ಎರಡು ವರ್ಷದ ಹಿಂದೆ, ಕನ್ನಡ ಗೊತ್ತಿಲದವರಿಗೆ ಕನ್ನಡ ಕಲಿಸಲು ಹೋಗಿ, ಕನ್ನಡ್ ಗೊತ್ತಿಲ್ಲ ಅಂತ ಬಂದೆವು…
ಕನ್ನಡಾನೇ ಮಾತಾಡಿ ಅಂತ ಹೇಳದೆ, ಕನ್ನಡಾನು ಮಾತಾಡಿ ಎಂದು ಹೇಳಿದ ನನಗೆ, ನಿಮ್ಮ ಪ್ರೋತ್ಸಾಹ ಹಾಗೂ ಆಶೀರ್ವಾದದಿಂದ ಯಶಸ್ವಿಗೊಳಿಸಿದಿರಿ…
ಇಂದು ನಿಮ್ಮ ಮುಂದೆ ಒಂದು ಹೊಸ ವಿಷಯದೊಂದಿಗೆ ನಾನು ಹಾಗೂ ನನ್ನ ತಂಡ ಬಂದಿದ್ದೇವೆ.. ಒಂದು ಹೊಸ ಚಿತ್ರ, ಹೊಸ ಪ್ರಯತ್ನ..
ಚಿತ್ರದ ಶೀರ್ಷಿಕೆ “ಅಬ ಜಬ ದಬ”, ಇದನ್ನು ಹೊಸ ನಿರ್ಮಾಪಕರು ಅನಂತ ಕೃಷ್ಣ ಅವರ “ಎಸ್ ರಾಮ್ ಪ್ರೊಡ್ಯೂಕ್ಷನ್ಸ್” ಬ್ಯಾನರ್ ನಲ್ಲಿ ಮೂಡಲಿದೆ ಹಾಗೂ ಮಯೂರ ರಾಘವೇಂದ್ರ ಅವರ ಎರಡನೇ ಪ್ರಯತ್ನ ಕನ್ನಡ್ ಗೊತ್ತಿಲ್ಲದ ನಂತರ.
ಚಿತ್ರದ ಶೀರ್ಷಿಕೆಯನ್ನು ಮಂತ್ರಾಲಯದ ರಾಯರ ಸಾನಿಧ್ಯದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ನಿಮ್ಮಲ್ಲಿ ಒಂದು ನಗು ಮೂಡಿಸಲು ನಮ್ಮ ತಂಡದ ಸೃಜನಶೀಲ, ಕ್ರಿಯಾತ್ಮಕ ತಲೆಯವರು ಸೇರಿ ನಿಮ್ಮ ಮುಂದೆ ಒಂದು ಹೊಸ ಪ್ರಯತ್ನ.
ಡಿಸೆಂಬರ್ 9 ರಂದು ಬೆಳ್ಳಿಗ್ಗೆ 11:11 ಗೆ ಚಿತ್ರದ ಶೀರ್ಷಿಕೆ ಬಿಡುಗಡೆ, ನಿಮ್ಮ ಪ್ರೋತ್ಸಾಹ ಬಯಸುವ,
ನಿಮ್ಮ ಪ್ರೀತಿಯ,
ಮಯೂರ ರಾಘವೇಂದ್ರ.