HomeNewsಸತ್ಯ ಪ್ರಕಾಶ್ ನಿರ್ಮಾಣದ ಚಿತ್ರದಲ್ಲಿ ಮಿಂಚಲಿದ್ದಾರೆ ನವನಟ ಮಿಲಿಂದ್, ನಟಿ ರಚೆಲ್ ಡೇವಿಡ್

ಸತ್ಯ ಪ್ರಕಾಶ್ ನಿರ್ಮಾಣದ ಚಿತ್ರದಲ್ಲಿ ಮಿಂಚಲಿದ್ದಾರೆ ನವನಟ ಮಿಲಿಂದ್, ನಟಿ ರಚೆಲ್ ಡೇವಿಡ್

ರಾಮಾ ರಾಮಾ ರೇ, ಒಂದಲ್ಲ ಎರಡಲ್ಲ ಸಿನಿಮಾ ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್ ನಿರ್ದೇಶನದ ಜೊತೆಗೆ ಸಿನಿಮಾ ನಿರ್ಮಾಣ, ವಿತರಣೆಯಲ್ಲೂ ಬ್ಯುಸಿಯಾಗಿರೋದು ಗೊತ್ತೇ ಇದೆ. ಸದಾ ಹೊಸ ಪ್ರತಿಭೆಗಳನ್ನು ಗುರುತಿಸುವಲ್ಲಿ ಮುಂಚೂಣಿಯಲ್ಲಿರುವ ಸತ್ಯ ಪ್ರಕಾಶ್ ಮತ್ತೊಬ್ಬ ನವನಟನಿಗೆ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅವರೇ ಮಿಲಿಂದ್. 2018ರಲ್ಲಿ ತೆರೆಕಂಡ ಅನಂತ್ ನಾಗ್ ಅಭಿನಯದ ವೀಕೆಂಡ್ ಸಿನಿಮಾದಲ್ಲಿ ನಟಿಸಿದ್ದ ಮಿಲಿಂದ್ ಗಿದು ಎರಡನೇ ಸಿನಿಮಾ. ಈ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಪಾತ್ರಕ್ಕೆ ತಯಾರಿಯೂ ಭರ್ಜರಿಯಾಗಿ ನಡೆಯುತ್ತಿದೆ. ಮಿಲಿಂದ್ ಜೋಡಿಯಾಗಿ ಲವ್ ಮಾಕ್ಟೈಲ್ ಖ್ಯಾತಿಯ ರಚೆಲ್ ಡೇವಿಡ್ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಸತ್ಯ ಪ್ರಕಾಶ್ ನಿರ್ದೇಶನದಲ್ಲಿ ತೆರೆಕಂಡ ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾ ಬಿಡುಗಡೆಯಾಗಿ ಉತ್ತಮ ವಿಮರ್ಶೆ ಪಡೆದುಕೊಂಡಿತ್ತು. ಈ ಚಿತ್ರವನ್ನು ನಿರ್ದೇಶನದ ಜೊತೆ ನಿರ್ಮಾಪಕ ಮಂಜುನಾಥ್ ಜೊತೆಗೂಡಿ ಸತ್ಯ ಹಾಗೂ ಮಯೂರ ಪಿಕ್ಚರ್ಸ್ ಬ್ಯಾನರ್ ನಡಿ ನಿರ್ಮಾಣ ಕೂಡ ಮಾಡಿದ್ದರು. ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು, ಈ ಚಿತ್ರಕ್ಕೂ ಮಯೂರ ಪಿಕ್ಚರ್ಸ್ ಡಿ.ಮಂಜುನಾಥ್ ಕೈ ಜೋಡಿಸಿದ್ದಾರೆ.
ನೂತನ ಚಿತ್ರದ ಟೈಟಲ್ ಹಾಗೂ ನಾಯಕ ಮಿಲಿಂದ್, ನಾಯಕಿ ರಚೆಲ್ ಡೇವಿಡ್ ಪಾತ್ರದ ಬಗ್ಗೆ ಸದ್ಯದಲ್ಲೇ ಮಾಹಿತಿ ಹಂಚಿಕೊಳ್ಳಲಿದ್ದಾರೆ.

ದೀಪಕ್ ಮಧುವನಹಳ್ಳಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಈ ಚಿತ್ರಕ್ಕೆ ಸತ್ಯ ಪ್ರಕಾಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಭಾಗ್ಯರಾಜ್, ರಾಜು ಜೇಮ್ಸ್ ಬಾಂಡ್, ಕಳ್ಬೆಟ್ಟದ ದರೋಡೆಕೋರರು ಸಿನಿಮಾ ನಿರ್ದೇಶಿಸಿರುವ ದೀಪಕ್ ಮಧುವನಹಳ್ಳಿ ನಾಲ್ಕನೇ ಸಿನಿಮಾವಿದು. ರೋಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ, ಲವಿತ್ ಕ್ಯಾಮೆರಾ ವರ್ಕ್,ಅಜಯ್ ಸಂಕಲನ ಚಿತ್ರಕ್ಕಿರಲಿದೆ.

Must Read

spot_img
Share via
Copy link
Powered by Social Snap