Kannada Beatz
News

ನಿರೂಪ್ ಭಂಡಾರಿ ಅಭಿನಯದ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರದ ‘ಗಾ ಗರಗ’ ಹಾಡು ಬಿಡುಗಡೆ: ಕೈಲಾಶ್ ಖೇರ್ ಧ್ವನಿ ಹಾಗೂ ಸಚಿನ್ ಬಸ್ರೂರ್ ಸಂಗೀತದ ಮೋಡಿ

ಬೆಂಗಳೂರು: ನಟ ನಿರೂಪ್ ಭಂಡಾರಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರದ ‘ಗಾ ಗರಗ’ ಎಂಬ ಭಾವನಾತ್ಮಕ ಹಾಗೂ ಅರ್ಥಪೂರ್ಣ ಗೀತೆ ಅಧಿಕೃತವಾಗಿ ಬಿಡುಗಡೆಯಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಸಚಿನ್ ಬಸ್ರೂರ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಬಾಲಿವುಡ್‌ನ ಜನಪ್ರಿಯ ಗಾಯಕ ಕೈಲಾಶ್ ಖೇರ್ ತಮ್ಮ ವಿಶಿಷ್ಟ ಕಂಠದ ಮೂಲಕ ಜೀವ ತುಂಬಿದ್ದಾರೆ. ಖ್ಯಾತ ಗೀತರಚನೆಕಾರ ಪ್ರಮೋದ್ ಮರವಂತೆ ಅವರು ಬರೆದಿರುವ ಈ ಗೀತೆಯು ಕೇಳುಗರ ಮನಸ್ಸನ್ನು ತಟ್ಟುವಂತಿದೆ.

“ಬಂಗಾರದಂತ ಊರೋ ಸಿವ, ಊರೇ ಊರು ಸೂರು ಕೊಟ್ಟ ಊರು.., ಸತ್ಯಾನೇ ನಾವು ನಂಬೋ ದೈವ, ಊರೇ ಊರು ಬಾಳು ಕೊಟ್ಟ ಊರು..” ಎಂಬ ಪಲ್ಲವಿಯೊಂದಿಗೆ ಶುರುವಾಗುವ ಈ ಹಾಡು, ಹುಟ್ಟೂರು ಹಾಗೂ ಸತ್ಯದ ಹಾದಿಯ ಮಹತ್ವವನ್ನು ಸಾರುವಂತಿದೆ. ಕೈಲಾಶ್ ಖೇರ್ ಅವರ ಗಾಯನ ಮತ್ತು ಸಚಿನ್ ಬಸ್ರೂರ್ ಅವರ ಸಂಗೀತ ಹಾಡಿಗೆ ವಿಶೇಷ ತೂಕ ತಂದುಕೊಟ್ಟಿದ್ದು, ಬಿಡುಗಡೆಯಾದ ಬೆನ್ನಲ್ಲೇ ಸಂಗೀತ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಸಚಿನ್ ವಾಲಿ ಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ನಾಯಕ ನಟ ನಿರೂಪ್ ಭಂಡಾರಿ ಹಾಗೂ ನಿರ್ದೇಶಕ ಸಚಿನ್ ವಾಲಿ ಜಂಟಿಯಾಗಿ ಸ್ಕ್ರಿಪ್ಟ್ ಜವಾಬ್ದಾರಿ ಹೊತ್ತಿದ್ದಾರೆ. ಅಂಕಿತ್ ಸೋನಿಗಾರ ಈ ಚಿತ್ರವನ್ನು ನಿರ್ಮಿಸಿದ್ದು, ಪ್ರಶಾಂತ್ ಮುಲಗೆ ಸಹ ನಿರ್ಮಾಪಕರಾಗಿ ಮತ್ತು ಯಶ್ ಸೋನಿಗಾರ ಕಾರ್ಯಕಾರಿ ನಿರ್ಮಾಪಕರಾಗಿ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.

‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರವು ಬೃಹತ್ ತಾರಾಗಣವನ್ನು ಹೊಂದಿರುವುದು ವಿಶೇಷವಾಗಿದೆ. ನಿರೂಪ್ ಭಂಡಾರಿ ಅವರಿಗೆ ನಾಯಕಿಯರಾಗಿ ಬೃಂದಾ ಆಚಾರ್ಯ ಹಾಗೂ ಅಂಕಿತಾ ಅಮರ್ ಅಭಿನಯಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ್ ಅವರು ಈ ಚಿತ್ರದಲ್ಲಿ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ. ಉಳಿದಂತೆ ಹಿರಿಯ ನಟ ಸಾಯಿ ಕುಮಾರ್, ಮಧುಸೂಧನ್ ರಾವ್, ಸ್ವಾತಿ ಗುರುದತ್, ಅಶ್ವಿನ್ ಹಾಸನ್,
ಅಭಿಷೇಕ್ ಶ್ರೀಕಾಂತ್, ಶೌರ್ಯ, ಮಠ ಕೊಪ್ಪಳ, ಪ್ರಶಾಂತ್ ಮುಳಗೆ, ಚೇತನ್ ದುರ್ಗಾ ಮತ್ತು ಗೌರವ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.

Related posts

ಹೊಸಬರ “ಹುಲಿಭೇಟೆ” ಗೆ ಸಾಥ್ ನೀಡಿದ ಗಣ್ಯರು.

Kannada Beatz

*ಶಿವಕಾರ್ತಿಕೇಯನ್ ಹಾಗೂ‌ ಮುರುಗದಾಸ್ ಹೊಸ ಸಿನಿಮಾಗೆ ‘ಮದರಾಸಿ’ ಟೈಟಲ್ ಫಿಕ್ಸ್

Kannada Beatz

ಶ್ರೀನಿ ನಿರ್ದೇಶನದ ಈ ಚಿತ್ರದ ನಾಯಕರಾಗಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್.

Kannada Beatz

Leave a Comment

Share via
Copy link