Kannada Beatz
Sandalwood

ಸೃಜನ್ ಹರಿಪ್ರಿಯಾ ಮದುವೆ.! ಅರಿಶಿನ ಶಾಸ್ತ್ರದ ಸಂಭ್ರಮದಲ್ಲಿ ಹರಿಪ್ರಿಯಾ..!

ಇದೇನಪ್ಪಾ ಇದು ಟಾಕಿಂಗ್ ಸ್ಟಾರ್ ಸೃಜನ್ ಮತ್ತು ಸ್ಯಾಂಡಲ್ ವುಡ್ ಬ್ಯೂಟಿ ಕ್ವೀನ್ ಹರಿಪ್ರಿಯಾ ಅವರು ವಿವಾಹವಾಗುತ್ತಿದ್ದಾರಾ ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿ ಈಗಾಗಲೇ ಮೂಡಿರಬಹುದು. ಹೌದು ನಿಮ್ಮ ಯೋಚನೆ ಸರಿ ನಟ ಸೃಜನ್ ಮತ್ತು ನಟಿ ಹರಿಪ್ರಿಯಾ ಅವರು ವಿವಾಹವಾಗುತ್ತಿದ್ದಾರೆ ಹಾಗಂದ ಮಾತ್ರಕ್ಕೆ ನಿಜ ಜೀವನದಲ್ಲಿ ಅಲ್ಲ, ಬದಲಾಗಿ ಇಬ್ಬರೂ ಒಟ್ಟಿಗೆ ಅಭಿನಯಿಸುತ್ತಿರುವ ಅವರ ಮುಂದಿನ ಚಿತ್ರವಾದ “ಎಲ್ಲಿದ್ದೆ ಇಲ್ಲಿತನಕ” ದಲ್ಲಿ.

ಹೌದು ನಿಮಗೆಲ್ಲರಿಗೂ ಈಗಾಗಲೇ ತಿಳಿದಿರುವ ಹಾಗೆ ನಟ ಸೃಜನ್ ಮತ್ತು ಹರಿಪ್ರಿಯಾ ಅವರು ನಾಯಕ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಎಲ್ಲಿದ್ದೆ ಇಲ್ಲಿತನಕ ಚಿತ್ರ ಇತ್ತೀಚೆಗಷ್ಟೇ ಮಹೂರ್ತವನ್ನು ಆಚರಿಸಿಕೊಂಡಿತ್ತು.

ಅದ್ಧೂರಿಯಾಗಿ ಮುಹೂರ್ತವನ್ನು ಆಚರಿಸಿಕೊಂಡಿದ್ದ ಎಲ್ಲಿದ್ದೆ ಇಲ್ಲಿತನಕ ಚಿತ್ರದ ಚಿತ್ರೀಕರಣ ಇದೀಗ ಆರಂಭವಾಗಿದ್ದು ನಟಿ ಹರಿಪ್ರಿಯಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಚಿತ್ರೀಕರಣದ ಕೆಲವು ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಆ ಚಿತ್ರದಲ್ಲಿ ನಟಿ ಹರಿಪ್ರಿಯಾ ಅವರು ಅರಿಶಿನ ಶಾಸ್ತ್ರ ಕಾರ್ಯಕ್ರಮದಲ್ಲಿ ಮದುಮಗಳಾಗಿ ಮಿಂಚುತ್ತಿದ್ದಾರೆ.

ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಖತ್ ಸೌಂಡ್ ಮಾಡುತ್ತಿವೆ. ಎಲ್ಲಿದ್ದೆ ಇಲ್ಲಿತನಕ ಚಿತ್ರದಲ್ಲಿ ನಾಯಕ ಆಗಿ ಸೃಜನ್ ಅವರು ಅಭಿನಯಿಸುತ್ತಿದ್ದರೆ, ನಾಯಕಿಯಾಗಿ ಹರಿಪ್ರಿಯಾ ಅವರು ಕಾಣಿಸಿಕೊಳ್ಳಲಿದ್ದಾರೆ. ಶ್ರೀಮತಿ ಗಿರಿಜಾ ಲೋಕೇಶ್ ಅವರು ಅರ್ಪಿಸುತ್ತಿರುವ ಈ ಚಿತ್ರಕ್ಕೆ ಲೋಕೇಶ್ ಪ್ರೊಡಕ್ಷನ್ ಸಂಸ್ಥೆ ಬಂಡವಾಳ ಹೂಡಿದ್ದು ತೇಜಸ್ವಿ ಅವರ ನಿರ್ದೇಶನ ಮತ್ತು ಅರ್ಜುನ್ ಜನ್ಯ ಅವರ ಸಂಗೀತವಿದೆ. ಆದಷ್ಟು ಬೇಗ ಎಲ್ಲಿದ್ದೆ ಇಲ್ಲಿತನಕ ಚಿತ್ರ ತಂಡ ಚಿತ್ರೀಕರಣವನ್ನು ಮುಗಿಸಿ ಅಭಿಮಾನಿಗಳ ಎದುರಿಗೆ ಬರಲಿದೆ.

Related posts

ಅರ್ಧಕ್ಕೆ ನಿಂತಿದ್ದ ಹೊಸಬರ ಚಿತ್ರಕ್ಕೆ ಮರುಜೀವ ಕೊಟ್ಟ ಪವರ್ ಸ್ಟಾರ್..!

administrator

ನಟ ಸಾರ್ವಭೌಮ : ಒಂದು ಶೋನ ಎಲ್ಲಾ ಟಿಕೆಟ್ಸ್ ಗಳನ್ನು ಖರೀದಿಸಿದ ಅಭಿಮಾನಿ..!

administrator

ಸಲಗ ಚಿತ್ರತಂಡದ ಟ್ರೋಲ್ ಪೇಜ್ ಸಭೆ..! ಸುದ್ದಿ ಓದಿ.

administrator

Leave a Comment

Share via
Copy link
Powered by Social Snap