ಕಿರಂಗದೂರಿನ ಮನೆಯಲ್ಲಿ ಯಶ್, ಪ್ರಶಾಂತ್ ನೀಲ್ ಹಾಗೂ ವಿಜಯ್ ಕಿರಗಂದೂರು.
ಹೊಂಬಾಳೆ ಫಿಲಂಸ್ ಸ್ಥಾಪಕ, ಕೆ ಜಿ ಎಫ್ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು.
ವಿಜಯ್ ಅವರ ನಿರ್ಮಾಣದಲ್ಲಿ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಶ್ ನಾಯಕರಾಗಿ ನಟಿಸಿರುವ “ಕೆ ಜಿ ಎಫ್” ಚಿತ್ರ ಏಪ್ರಿಲ್ 14 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.
ಇತ್ತೀಚೆಗೆ ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ ವಿಜಯ್ ಅವರು ಕಿರಗಂದೂರಿಗೆ ಭೇಟಿ ನೀಡಿದ್ದಾರೆ.
ಕಿರಗಂದೂರು ನಿರ್ಮಾಪಕ ವಿಜಯ್ ಅವರ ಊರು. ಅಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿದ ಮೂವರು, ವಿಜಯ್ ಕಿರಗಂದೂರು ಅವರ ಮನೆಯಲ್ಲೇ ಮಧ್ಯರಾತ್ರಿಯವರೆಗೂ ಕಾಲ ಕಳೆದಿದ್ದಾರೆ. ಅಲ್ಲಿನ ಪರಿಸರವನ್ನು ಕಂಡು ಯಶ್ ಹಾಗೂ ಪ್ರಶಾಂತ್ ನೀಲ್ ಸಂತೋಷಪಟ್ಟಿದ್ದಾರೆ.