Kannada Beatz
Celebrities

‘ಇಂದಿರಾ’ ಮೊದಲ ಹಾಡು ರಿಲೀಸ್… ಪ್ರೇಕ್ಷಕರ ಗಮನ ಸೆಳೆಯುತ್ತಿದೆ ‘ಸ್ಟೆಪ್ಸ್ ಟು ಡೆಸ್ಟಿನಿ’ ಟ್ರ್ಯಾಕ್

ಚಂದನವನದ ಚೆಂದದ ಬ್ಯೂಟಿ ಅನಿತಾ ಭಟ್ ನಟನೆಗೂ ಸೈ.. ನಿರ್ಮಾಣಕ್ಕೂ ಜೈ… ಈಗಾಗಲೇ ತಮ್ಮದೇ ಅನಿತಾ ಭಟ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಮುದ್ರಂ ಸಿನಿಮಾ ನಿರ್ಮಾಣ ಮಾಡಿರುವ ಅನಿತಾ ಭಟ್, ಈಗ ಇಂದಿರಾ ಸಿನಿಮಾ ತೆರೆಗೆ ತರಲು ಸಜ್ಜಾಗಿದ್ದಾರೆ. ಈ ಹಿಂದೆ ರಿಲೀಸ್ ಆಗಿದ್ದ ಇಂದಿರಾ ಸಿನಿಮಾದ ಫಸ್ಟ್ ಲುಕ್ ಕ್ಯೂರಿಯಾಸಿಟಿ ಹೆಚ್ಚಿಸಿದ್ದು, ಈಗ ಇಂದಿರಾಳ ಮೊದಲ ಹಾಡು ಆ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಕ್ಯೂರಿಯಸ್ ಆಗಿದೆ ಸ್ಟೆಪ್ಸ್ ಟು ಡೆಸ್ಟಿನಿ ಹಾಡು

ಇಂದಿರಾ ಸಿನಿಮಾದ ಮೊದಲ ಹಾಡು ಕುತೂಹಲ ಕೋಟೆಯಂತಿದೆ. A2 ಮ್ಯೂಸಿಕ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಸ್ಟೆಪ್ಸ್ ಟು ಡೆಸ್ಟಿನಿ ಹಾಡು ಕೇಳುಗರ ಗಮನಸೆಳೆಯುತ್ತಿದೆ. ನಿರ್ದೇಶಕ ರಿಷಿಕೇಶ್ ಬರೆದಿರುವ ಅದ್ಭುತ ಲಿರಿಕ್ಸ್ ಗೆ, ಲೋಹಿತ್ ನಾಯ್ಕ್ ಟ್ರೇಂಡಿ ಲಿರಿಕ್ಸ್ ಕಂಪೋಸ್ ಮಾಡಿದ್ದು, ಸುಪ್ರಿಯ ರಾಮ್ ಕಂಠದಲ್ಲಿ ಹಾಡಿಗೆ ಧನ್ವಿಯಾಗಿದ್ದಾರೆ. ಸಸ್ಪೆನ್ಸ್ ಅಂಶಗಳಿಂದ ಈ ಹಾಡು ಅಟ್ರ್ಯಾಕ್ಟ್ ಮಾಡ್ತಿದೆ.

ಇಂದಿರಾ ಸೈಕಲಾಜಿಕಲ್‌ ಥ್ರಿಲ್ಲರ್‌ ಸಿನಿಮಾವಾಗಿದ್ದು, ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ನಿರ್ಮಾಣವಾಗ್ತಿದೆ. ಮುಖ್ಯಭೂಮಿಕೆಯಲ್ಲಿ ಅನಿತಾ ಭಟ್ ನಟಿಸಿದ್ದು, ಉಳಿದಂತೆ ಬಿಗ್‌ ಬಾಸ್‌ ಖ್ಯಾತಿಯ ರೆಹಮಾನ್‌ ಹಾಸನ್‌, ಚಕ್ರವರ್ತಿ ಚಂದ್ರಚೂಡ್‌, ನೀತು ಹಾಗೂ ಶಫಿ ಬಣ್ಣ ಹಚ್ಚಿದ್ದಾರೆ.

ಇಂದಿರಾ ಸಿನಿಮಾಕ್ಕೆ ರಿಷಿಕೇಶ್ ಆಕ್ಷನ್ ಕಟ್ ಹೇಳುವುದರ ಜೊತೆಗೆ ಛಾಯಾಗ್ರಹಣ ಹಾಗೂ ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಲೋಹಿತ್‌ ಎಲ್.ನಾಯಕ್‌ ಮ್ಯೂಸಿಕ್, ಅಭಿಷೇಕ್ ಮಠದ್ ನೃತ್ಯ ನಿರ್ದೇಶನ ಮಾಡಿದ್ದಾರೆ.
ಅನಿತಾ ಭಟ್ ಹಾಗೂ ಸಹ ನಿರ್ಮಾಪಕರಾಗಿ ಪ್ರಜ್ಞಾನಂದ ಸೊರಬ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Related posts

ಅಂಬಿ ಪುತ್ರ ಅಭಿಷೇಕ್ ಅವರ ಅಮರ್ ಚಿತ್ರದಲ್ಲಿ ಡಿ ಬಾಸ್..!

administrator

ಹೌಸ್​ ಪಾರ್ಟಿ ಮೂಡ್​ನಲ್ಲಿ ALL OK

Kannada Beatz

ದುನಿಯಾ ವಿಜಯ್ ಬಿಡುಗಡೆ ಮಾಡಿದರು “ರಾಣ”ನ ಹಾಡು.

Kannada Beatz

Leave a Comment

Share via
Copy link
Powered by Social Snap