Kannada Beatz
News

ನವೆಂಬರ್ 21ಕ್ಕೆ ಆಕ್ಷನ್ ಥ್ರಿಲ್ಲರ್ ಮಫ್ತಿ ಪೊಲೀಸ್ ರಿಲೀಸ್

ಅರ್ಜುನ್ ಸರ್ಜಾ-ಐಶ್ವರ್ಯ ರಾಜೇಶ್ ನಟನೆಯ ಮಫ್ತಿ ಪೊಲೀಸ್ ನವೆಂಬರ್ 21ಕ್ಕೆ ಬಿಡುಗಡೆ

ಬಹು ನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಮಫ್ತಿ ಪೊಲೀಸ್ ಬಿಡುಗಡೆ ದಿನಾಂಕ‌ ನಿಗದಿಯಾಗಿದೆ. ಇದೇ ತಿಂಗಳ 21ಕ್ಕೆ ವಿಶ್ವಾದ್ಯಂತ ಚಿತ್ರ ತೆರೆಗೆ ಬರಲಿದೆ. ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಹಾಗೂ ಐಶ್ವರ್ಯ ರಾಜೇಶ್ ಮಫ್ತಿ ಪೊಲೀಸ್ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ದಿನೇಶ್ ಲೆಟ್ಚುಮನನ್ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದೆ. ಜಿ.ಎಸ್. ಆರ್ಟ್ಸ್ ನಿರ್ಮಿಸಿರುವ ಈ ಚಿತ್ರವನ್ನು ನಿರ್ಮಾಪಕ ಜಿ. ಅರುಲ್ ಕುಮಾರ್ ಪ್ರಸ್ತುತಪಡಿಸಿದ್ದಾರೆ.

ಮಫ್ತಿ‌ ಪೊಲೀಸ್ ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಈ ಚಿತ್ರದ ಮೂಲಕ ಕಾನೂನನ್ನು ನ್ಯಾಯದಿಂದ ಮೀರಿಸಬಹುದು. ನ್ಯಾಯವನ್ನು ನೀತಿಯಿಂದ ಮೀರಿಸಬಹುದು. ಆದರೆ ಅಂತಿಮ ಲೆಕ್ಕಾಚಾರದಲ್ಲಿ ನೀತಿ ಮಾತ್ರ ಗೆಲ್ಲುತ್ತದೆ ಎಂಬ ಎಳೆ ಇಟ್ಕೊಂಡು ಸಿನಿಮಾ ಮಾಡಲಾಗಿದೆ‌.

ಅರ್ಜುನ್ ಸರ್ಜಾ, ಐಶ್ವರ್ಯ ರಾಜೇಶ್ ಜೊತೆಗೆ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಅಭಿರಾಮಿ, ರಾಮ್‌ಕುಮಾರ್, ಜಿ.ಕೆ. ರೆಡ್ಡಿ, ಪಿ.ಎಲ್. ತೇನಪ್ಪನ್, ಲೋಗು, ಬರಹಗಾರ-ನಟ ವೇಲಾ ರಾಮಮೂರ್ತಿ, ತಂಗದುರೈ, ಪ್ರಾಂಕ್‌ಸ್ಟರ್ ರಾಹುಲ್, ಒ.ಎ.ಕೆ. ಸುಂದರ್ ಸೇರಿದಂತೆ ಹಲವರು ನಟಿಸಿದ್ದಾರೆ.

ಸರವಣನ್ ಅಭಿಮನ್ಯು ಛಾಯಾಗ್ರಹಣ ನಿರ್ವಹಿಸುತ್ತಿದ್ದು, ಆಶಿವಗನ್ ಸಂಗೀತ ನೀಡಿದ್ದಾರೆ. ಲಾರೆನ್ಸ್ ಕಿಶೋರ್ ಸಂಕಲನ ಚಿತ್ರಕ್ಕಿದೆ.

Related posts

‘ದಿಲ್ಮಾರ್’ ಟ್ರೇಲರ್ ರಿಲೀಸ್..ಹೊಸಬರಿಗೆ ಧ್ರುವ ಸರ್ಜಾ ಸಾಥ್

Kannada Beatz

ಕಿರಣ್ ರಾಜ್ – ಪ್ರಸಿದ್ದ್ ಕಾಂಬಿನೇಶನಲ್ಲಿ ಬರಲಿದೆ ಭರ್ಜರಿ ಆಕ್ಷನ್ ಚಿತ್ರ.

Kannada Beatz

ಫೆಬ್ರವರಿ 10ರಂದು ಬರಲಿದೆ “ಬೆಂಗಳೂರು 69” .

Kannada Beatz

Leave a Comment

Share via
Copy link
Powered by Social Snap