Kannada Beatz
Celebrities

ದಯವಿಟ್ಟು ನನಗೊಂದು ನಟ ಸಾರ್ವಭೌಮ ಟಿಕೆಟ್ ನೀಡಿ ಎಂದು ಕೇಳಿಕೊಂಡ ಪವನ್ ಒಡೆಯರ್..!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಪವನ್ ಒಡೆಯರ್ ಕಾಂಬಿನೇಷನ್ನ ಮತ್ತೊಂದು ಸಿನಿಮಾ ನಟಸಾರ್ವಭೌಮ ಇದೇ ತಿಂಗಳ 7 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಈಗಾಗಲೇ ನಟ ಸಾರ್ವಭೌಮ ಚಿತ್ರ ಸಾಕಷ್ಟು ಕ್ರೇಜ್ ಹುಟ್ಟಿಸಿದ್ದು ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟು ಹಾಕಿದೆ.

ಪುನೀತ್ ರಾಜ್ಕುಮಾರ್ ಅವರು ಇದೇ ಮೊದಲ ಬಾರಿಗೆ ಹಾರರ್ ಚಿತ್ರವೊಂದರಲ್ಲಿ ನಟಿಸಿದ್ದು ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಇನ್ನು ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಈಗಾಗಲೇ ಓಪನ್ ಆಗಿದ್ದು ಬೆಂಗಳೂರಿನ ಹಲವಾರು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.

ಇನ್ನು ಈ ಬಾರಿಯ ವಿಶೇಷವೇನೆಂದರೆ ಇದೇ ಮೊದಲ ಬಾರಿಗೆ ಊರ್ವಶಿ ಚಿತ್ರಮಂದಿರದಲ್ಲಿ ಬೆಳಗಿನ ಜಾವ 4 ಗಂಟೆಗೆ ಫ್ಯಾನ್ಸ್ ಶೋವನ್ನು ಅಪ್ಪು ಅಭಿಮಾನಿಯೊಬ್ಬರು ಆಯೋಜಿಸಿದ್ದಾರೆ. ಹೌದು ಲಾಲ್ ಬಾಗ್ ರಸ್ತೆಯಲ್ಲಿರುವ ಪೂರ್ವ ಶ್ರೀ ಚಿತ್ರಮಂದಿರದಲ್ಲಿ ಫ್ಯಾನ್ಸ್ ಶೋವನ್ನು ಅಪ್ಪು ಅಭಿಮಾನಿಯಾದ ಅಭಿ ಅವರು ಆಯೋಜಿಸಿದ್ದು ಶೋನ ಎಲ್ಲಾ ಟಿಕೆಟ್ ಗಳನ್ನು ಅವರೇ ಖರೀದಿ ಮಾಡಿಬಿಟ್ಟಿದ್ದಾರೆ.

ಇನ್ನು ಈ ವಿಷಯದ ಕುರಿತು ನಿನ್ನೆ ಪವನ್ ಒಡೆಯರ್ ಅವರು ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ಪೂರ್ವ ಶ್ರೀ ಚಿತ್ರಮಂದಿರದ ಫ್ಯಾನ್ ಶೋ ಮತ್ತು ಅದರ ಟಿಕೆಟ್ ಗಳನ್ನು ಖರೀದಿ ಮಾಡಿರುವುದರ ಕುರಿತು ಸಂತಸ ವ್ಯಕ್ತಪಡಿಸಿದ ಅವರು ಕೊನೆಯಲ್ಲಿ ಸಾಧ್ಯವಾದರೆ ನನಗೊಂದು ಟಿಕೆಟ್ ಕೊಡಿ ಎಂದು ಕೇಳಿಕೊಂಡಿದ್ದಾರೆ.

Related posts

ನಟ ವಿನೋದ್ ಪ್ರಭಾಕರ್ ಅವರೊಂದಿಗೆ ವಿಶೇಷ ಪಾತ್ರದಲ್ಲಿ ಲೂಸ್ ಮಾದ ಯೋಗಿ

Kannada Beatz

ದುನಿಯಾ ವಿಜಯ್ ಬಿಡುಗಡೆ ಮಾಡಿದರು “ರಾಣ”ನ ಹಾಡು.

Kannada Beatz

ಹುಟ್ಟುಹಬ್ಬದ ದಿನದಂದೇ ವೇದಿಕೆ ಮೇಲೆ ಕಣ್ಣೀರಿಟ್ಟ ರಕ್ಷಿತಾ ಪ್ರೇಮ್..! ಯಾಕೆ ಗೊತ್ತಾ? ಈ ಸುದ್ದಿ ಓದಿ

administrator

Leave a Comment

Share via
Copy link
Powered by Social Snap