Kannada Beatz
News

ಮೇ 6ಕ್ಕೆ ತೆರೆಗೆ ಬರುತ್ತಿದೆ “ದ್ವಿಮುಖ”.

ಚಿತ್ರದಲ್ಲಿ ಕಥೆಯೇ ಪ್ರಮುಖ.

ಎರಡು ಮುಖಗಳನ್ನು ಹೊಂದಿರುವ ಮನುಷ್ಯರ ಪಾಪಗಳಿಂದ ಹುಟ್ಟಿದ ಕಥೆ “ದ್ವಿಮುಖ”. ಸಸ್ಪೆನ್ಸ್ ಥ್ರಿಲ್ಲರ್ ಕಥೆ ಆಧಾರಿತ ಚಿತ್ರವಿದು.

ಮನುಷ್ಯನ ಮನಸ್ಸಿನಲ್ಲಿರುವ “ದ್ವಿಮುಖ”ವನ್ನು ಅನಾವರಣಗೊಳಿಸಲು ಈ ಚಿತ್ರ ಇದೇ ಮೇ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಹಲವಾರು ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ನಿರ್ವಹಿಸಿರುವ ಮಧು ಶ್ರೀಕಾರ್ ಅವರು “ದ್ವಿಮುಖ” ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ.

ನಾಯಕ ನಟನಾಗಿ ಮೊದಲ ಸಿನಿಮಾದಲ್ಲಿ ನಟಿಸಿರುವ ಪ್ರವೀಣ್ ಅಥರ್ವ, ರಂಗಭೂಮಿ ಹಿನ್ನೆಲೆಯಿಂದ ಬಂದವರು. ಕಥೆ ಮತ್ತು ಚಿತ್ರ ಕಥೆಯನ್ನು ಕೂಡ ಇವರೇ ಬರೆದಿದ್ದಾರೆ. ಪ್ರತಿಯೊಬ್ಬ ಮನುಷ್ಯನಲ್ಲೂ ಎರಡು ಮುಖಗಳು ಇರುತ್ತವೆ, ಸಂದರ್ಭಕ್ಕೆ ತಕ್ಕಂತೆ ಅವುಗಳನ್ನು ಹೇಗೆ ಬಳಸುತ್ತಾರೆ ಎಂಬುದು ಕಥೆ ಹುಟ್ಟಿಕೊಳ್ಳಲು ಸ್ಪೂರ್ತಿ ಎನ್ನುತ್ತಾರೆ ನಟ – ಕಥೆಗಾರ ಪ್ರವೀಣ್ ಅಥರ್ವ.

ಪರ್ಪಲ್ ರಾಕ್ ಸ್ಟುಡಿಯೋ ಮೂಲಕ ಚಿತ್ರ ಬಿಡುಗಡೆ ಮಾಡುತ್ತಿರುವ ಗಣೇಶ್ ಪಾಪಣ್ಣ ಅವರು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳಾಡಿದರು.

ನಾಯಕಿ ಕವಿತಾ ಗೌಡ ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡಿ, ಚಿತ್ರ ನಿರ್ಮಾಣದ ಸಮಯದಲ್ಲಿ ಚಿತ್ರತಂಡ ಪಟ್ಟ ಶ್ರಮ ವಿವರಿಸಿದರು.

ಮತ್ತೊಬ್ಬ ನಾಯಕ ವಿಜಯ್ ಚಂದ್ರ, ಛಾಯಾಗ್ರಹಕ ಕಿಟ್ಟಿ ಕೌಶಿಕ್, ಸಹ ನಿರ್ದೇಶಕ ಮತ್ತು ಸಂಕಲನಕಾರ ಯುಧಿ ಶಂಕರ್ ಹಾಗೂ ಮಾಸ್ಟರ್ ಚಿರಂತ್
” ದ್ವಿಮುಖ” ದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.

ರಂಗಾಯಣ ರಘು, ವಿಜಯ್ ಚೆಂಡೂರ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತು, ನಯನ, ಪ್ರವೀಣ್
ಡಿ ರಾವ್, ಪದ್ಮಜಾರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಬಕ್ಕೇಶ್ ಮತ್ತು ಕಾರ್ತಿಕ್ ಸಂಗೀತ ನಿರ್ದೇಶನ ಮತ್ತು ದೇವಿಪ್ರಕಾಶ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

Related posts

’ಮಾದೇವ’ನಿಗೆ ಜೋಡಿಯಾದ ಸೋನಲ್ ಮೊಂಥೆರೋ…ಮತ್ತೆ ಒಂದಾಗ್ತಿದ್ದಾರೆ ‘ರಾಬರ್ಟ್’ ಜೋಡಿ

Kannada Beatz

ಪವನ್ ಒಡೆಯರ್ ನಿರ್ಮಾಣದ ‘ಡೊಳ್ಳು’ ಸಿನಿಮಾದ ಮೊದಲ ಹಾಡು ಅನಾವರಣ… ’ಮಯಾನಗರಿ’ ಗಾನಲಹರಿ ಬಿಡುಗಡೆ ಮಾಡಿದ ಡಾಲಿ ಧನಂಜಯ

Kannada Beatz

ಗಟ್ಟಿ ಕಥೆಯೊಂದಿಗೆ ಬಂದ ‘ಸೋಮು’..ಶಿಷ್ಯನ ಸಿನಿಮಾಗೆ ಸುಕ್ಕ ಸೂರಿ ಸಾಥ್..

Kannada Beatz

Leave a Comment

Share via
Copy link
Powered by Social Snap