಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ಅನುಭವವಿರುವ ಆನಂದ್ ರಾಜ್ ರಾಘು ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ. ಈ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಖತ್ ಕ್ಯೂರಿಯಾಸಿಟಿ ಹುಟ್ಟಿಸುವಂತಿದೆ.

ರಾಘು ಥ್ರಿಲ್ಲರ್ ಎಕ್ಸ್ ಪಿರಿಮೆಂಟಲ್ ಸಿನಿಮಾವಾಗಿದ್ದು, ಕನ್ನಡದಲ್ಲಿ ಇದೊಂದು ಹೊಸತನದ ಸಿನಿಮಾವಾಗಿದ್ದು, ವಿಜಯ್ ರಾಘವೇಂದ್ರ ಹಿಂದೆಂದೂ ಮಾಡದ ವಿಭಿನ್ನ ಪಾತ್ರವೊಂದಕ್ಕೆ ಜೀವ ತುಂಬಲಿದ್ದಾರೆ. ಡಿಕೆಎಸ್ ಸ್ಟುಡಿಯೋಸ್ ಮತ್ತು ಕೋಟ ಫಿಲ್ಮಂ ಫ್ಯಾಕ್ಟರಿ ಬ್ಯಾನರ್ ನಡಿ ರಣ್ವೀತ್‌ ಶಿವಕುಮಾರ್‌, ಅಭಿಷೇಕ್‌ ಕೋಟ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಬ್ಯಾಂಗ್’, ‘ಫ್ಯಾಮಿಲಿ ಪ್ಯಾಕ್’ ಖ್ಯಾತಿಯ ಉದಯ್‌ ಲೀಲಾ ಕ್ಯಾಮೆರಾ ವರ್ಕ್, ಸೂರಜ್‌ ಜೋಯಿಸ್‌ ಸಂಗೀತ ಸಂಯೋಜನೆ, ಅಥರ್ವ್ ಆರ್ಯ ಸಂಭಾಷಣೆ ಬರೆಯುತ್ತಿದ್ದಾರೆ. ಮೇ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದ್ದು, ಸದ್ಯ ಟೈಟಲ್ ಹಾಗೂ ಫಸ್ಟ್ ಲುಕ್ ಬಿಟ್ಟು ಚಿತ್ರರಸಿಕರ ಕ್ಯೂರಿಯಾಸಿಟಿಯನ್ನು ರಾಘು ಚಿತ್ರತಂಡ ದುಪ್ಪಟ್ಟು ಮಾಡಿದೆ.

Must Read

spot_img
Share via
Copy link
Powered by Social Snap