Kannada Beatz
News

ವೆಬ್ ಸಿರೀಸ್ ಲೋಕಕ್ಕೆ ವಿಕ್ರಮ್ ರವಿಚಂದ್ರನ್ ಹಾಗೂ ಅದಿತಿ ಪ್ರಭುದೇವ ಎಂಟ್ರಿ… ಇಂದಿನಿಂದ ಜಿಯೋ ಸಿನಿಮಾದಲ್ಲಿ ‘ಲವ್ ಯೂ ಅಭಿ’

ಪರಭಾಷೆಗಳಲ್ಲಿ ವೆಬ್ ಸಿರೀಸ್ ಗಳ ಟ್ರೆಂಡ್ ಜೋರಾಗಿದೆ. ದೊಡ್ಡ ದೊಡ್ಡ ಸ್ಟಾರ್ಸ್ ವೆಬ್ ಸಿರೀಸ್ ಪ್ರಪಂಚಕ್ಕೆ ಎಂಟ್ರಿ ಕೊಡ್ತಿದ್ದಾರೆ. ಆದರೆ ಕನ್ನಡದಲ್ಲಿ ವೆಬ್ ಸಿರೀಸ್ ಗಳ ಸಂಖ್ಯೆ ಕಡಿಮೆ ಇದೆ ಎಂಬ ಮಾತ್ತಿತ್ತು. ಈಗ ಟ್ರೆಂಡ್ ಬದಲಾಗಿದೆ. ಕನ್ನಡದಲ್ಲಿಯೂ ವೆಬ್ ಸಿರೀಸ್ ಜಮಾನ ಶುರುವಾಗಿದೆ.

ಮನರಂಜನಾ ಲೋಕದಲ್ಲೀಗ ಹೊಸ ಅವೇಗ ಸೃಷ್ಟಿಸಿರುವ ಜಿಯೋ ಸಿನಿಮಾ ಕನ್ನಡಲ್ಲಿ ವೆಬ್ ಸಿರೀಸ್ ಆರಂಭಿಸಿದೆ. ಅದರ ಮೊದಲ ಭಾಗವಾಗಿ ಲವ್ ಯೂ ಅಭಿ ಎಂಬ ಸಿರೀಸ್ ಶುರು ಮಾಡಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಸುಪುತ್ರ ವಿಕ್ರಮ್ ರವಿಚಂದ್ರನ್ ಹಾಗ ಅದಿತಿ ಪ್ರಭುದೇವ ಲವ್ ಯೂ ಅಭಿ ಮೂಲಕ ವೆಬ್ ಸಿರೀಸ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇಂದಿನಿಂದ ಜಿಯೋ ಸಿನಿಮಾದಲ್ಲಿ ಈ ಸಿರೀಸ್ ಸ್ಕ್ರೀಮ್ ಆಗ್ತಿದೆ.

ಏಳು ಎಪಿಸೋಡ್ ಗಳನ್ನೊಂಡ ಈ ಸಿರೀಸ್ ಉಚಿತವಾಗಿ ನೋಡುವ ಅವಕಾಶವನ್ನು ಜಿಯೋ ಸಿನಿಮಾ ಪ್ರೇಕ್ಷಕರಿಗೆ ಕಲ್ಪಿಸಿದೆ. ಕಾಳಿ ವೇಲಾಯುಧಂ ನಿರ್ಮಾಣ ಮಾಡಿ, ನಿರ್ದೇಶಿಸಿರುವ ಲವ್ ಯೂ ಅಭಿ ಸಿರೀಸ್ ನಲ್ಲಿ ವಿಕ್ಕಿ ಶಿವ ಎಂಬ ಪಾತ್ರದಲ್ಲಿ ನಟಿಸಿದ್ರೆ, ಅದಿತಿ ಅಭಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ ದೃಶ್ಯಮಾಧ್ಯಮ ಲೋಕಕ್ಕೆ ಹೊಸ ಫ್ಲೇವರ್ ಪರಿಚಯಿಸಲಿರುವ ಈ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲಿ ಹೊಸ ಉತ್ಸಾಹದ ನಟರ ಜೊತೆಗೆ ವಿನಯಾ ಪ್ರಸಾದ್, ರಚಿತಾ ಮಹಾಲಕ್ಷ್ಮಿ, ಅಶೋಕ್ ಶರ್ಮ, ಶ್ರೀನಾಥ್, ಅಂಬಿಕಾ, ಶ್ರೀನಿವಾಸ ಮೂರ್ತಿ, ಸುಂದರ್ರಾಗಜ್‌ ಹೀಗೆ ಅನುಭವಿ ಕಲಾವಿದರ ದಂಡೂ ಇದೆ. ‘ಲವ್‌ ಯು ಅಭಿ’ಗೆ ಅರುಣ್ ಬ್ರಹ್ಮ ಕ್ಯಾಮೆರಾ ಚಳಕವಿದ್ದು, ಪ್ರದಿಪ್‌ ರಾಘವ್ ಸಂಕಲನ ಮಾಡಿದ್ದಾರೆ. ನಿಜಿಲ್‌ ದಿನಕರ್‍ ಸಂಗೀತ ನಿರ್ದೇಶನ ಮತ್ತು ಧ್ವನಿ ವಿನ್ಯಾಸವನ್ನು ನಿರ್ವಹಿಸಿದ್ದಾರೆ. ಅಭಿಲಾಷ್‌ ಗೌಡ ಮತ್ತು ಜಿ.ವಿ. ಸತೀಶ್‌ ಕುಮಾರ್ ಜಂಟಿಯಾಗಿ ಮಾತು ಪೋಣಿಸಿದ್ದಾರೆ.

Related posts

ಮೋಷನ್ ಪೋಸ್ಟರ್ ನಲ್ಲಿ ‘ಜೀಬ್ರಾ’…ದೀಪಾವಳಿಗೆ ತೆರೆಗೆ ಬರ್ತಿದೆ ಡಾಲಿ ಧನಂಜಯ್-ಸತ್ಯ ದೇವ್ ಸಿನಿಮಾ

Kannada Beatz

ಹೈಪರ್ ಲಿಂಕ್ ಕಥಾ ಶೈಲಿಯ ಕೇಸ್ ಆಫ್ ಕೊಂಡಾಣ.

Kannada Beatz

“ಗಿರ್ಕಿ” ಚಿತ್ರತಂಡದಿಂದ ಕನ್ನಡ ಜನತೆಗೆ ಉತ್ತರಾಯಣ ಪುಣ್ಯಕಾಲ ಸಂಕ್ರಾಂತಿ ಹಬ್ಬದ ಶುಭಾಶಯಗಳು.

Kannada Beatz

Leave a Comment

Share via
Copy link
Powered by Social Snap