Kannada Beatz
News

ಶರತ್ ಲೋಹಿತಾಶ್ವ ಅಭಿನಯದ ವೇಷಗಳು ಪೋಸ್ಟರ್ ಮತ್ತು ಟೀಸರ್ ಸೋಶಿಯಲ್ ಮೀಡಿಯಾಗಳಲ್ಲಿ ಬಿಡುಗಡೆಯಾಗಿದೆ

ಗ್ರೀನ್ ಟ್ರೀ ಸ್ಟುಡಿಯೋಸ್ ನಿರ್ಮಿಸುತ್ತಿರುವ, ‘ವೇಷಗಳು’ ಸಿನಿಮಾ ತಂಡ ಇದೀಗ ತಮ್ಮ ಸಿನಿಮಾದ ಎರಡನೆಯ ಮುಖ್ಯ ಪಾತ್ರವನ್ನು ಪರಿಚಯಿಸಿದ್ದಾರೆ. ಸಿಂಹಣ್ಣ ಎನ್ನುವ ಪಾತ್ರಧಾರಿಯಾಗಿ ಅಭಿನಯಿಸುತ್ತಿರುವ. ಮೂರು ವಿಭಿನ್ನ ಲುಕ್ ಗಳಲ್ಲಿ ಕಾಣಿಸಿಕೊಂಡಿರುವ ಶರತ್ ಲೋಹಿತಾಶ್ವ ಅವರ ಪಾತ್ರದ ಬಗ್ಗೆ ಜನರಲ್ಲಿ ಕುತೂಹಲ ಮೂಡಿಸುವಂತಿದೆ.


ಕಿಶನ್ ರಾವ್ ದಳವಿಯವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ವೇಷಗಳು’ ಸಿನಿಮಾದ ಮೂಲ ಕಥೆ ರವಿ ಬೆಳಗೆರೆಯವರದ್ದು. ಇದಕ್ಕೂ ಮೊದಲು ಈ ಚಿತ್ರತಂಡ ಬಿಡುಗಡೆ ಮಾಡಿದ್ದ ಶ್ರೀನಗರ ಕಿಟ್ಟಿಯವರು ಜೋಗತಿಯಾಗಿ ಕಾಣಿಸಿಕೊಳ್ಳುವ ವಿಭಿನ್ನ ರೀತಿಯ ಲುಕ್ ರಿವೀಲ್ ಟೀಸರ್ ಕೂಡ ಈಗಾಗಲೇ ಜನಮನವನ್ನು ಸೆಳೆದಿದೆ.
ಇದರೊಂದಿಗೆ ‘ವೇಷಗಳು’ ಚಿತ್ರತಂಡ ಯಾವ ರೀತಿಯಲ್ಲಿ ತಮ್ಮ ಪಾತ್ರಧಾರಿಗಳನ್ನು ತಮ್ಮ ಸಿನಿಮಾದಲ್ಲಿ ನಟಿಸುವಂತೆ ಒಪ್ಪಿಸುತ್ತಿರುವ ಅಪ್ರೋಚ್ ವಿಡಿಯೋಗಳು ತಮ್ಮ ಲಘು ಹಾಸ್ಯದ ಧಾಟಿಯಿಂದಾಗಿ ಜನರ ಮೆಚ್ಚುಗೆ ಗಳಿಸುತ್ತಿದೆ.
ಒಟ್ಟಿನಲ್ಲಿ ಹೊಸಬರ ತಂಡವೊಂದು ತಮ್ಮದೇ ರೀತಿಯಲ್ಲಿ ಜನರನ್ನು ತಲುಪುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಿದ್ದಾರೆಂದು ಹೇಳಬಹುದು.

Related posts

ಈ ವಾರ ತೆರೆಗೆ ಬರುತ್ತಿದೆ ಹೊಸತಂಡದ ಹೊಸಪ್ರಯತ್ನ “ಮಾಂಕ್ ದಿ ಯಂಗ್” .

Kannada Beatz

ಸಿರಿಕನ್ನಡದಲ್ಲಿ “ವಿಜಯ ದಶಮಿ”ಯ ಜೊತೆ “ಅಮ್ಮನ ಮದುವೆ

Kannada Beatz

ವಿಶಿಷ್ಟವಾದ ಪ್ರತಿಭಾನ್ವಿತ ಗಾಯಕಿ ವಾಣಿ ಸತೀಶ್

administrator

Leave a Comment

Share via
Copy link
Powered by Social Snap