Kannada Beatz
Sandalwood

ಕಿಚ್ಚ-ದಚ್ಚು ಕಡೆಯಿಂದ ನಾಳೆ ಅವರ ಅಭಿಮಾನಿಗಳಿಗೆ ಸಂಕ್ರಾಂತಿ ಗಿಫ್ಟ್..!

ದೇಶವೆಲ್ಲ ನಾಳೆ ಸಂಕ್ರಾಂತಿ ಹಬ್ಬ ಆಚರಣೆಯಲ್ಲಿ ಬಿಸಿ ಆಗುವ ಯೋಜನೆಯಲ್ಲಿ ದರ್ಶನ್ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳು ಮಾತ್ರ ಯಜಮಾನ ಮತ್ತು ಪೈಲ್ವಾನ್ ಚಿತ್ರಗಳ ಗುಂಗಿನಲ್ಲಿದ್ದಾರೆ. ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಯಜಮಾನ ಮತ್ತು ಪೈಲ್ವಾನ್ ಚಿತ್ರಗಳೆರಡೂ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ಧವಾಗಿವೆ.

ಈ ಎರಡೂ ಚಿತ್ರಗಳ ಮೋಶನ್ ಪೋಸ್ಟರ್ ಮತ್ತು ಟೀಸರ್ ಗಳು ಈ ಹಿಂದೆ ಬಿಡುಗಡೆಗೊಂಡು ಸಖತ್ ಸೌಂಡ್ ಮಾಡಿದ್ದವು. ಇನ್ನು ಇದೇ ಯಜಮಾನ ಮತ್ತು ಪೈಲ್ವಾನ್ ಚಿತ್ರ ತಂಡಗಳು ನಾಳೆ ಸಂಕ್ರಾಂತಿ ಹಬ್ಬದಂದು ದರ್ಶನ್ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಮತ್ತೊಂದು ಗಿಫ್ಟ್ ಕೊಡಲು ರೆಡಿಯಾಗಿವೆ.

ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಮೊದಲ ಹಾಡು “ಶಿವನಂದಿ” ಯನ್ನು ನಾಳೆ ಬೆಳಗ್ಗೆ 11.04 ಕ್ಕೆ ಡಿ ಬೀಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಿದ್ದು ದರ್ಶನ್ ಅಭಿಮಾನಿಗಳಿಗೆ ಸಂಕ್ರಾಂತಿ ಗಿಫ್ಟ್ ಸಿಗಲಿದೆ.

ಇನ್ನು ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ ಚಿತ್ರದ ಕುಸ್ತಿ ಟೀಸರ್ ಸಹ ನಾಳೆ ಸಂಜೆ 4.45 ಕ್ಕೆ ಆರ್ ಆರ್ ಆರ್ ಮೋಷನ್ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.

ಇನ್ನು ನಾಳೆ ಈ ಎರಡು ಚಿತ್ರಗಳ ಹಾಡು ಮತ್ತು ಟೀಸರ್ ಬಿಡುಗಡೆ ಯಾಗುತ್ತಿರುವುದರಿಂದ ಯೂಟ್ಯೂಬ್ ಶೇಕ್ ಆಗುವುದಂತೂ ಕನ್ಫರ್ಮ್. ದರ್ಶನ್ ಮತ್ತು ಕಿಚ್ಚ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಗಳಿಗೆ ನಾಳೆ ಬರಲಿದ್ದು ಸಂಕ್ರಾಂತಿ ಹಬ್ಬದಂದೇ ಈ ಹಾಡು ಮತ್ತು ಟೀಸರ್ ಬಿಡುಗಡೆಯಾಗುತ್ತಿರುವುದು ದೊಡ್ಡ ಗಿಫ್ಟ್ ಅಂತಾನೇ ಹೇಳಬಹುದು.

Related posts

ನಟ ಸಾರ್ವಭೌಮ ದಲ್ಲಿ ಹಿಂದೆಂದೂ ಕಂಡಿರದ ಅಪ್ಪು..!

administrator

ಅರ್ಧಕ್ಕೆ ನಿಂತಿದ್ದ ಹೊಸಬರ ಚಿತ್ರಕ್ಕೆ ಮರುಜೀವ ಕೊಟ್ಟ ಪವರ್ ಸ್ಟಾರ್..!

administrator

ರಕ್ಷಿತಾ ಪ್ರೇಮ್ ಸಹೋದರನ ಜೊತೆ ರೌಡಿ ಬೇಬಿ ಸಾಯಿಪಲ್ಲವಿ ರೊಮ್ಯಾನ್ಸ್..! ಸುದ್ದಿ ಓದಿ

administrator

Leave a Comment

Share via
Copy link
Powered by Social Snap